ಬ್ರೇಕಿಂಗ್ ನ್ಯೂಸ್
04-03-21 03:42 pm source: BOLDSKY ಡಾಕ್ಟರ್ಸ್ ನೋಟ್
ಕೊರೊನಾ ವೈರಸ್ ಮಣಿಸುವ ನಿಟ್ಟಿನಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಿದ ಸರ್ಕಾರ ಇದೀಗ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನೋಂದಣಿ ಮಾರ್ಚ್ 1ರಿಂದ ಪ್ರಾರಂಭಿಸಿದೆ.
ಈ ಲಸಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲೂ ಪಡೆಯಬಹುದಾಗಿದೆ. ಈ ಲಸಿಕೆ ಪಡೆಯಲು ಮೊದಲೇ ನೋಂದಣಿ ಮಾಡಬೇಕಾಗಿದ್ದು ಬೆಂಗಳೂರಿನಲ್ಲಿ ಈ ಕೆಳಕಂಡ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಲಭ್ಯವಿದೆ.
ಕೊರೊನಾ ಲಸಿಕೆ ಸಿಗುವ ಆಸ್ಪತ್ರೆಗಳು
* ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ ಹ್ಯಾಮ್ ರಸ್ತೆ
* ಅಪೋಲೋ
* ಕಿಮ್ಸ್
* ನಾರಾಯಣ ಹೃದಯಾಲಯ
* ಸಾಗರ ಆಸ್ಪತ್ರೆ ಜಯನಗರ
* ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್
* ವೈದೇಹಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್
* ಹೆಲ್ತ್‌ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿ.
* ಪಿಡಿ ಹಿಂದೂಜಾ ಸಿಂಧಿ ಆಸ್ಪತ್ರೆ
* ಫೋರ್ಟಿಸ್ ಆಸ್ಪತ್ರೆ ಲಿಮಿಟೆಡ್
* ಹೊಸ್ಮಟ್ ಆಸ್ಪತ್ರೆ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ ಜಯನಗರ
* ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ-HSR ಲೇಔಟ್
* PAN ನಾಗರಭಾವಿ ಆಸ್ಪತ್ರೆ ಫ್ರೈ. ಲಿ.
ಖಾಸಗಿ ಆಸ್ಪತ್ರೆಯಲ್ಲಿ ಕೊರೊನ ಲಸಿಕೆ ದರ
ನೀವು ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವುದಾದರೆ ಯಾವುದೇ ದುಡ್ಡು ಖರ್ಚಿಲ್ಲ, ಅದೇ ಖಾಸಗಿ ಆಸ್ಪತ್ರೆಹಯಲ್ಲಿ ಪಡೆಯುವುದಾದರೆ ರೂ. 250 ಪಾವತಿಸಬೇಕಾಗುವುದು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ನೀವು ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದಾಗ OTP ಬರುತ್ತದೆ, ಆಗ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ, ನಿಮ್ಮ ಮನೆಯ 60 ವರ್ಷ ಮೇಲ್ಪಟ್ಟ ಸದಸ್ಯರ ಅಕೌಂಟ್ ಕೂಡ ಕ್ರಿಯೇಟ್ ಮಾಡಬಹುದು.
ಎಲ್ಲಿ ನೋಂದಣಿ ಮಾಡಬೇಕು?
Co-Win app, ಆರೋಗ್ಯ ಸೇತು app ಅಥವಾ cowin.gov.in ಸೈಟ್‌ಗೆ ಲಾಗಿನ್ ಆಗಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆ ನೀಡಬೇಕು. ನಿಮ್ಮ ಅಕೌಂಟ್ ಕ್ರಿಯೇಟ್ ಆದಾಗ OTP ಬರುತ್ತದೆ.
ನಂತರ ನಿಮ್ಮ ಹೆಸರು, ವಯಸ್ಸು, ಲಿಂಗ ನಮೂದಿಸಿ, ನಂತರ ಗುರುತಿನ ದಾಖಲೆ ನೀಡಿ.
45 ವರ್ಷ ಮೇಲ್ಪಟ್ಟವರಾದರೆ ವೈದ್ಯರು ನಿಮ್ಮ ಅನಾರೋಗ್ಯದ ಕುರಿತು ನೀಡಿರುವ ಸರ್ಟಿಫಿಕೇಟ್ ಫ್ರೂಫ್ ಆಗಿ ನೀಡಬೇಕು. ನಂತರ ದಿನಾಂಕ ಹಾಗೂ ಸೆಂಟರ್ (ಕೇಂದ್ರ) ಆಯ್ಕೆ ಮಾಡಿ.
ಒಂದು ಮೊಬೈಲ್ ಸಂಖ್ಯೆಯಿಂದ 4 ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು. ಇನ್ನು ಟೆಕ್ ಬಗ್ಗೆ ಅಷ್ಟು ಅರಿವು ಇಲ್ಲದವರು ಏನು ಮಾಡಬಹುದು? ಅವರು ಸಮೀಪದ ಸೇವಾ ಕೇಂದ್ರಕ್ಕೆ ಹೋಗಿ ರಿಜಿಸ್ಟರ್ ಮಾಡಬಹುದು. ಅಲ್ಲದೆ 1507 ಕಾಲ್ ಸೆಂಟರ್ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
This News Article Is A Copy Of BOLDSKY
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am