ಬ್ರೇಕಿಂಗ್ ನ್ಯೂಸ್
27-02-21 05:31 pm source: BOLDSKY ಡಾಕ್ಟರ್ಸ್ ನೋಟ್
65 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ವ್ಯಕ್ತಿಗಳು ಎರಡು ಬ್ಲಾಕ್ಗಳನ್ನು ನಡೆಯಲು ಅಥವಾ ಮೆಟ್ಟಿಲುಗಳ ಹತ್ತಲು ಕಷ್ಟಪಡುತ್ತಿದ್ದಾರೆ. ಚಲನಶೀಲತೆ ಅಂಗವೈಕಲ್ಯವು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಅವರ ಸ್ವತಂತ್ರ್ಯ ಜೀವನದ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ದೈಹಿಕವಾಗಿ ಮಾತ್ರವಲ್ಲ, ಚಲನಶೀಲತೆಯ ಸಮಸ್ಯೆಗಳು ಅವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಜೊತೆಗೆ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತವೆ.
ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳು ವಾರಕ್ಕೆ 150 ನಿಮಿಷಗಳ ಸಾಮಾನ್ಯದಿಂದ ತೀವ್ರವಾದ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡುತ್ತವೆ. ಆದರೆ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ತಮ್ಮ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಈ ದೈಹಿಕ ಚಟುವಟಿಕೆಯ ಮಟ್ಟವನ್ನು ಪೂರೈಸಲು ಸಾಧ್ಯವಾಗದಿರಬಹುದು. ಶಾಪಿಂಗ್ ಅಥವಾ ಕ್ಯಾಶುಯಲ್ ವಾಕ್ ನಂತಹ ದೈಹಿಕ ಚಟುವಟಿಕೆಯನ್ನು ಮಾಡುವುದು ವಯಸ್ಸಾದ ಮಹಿಳೆಯರಲ್ಲಿ ಚಲನಶೀಲತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವು ಸೂಚಿಸುತ್ತದೆ. ಈ ಲೇಖನದಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ಹಿರಿಯರ ಚಲನಶೀಲತೆಯನ್ನು ಸುಧಾರಿಸಲು ಸಣ್ಣ ವ್ಯಾಯಾಮಗಳು ಏಕೆ ಮುಖ್ಯ?:
ಯುಸಿ ಸ್ಯಾನ್ ಡಿಯಾಗೋದಲ್ಲಿನ ಹರ್ಬರ್ಟ್ ವರ್ಥೈಮ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಅಂಡ್ ಹ್ಯೂಮನ್ ಲಾಂಗೆವಿಟಿ ಸೈನ್ಸಸ್ ನ ಸಂಶೋಧಕರು ಒಂದು ಅಧ್ಯಯನವನ್ನು ಮಾಡಿದ್ದಾರೆ. ಅದನ್ನು ಜಮಾ ನೆಟ್ವರ್ಕ್ ಓಪನ್ನ ಫೆಬ್ರವರಿ ಆನ್ಲೈನ್ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ತಮ್ಮ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಈ ದೈಹಿಕ ಚಟುವಟಿಕೆಯ ಮಟ್ಟವನ್ನು ಪೂರೈಸಲು ಸಾಧ್ಯವಾಗದಿರಬಹುದು. ಆದರೆ ಶಾಪಿಂಗ್ ಅಥವಾ ಕ್ಯಾಶುಯಲ್ ವಾಕ್ ನಂತಹ ದೈಹಿಕ ಚಟುವಟಿಕೆಯನ್ನು ಮಾಡುವುದು ವಯಸ್ಸಾದ ಮಹಿಳೆಯರಲ್ಲಿ ಚಲನಶೀಲತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಕಡಿಮೆ ಸಾಮರ್ಥ್ಯದ ದೈಹಿಕ ಚಟುವಟಿಕೆಯು, ಬೊಜ್ಜು ಹೊಂದಿರುವ ಮತ್ತು ಹೊಂದಿಲ್ಲದ ಮಹಿಳೆಯರಲ್ಲಿ ಚಲನಶೀಲತೆಯ ಅಂಗವೈಕಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ, 30 ಕ್ಕಿಂತ ಕಡಿಮೆ ಇರುವ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿರುವ ಮಹಿಳೆಯರಿಗೆ ಇದರಿಂದ ಬಲವಾದ ಪ್ರಯೋಜನವಿದೆ.
ವಯಸ್ಸಾದಂತೆ, ಕಡಿಮೆಯಿಂದ ತೀವ್ರವಾದ ದೈಹಿಕ ಚಟುವಟಿಕೆಯನ್ನು ನಿರ್ವಹಿಸುವುದು ಹೆಚ್ಚು ಕಷ್ಟಕರವಾಗಬಹುದು. ವಯಸ್ಸಾದ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಲಘು ದೈಹಿಕ ಚಟುವಟಿಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಈ ಸಂಶೋಧನೆಗಳು ಸೂಚಿಸುತ್ತವೆ. ಇದು ವಯಸ್ಸಾದಂತೆ ಮಹಿಳೆಯರಿಗೆ ಚಲನಶೀಲತೆ ಮತ್ತು ಸ್ವತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಯಸ್ಸಾದ ವ್ಯಕ್ತಿಗಳಲ್ಲಿ ಚಲನಶೀಲತೆಯನ್ನು ಸುಧಾರಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ವ್ಯಾಯಾಮಗಳು:
ವಯಸ್ಸಾದವರಲ್ಲಿ ನೈಸರ್ಗಿಕ ವಯಸ್ಸಾದ ಪ್ರಕ್ರಿಯೆಗಳಾದ ಗಾಯಗಳು ಮತ್ತು ಗಂಟು ಸಮಸ್ಯೆಗಳಿಗೆ ಹೆಚ್ಚು ಒಳಗಾಗುವುದನ್ನು ತಡೆಯಲು ಸಾಧ್ಯವಿಲ್ಲವಾದರೂ, ನಿಷ್ಕ್ರಿಯ ಜೀವನಶೈಲಿಯು ಬೊಜ್ಜು, ಹೃದ್ರೋಗ ಮತ್ತು ಖಿನ್ನತೆಯಂತಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಜೀವನಶೈಲಿ ಮಾರ್ಪಾಡುಗಳ ಜೊತೆಗೆ ವ್ಯಾಯಾಮ, ಸಣ್ಣ ಪ್ರಮಾಣದ ದೈಹಿಕ ಚಟುವಟಿಕೆಯು ಹಿರಿಯರಿಗೆ ಚಲನಶೀಲತೆಯನ್ನು ಸುಧಾರಿಸಲು ಮತ್ತು ಹೆಚ್ಚು ಸಾಮಾಜಿಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಸ್ನಾಯುಗಳ ಕಾರ್ಯಕ್ಷಮತೆಯನ್ನು ಕಾಪಾಡುವಲ್ಲಿ, ಚಲನಶೀಲತೆಯನ್ನು ಉತ್ತೇಜಿಸುವಲ್ಲಿ ಮತ್ತು ಅಪಾಯವನ್ನು ಕಡಿಮೆ ಮಾಡುವಲ್ಲಿ ನಿಯಮಿತ ದೈಹಿಕ ಚಟುವಟಿಕೆಯ ಪಾತ್ರವನ್ನು ವಿವಿಧ ಅಧ್ಯಯನಗಳು ಬೆಂಬಲಿಸುತ್ತವೆ. ವಿಶೇಷವಾಗಿ, ಸಮತೋಲನ ಮತ್ತು ಸಮನ್ವಯ, ಹಿಗ್ಗಿಸುವಿಕೆ, ಶಕ್ತಿ ತರಬೇತಿ ಮತ್ತು ಹೃದಯವನ್ನು ಸಂಯೋಜಿಸುವ ದೈಹಿಕ ಚಟುವಟಿಕೆಗಳು ವಿಶೇಷವಾಗಿ ವಯಸ್ಸಾದವರಿಗೆ ಪ್ರಯೋಜನಕಾರಿಯಾಗಬಹುದು.

ಹಿರಿಯರು ಆರಿಸಿಕೊಳ್ಳಬಹುದಾದ ಕೆಲವು ಸುರಕ್ಷಿತ ಮತ್ತು ಪರಿಣಾಮಕಾರಿ ವ್ಯಾಯಾಮಗಳು ಇಲ್ಲಿವೆ:
* ವಾಕಿಂಗ್ / ಹೈಕಿಂಗ್
* ಯೋಗ
* ತೈ ಚಿ
* ಬಾಲ್ ರೂಂ ಡ್ಯಾನ್ಸ್
* ಈಜು
* ಸೈಕ್ಲಿಂಗ್
* ಲಘು ಜಾಗಿಂಗ್
This News Article Is A Copy Of BOLDSKY
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
28-10-26 09:28 pm
HK News Desk
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ...
27-10-26 10:52 pm
28-10-26 10:42 pm
HK News Desk
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am
ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಹಣಕಾಸಿನ...
28-10-26 10:25 am
ಆನ್ಲೈನ್ ಬೆಟ್ಟಿಂಗ್ ದಂಧೆ ; ಚಿತ್ರದುರ್ಗದ ಕಾಂಗ್ರೆಸ...
27-10-26 09:32 pm