ಬ್ರೇಕಿಂಗ್ ನ್ಯೂಸ್
11-08-22 10:08 pm Source: Vijaykarnataka ಡಾಕ್ಟರ್ಸ್ ನೋಟ್
ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ಬೇಕಾದ ವಿಟಮಿನ್, ಮಿನರಲ್ಸ್ ಎಲ್ಲವನ್ನೂ ನೀಡುತ್ತವೆ. ದೇಹದ ಎಲ್ಲಾ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಯುವಂತೆ ಮಾಡಲು ವಿವಿಧ ರೀತಿಯ ಹಣ್ಣುಗಳು ಸಹಾಯ ಮಾಡುತ್ತವೆ. ಉದಾಹರಣೆಗೆ ಸೇಬು, ಮೂಸಂಬಿ, ಬಾಳೆಹಣ್ಣು, ಕಿವಿ, ಕಿತ್ತಳೆ ಇತ್ಯಾದಿ. ಅದೇ ರೀತಿ ಕೆಲವು ಹಣ್ಣುಗಳ ಬೀಜಗಳೂ ಸಹ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಅವುಗಳಲ್ಲಿ ಕಲ್ಲಂಗಡಿ ಹಣ್ಣಿನ ಬೀಜ ಬೆಸ್ಟ್ ಉದಾಹರಣೆಯಾಗಿದೆ.
ಆದರೆ ಕೆಲವು ಹಣ್ಣುಗಳ ಬೀಜಗಳು ದೇಹಕ್ಕೆ ವಿಷವಾಗಿ ಪರಿಣಮಿಸುತ್ತವೆ. ಅವುಗಳಲ್ಲಿ ಸೇಬು ಹಣ್ಣಿನ ಬೀಜಗಳು ಕೂಡ ಒಂದು. ಅರೇ ಸೇಬು ಹಣ್ಣಿನಿಂದ ಆರೋಗ್ಯಕ್ಕೆ ಅಷ್ಟೆಲ್ಲಾ ಉಪಯೋಗವಿದ್ದರೂ ಅವುಗಳ ಬೀಜವೇಕೆ ವಿಷ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಸೇಬು ಹಣ್ಣು
ಪ್ರತಿದಿನ ಒಂದು ಸೇಬುವನ್ನು ತಿನ್ನುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು ಎನ್ನುತ್ತಾರೆ. ದೇಹದ ತೂಕ ಇಳಿಕೆಗೆ, ಹೃದಯದ ಆರೋಗ್ಯಕ್ಕೆ, ಮಧುಮೇಹಿಗಳಿಗೆ ಅಷ್ಟೇ ಯಾಕೆ ಕ್ಯಾನ್ಸರ್ ರೋಗಿಗಳಿಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇಬು ಹಣ್ಣು ಸಹಾಯ ಮಾಡುತ್ತದೆ.
ಸೇಬುವಿನಲ್ಲಿ ವಿಟಮಿನ್ ಸಿ, ಕ್ಯಾಲೋರಿ, ಕಾರ್ಬೋಹೈಡ್ರೇಟ್ಸ್, ವಿಟಮಿನ್ ಕೆ, ಪೊಟ್ಯಾಷಿಯಂ ಸೇರಿದಂತೆ ಅನೇಕ ಜೀವಸತ್ವಗಳು ಅಡಕವಾಗಿವೆ.
ಸೇಬು ಬೀಜ ವಿಷಕಾರಿ
ಸೇಬು ಹಣ್ಣಿನಿಂದ ಎಷ್ಟು ಪ್ರಯೋಜನಗಳಿದೆಯೋ ಅಷ್ಟೇ ವಿಷಕಾರಿ ಅದರ ಬೀಜಗಳು., ಸೇಬು ಬೀಜಗಳು ಅಮಿಗ್ಡಾಲಿನ್ ಎಂಬ ಸಸ್ಯ ಸಂಯುಕ್ತವನ್ನು ಹೊಂದಿರುತ್ತವೆ, ಇದು ಸೈನೈಡ್ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ, ಇದು ದೇಹದಿಂದ ಸೇವಿಸಿದಾಗ ಹೈಡ್ರೋಜನ್ ಸೈನೈಡ್ (HCN) ಆಗಿ ಬದಲಾಗುತ್ತದೆ. ಇದು ವಿಷಕಾರಿ ಪರಿಣಾಮವನ್ನು ಬೀರುತ್ತದೆ.
ಅಮಿಗ್ಡಾಲಿನ್ ಬೀಜಗಳ ರಾಸಾಯನಿಕ ರಕ್ಷಣೆಯ ಒಂದು ಭಾಗವಾಗಿದೆ. ಹೀಗಾಗಿ ಸೇಬು ಬೀಜದ ಸೇವನೆ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.
ಸೇಬು ಬೀಜ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ
ಯಾವ ಪ್ರಮಾಣದಲ್ಲಿ ತಿಂದರೆ ಸೇಬು ಬೀಜ ಅಪಾಯಕಾರಿ
ಪ್ರತಿ ಲೀಟರ್ ರಕ್ತಕ್ಕೆ 0.5 ರಿಂದ 3.0 ಮಿಲಿಗ್ರಾಂಗಳ ನಡುವಿನ ಯಾವುದೇ ಪ್ರಮಾಣದ ಸೈನೈಡ್ ಮಾನವ ದೇಹಕ್ಕೆ ಹಾನಿಕಾರಕವಾಗಿದೆ ಎನ್ನುತ್ತದೆ ಅಧ್ಯಯನ. ಇದರರ್ಥ ನೀವು ಅವುಗಳ ಬೀಜಗಳಲ್ಲಿನ ಸೈನೈಡ್‌ನಿಂದ ಕೆಟ್ಟ ಪರಿಣಾಮ ಬೀರಲು ಸುಮಾರು 40 ಬೀಜಗಳು ಬೇಕಾಗುತ್ತವೆ. ಹೀಗಾಗಿ ಆಕಸ್ಮಾತ್ ಸೇಬು ಬೀಜ ತಿಂದರೆ ಏನಾಗುವುದೋ ಎನ್ನುವ ಭಯ ಬೇಡ.
ಇವೆಲ್ಲಾ ದೇಹದಲ್ಲಿ ವಿಷಕಾರಿ ಅಂಶ ಸೇರಿದೆ ಎನ್ನುವ ಲಕ್ಷಣಗಳು
ತಜ್ಞ ವೈದ್ಯರು ಹೇಳುವ ಪ್ರಕಾರ ಅತಿಯಾದ ಪ್ರಮಾಣದಲ್ಲಿ ಸೈನೈಡ್ ಅಂಶವನ್ನು ಸೇವನೆ ಮಾಡಿದರೆ ಸಾವು ಸಂಭವಿಸಬಹುದು. ಹೀಗಾಗಿ ಯಾವುದೇ ರೀತಿಯ ಸೈನೈಡ್ ಅಂಶವನ್ನು ಸೇವನೆ ಮಾಡಿದರೂ ಕೂಡ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
Do You Know Apple Seeds Are Toxic.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:13 pm
Mangalore Correspondent
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm