ಬ್ರೇಕಿಂಗ್ ನ್ಯೂಸ್
25-06-22 08:40 pm Source: Vijayakarnataka ಡಾಕ್ಟರ್ಸ್ ನೋಟ್
ಚಳಿಗಾಲವಿರಲಿ, ಬೇಸಿಗೆ ಇರಲಿ ಇಲ್ಲಾಂದ್ರೆ ಮಳೆಗಾಲವೇ ಇರಲಿ ಆದರೆ ಎಲ್ಲಾ ಕಾಲದಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣುಗಳೆಂದರೆ ಒಂದು ಬಾಳೆಹಣ್ಣು ಇನ್ನೊಂದು ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು ಎಂದು ಹೇಳಬಹುದು. ಅದರಲ್ಲೂ ಮಾರ್ಕೆಟ್ ನಲ್ಲಿ ಹಣ್ಣು-ಹಣ್ಣಾದ ಪರಂಗಿ ಹಣ್ಣುಗಳನ್ನು ಕಂಡಾಗ ಬಾಯಲ್ಲಿ ನೀರೂರುತ್ತದೆ!
ಏಕೆಂದರೆ ಅದರ ರುಚಿ ಅಷ್ಟರ ಮಟ್ಟಿಗೆ ನಮಗೆ ಹಿಡಿಸಿರುತ್ತದೆ. ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಕೂಡ, ಈ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು, ಎಂದು ವೈದ್ಯರು ಕೂಡ ಹೇಳುತ್ತಾರೆ. ಉದಾಹರಣೆಗೆ ನೋಡುವುದಾದರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುವುದು, ಕ್ಯಾನ್ಸರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವುದು, ರಕ್ತದೊತ್ತಡ ಹೆಚ್ಚಾಗದಂತೆ ನೋಡಿ ಕೊಳ್ಳುವುದು, ಕಣ್ಣುಗಳ ದೃಷ್ಟಿ ಸಮಸ್ಯೆ ನಿವಾರಣೆ ಮಾಡುವುದು ಮುಂತಾದವುಗಳು.
ಇನ್ನೂ ಮುಖ್ಯವಾದ ಸಂಗತಿ ಏನೆಂದರೆ ಕೇವಲ ಈ ಹಣ್ಣು ಮಾತ್ರವಲ್ಲ, ಇದರ ಕಾಯಿ, ಪರಂಗಿ ಮರದ ಎಲೆಗಳು ಕೂಡ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಮುಖ್ಯವಾಗಿ ಡೆಂಗ್ಯೂ ಜ್ವರದ ವಿರುದ್ಧ ಹೋರಾಡಿ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ, ಈ ಪರಂಗಿ ಹಣ್ಣು ಸೇವನೆ ಮಾಡುವುದರಿಂದ, ಪರಿಹಾರ ಕಾಣಬಹುದಾಗಿದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ಹಣ್ಣನ್ನು, ಕೆಲವು ಜನರ ಮಾತ್ರ ಸೇವಿಸುವ ಹಾಗಿಲ್ಲ! ಹಾಗಾದರೆ ಯಾರವರು? ಯಾಕೆ ಈ ಹಣ್ಣಿನಿಂದ ಅವರು ದೂರ ಉಳಿಯಬೇಕು? ನೋಡೋಣ ಬನ್ನಿ...
ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು
ಗರ್ಭಿಣಿಯರು ಈ ಹಣ್ಣಿನಿಂದ ದೂರವಿರಬೇಕು
ಗರ್ಭಪಾತಕ್ಕೆ ಕಾರಣವಾಗಬಹುದು!
ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು!
ಪರಂಗಿ ಹಣ್ಣಿನ ಸಿಪ್ಪೆ ತೆಗೆಯುವಾದ, ಅದರಿಂದ ಬರುವ ಸುಣೆ ಅಥವಾ ಒಂದು ರೀತಿ ಹಾಲಿನ ರೀತಿಯ ದ್ರಾವಣವು, ಕೆಲವರಿಗೆ ಅಲರ್ಜಿಯ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು, ಈ ಹಣ್ಣನ್ನು ಸೇವಿಸುವ ಮುಂಚೆ ವೈದ್ಯರನ್ನು ಕೇಳಿ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ಇನ್ನು ಕೆಲವರಿಗೆ, ಈ ಹಣ್ಣು ಸೇವನೆ ಮಾಡುವುದರಿಂದಾಗಿ, ಚರ್ಮಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆ.
ಸಕ್ಕರೆ ಕಾಯಿಲೆ ಇದ್ದವರು...
ಒಂದು ವೇಳೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ನಿಯಂತ್ರಣಕ್ಕೆ ಸಿಗದೇ ಹೋಗಿದ್ದರೆ ಅಂತಹವರು ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು. ಇನ್ನು ಕೆಲವೊಮ್ಮೆ ಹೆಚ್ಚಿನ ಪ್ರಮಾಣದ ಪರಂಗಿ ಹಣ್ಣು ಸೇವನೆ ಮಾಡುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಅತ್ಯಂತ ವೇಗವಾಗಿ ತಗ್ಗಿ, ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮಧುಮೇಹ ಸಮಸ್ಯೆ ಇರುವವರು ಜನರು ಈ ಹಣ್ಣಿನ ಸೇವನೆ ಯಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು.
ಹೈಬಿಪಿ, ಹೃದಯದ ಸಮಸ್ಯೆಯ ಇದ್ದವರು...
ಒಂದು ವೇಳೆ ನೀವು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಅಥವಾ ಹೀಗಾ ಗಲೇ ನಿಮಗೆ ಹೈಬಿಪಿ ಸಮಸ್ಯೆ ಇದ್ದರೆ, ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದರೆ ಇದರಿಂ ದಾಗಿ ಹೃದಯ ಬಡಿತದಲ್ಲಿ ಮತ್ತಷ್ಟು ಏರುಪೇರು ಆಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ
People Who Suffering Kidney Stone, Uncontrolled Diabetes Patient Must Avoid Papaya .
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm