ಬ್ರೇಕಿಂಗ್ ನ್ಯೂಸ್
02-10-21 05:17 pm Headline Karnataka News Network ಸಿನಿಮಾ
ಹೈದರಾಬಾದ್, ಅ.2 : ಟಾಲಿವುಡ್ ಸ್ಟಾರ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆಯುತ್ತಿರುವುದು ಖಚಿತವಾಗಿದೆ. ಇಂದು ಇನ್‍ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಮಂತಾ, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಈ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ, ವಿಚ್ಛೇದನದ ವದಂತಿ ಬಗ್ಗೆ ಈ ಜೋಡಿ ಇದುವರೆಗೆ ತುಟಿ ಬಿಚ್ಚಿರಲಿಲ್ಲ. ಇದೀಗ ಅಂತೆ-ಕಂತೆಗಳಿಗೆ ತೆರೆ ಬಿದ್ದಿದ್ದು, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಸಮಂತಾ ಹೇಳಿದ್ದಾರೆ.



ಇಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಸಮಂತಾ, ಸಾಕಷ್ಟು ಸಮಾಲೋಚನೆ ನಂತರ ನಾನು ಹಾಗೂ ಚೈ ಸತಿ-ಪತಿಯ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಅಭಿಮಾನಿಗಳು, ಆಪ್ತರು ಹಾಗೂ ಮಾಧ್ಯಮದವರಲ್ಲಿ ಮನವಿ ಮಾಡಿರುವ ಸಮಂತಾ, ಇಂತಹ ಕಷ್ಟದ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಿ, ನಮ್ಮ ಖಾಸಗಿತನ ಗೌರವಿಸಿ. ನಾವು ಬೇರೆಯಾಗಲೇಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.


10 ವರ್ಷಗಳ ಪ್ರೀತಿ 4ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಮುರಿದು ಬಿದ್ದಿದೆ. 2 ತಿಂಗಳುಗಳ ಹಿಂದೆಯೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನೊಂದಿಗೆ ಇದ್ದ ಅಕ್ಕಿನೇನಿ ಫ್ಯಾಮಿಲಿ ಹೆಸರನ್ನು ಕೈ ಬಿಟ್ಟಿದ್ದರು.
ಅಕ್ಕಿನೇನಿ ಸರ್ ನೇಮ್ ತೆಗೆದು ಹಾಕಿದಾಗಿನಿಂದ ತಾರಾ ಜೋಡಿ ದೂರವಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಟಾಲಿವುಡ್ ನ ಬಲ್ಲ ಮೂಲಗಳು ಹೌದು ದೂರವಾಗುತ್ತಿದ್ದಾರೆ ಅಂತಲೇ ಎನ್ನುತ್ತಿದ್ದವು. ಆದರೆ ಸಮಂತಾ ಆಗಲಿ, ನಾಗ ಚೈತನ್ಯ ಆಗಲಿ, ಮಾವ ನಾಗಾರ್ಜುನ ಆಗಲಿ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.


ನಟ ನಾಗಾರ್ಜುನ ಬರ್ತ್ ಡೇ ಪಾರ್ಟಿಯಲ್ಲಿ ಸಮಂತಾ ಕುಟುಂಬದ ಜೊತೆ ಕಾಣಿಸಿಕೊಳ್ಳಲಿಲ್ಲ. ಆದರೆ ನಾಗ ಚೈತನ್ಯರ ಹೊಸ ಸಿನಿಮಾಗೆ ಸ್ಯಾಮ್ ವಿಷ್ ಮಾಡಿದ್ದರು.
ಇನ್ನು ಸ್ಯಾಮ್ ಹಾಗೂ ಚೈಯ್ ದೂರವಾಗಲು ಕಾರಣವೇನು ಎಂಬ ಪ್ರಶ್ನೆಗೆ ಆಪ್ತ ವಲಯದಿಂದ ಹೊರ ಬಿದ್ದಿರುವ ಸುದ್ದಿ ಎಲ್ಲರ ಹುಬ್ಬೇರಿಸಿದೆ. ನಾಗ ಚೈತನ್ಯ ಮದುವೆ ಬಳಿಕ ಸಮಂತಾರ ಬಗ್ಗೆ ಹೆಚ್ಚು ಪೊಸೆಸಿವ್ ಆಗಿದ್ದರಂತೆ.
ಸಮಂತಾ ಮದುವೆಯ ಬಳಿಕವೂ ಸಿನಿಮಾ, ಹಾಟ್ ಫೋಟೋಶೂಟ್, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದರು. ಆದರೆ ಸಮಂತಾ ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ, ಸದಾ ಫೋಟೋ ಹಾಕುವುದು ನಾಗ ಚೈತನ್ಯಗೆ ಇಷ್ಟವಾಗುತ್ತಿರಲಿಲ್ಲವಂತೆ.
Samantha Ruth Prabhu and Naga Chaitanya, who had been featuring in the headlines for months for their alleged split, decided to make an official announcement about their separation on Saturday afternoon. The stars, who were married for over four years, announced their separation in a joint statement. "To all our well-wishers. After much deliberation and thought Chay and I have decided to to part ways as husband and wife to pursue our own paths. We are fortunate to have a friendship of over a decade that was the very core of our relationship which we believe will always hold a special bond between us," read an excerpt from the statement.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am