ಬ್ರೇಕಿಂಗ್ ನ್ಯೂಸ್
24-04-21 06:22 pm Source: FILMIBEAT ಸಿನಿಮಾ
ಕನ್ನಡ ಕಿರುತೆರೆಯ ಖ್ಯಾತ ನಟ ಪವನ್ ಕುಮಾರ್ ಕೋವಿಡ್ ನಿಂದಾಗಿ ತಮ್ಮ ಭಾವ ಹಾಗೂ ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಸ್ಪತ್ರೆ, ಬೆಡ್, ಆಮ್ಲಜನಕ ಸಿಗದೆ ಕೇವಲ ಎರಡು ದಿನಗಳ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ಎಷ್ಟು ಪರದಾಡಿದರೂ ಆಸ್ಪತ್ರೆ, ಚಿಕಿತ್ಸೆ ಸಿಗದೆ ನರಳಾಡಿದ ಭಯಾನಕ ಸನ್ನಿವೇಶವನ್ನು ಪವನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಸರ್ಕಾರ ಜನಗಳನ್ನು ಸಾಮೂಹಿಕವಾಗಿ ಕೊಲೆ ಮಾಡುತ್ತಿದೆ' ಎಂದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪವನ್ ವಿಡಿಯೋವನ್ನು ಶೇರ್ ಮಾಡಿ, ಹೃದಯವಿದ್ರಾವಕ ಮಾತುಗಳನ್ನು ಕೇಳಿ ಎಂದು ಹೇಳಿದ್ದಾರೆ. ಮುಂದೆ ಓದಿ..
ಸಿದ್ದರಾಮಯ್ಯ ಪ್ರತಿಕ್ರಿಯೆ
'ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ @BJP4Karnataka ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ' ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಯ ಭಯಾನಕ ಸ್ಥಿತಿ ಬಿಚ್ಚಿಟ್ಟ ಪವನ್
ನಟ ಪವನ್ ವಿಡಿಯೋ ಮೂಲಕ ಮಾತನಾಡಿ, 'ನಾನು ಕಣ್ಣಾರೆ ನೋಡಿದ್ದೇನೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ಆಮ್ಲಜನಕವಿಲ್ಲ. ಆಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ದಾರೆ. ಸ್ವತಃ ನಾನೇ ಭಾವನಿಗೆ ಆಮ್ಲಜನಕ ಅರೆಂಜ್ ಮಾಡಲು ರಾತ್ರಿಯೆಲ್ಲ ಬೀದಿಗಳಲ್ಲಿ ಅಲೆದಿದ್ದೇನೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ರೆಮ್ಡಿಸಿವರ್ ಅನ್ನು ರಫ್ತು ಮಾಡುತ್ತಿದೆ
'ಜನರ ಜೀವ ಉಳಿಸುವ ರೆಮ್ಡಿಸಿವರ್ ಅನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಾ ಕೂತಿದ್ದಾನೆ. ಹೌದು ಈಗ ನಿಲ್ಲಿಸಿದ್ದಾರೆ. ಆದರೂ ನಮಗೆ ಸಿಗುತ್ತಾ ಇಲ್ಲ. ಇನ್ನೂ ಎಷ್ಟು ದಿನ ಒದ್ದಾಡಬೇಕು, ಎಷ್ಟು ಜನ ಸಾಯಬೇಕು. ಈ ಹಿಂದೆ ಕೊರೊನಾ ಬಂದಾಗ ನಾವು ತಯಾರಾಗಿರಲಿಲ್ಲ, ಓಕೆ ಆದರೆ ಈಗ ಏನಾಗಿದೆ ಸರ್ಕಾರಕ್ಕೆ' ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಹೀಗೆ ಆಗುತ್ತಿರಲಿಲ್ಲ
'ಈ ಹಿಂದೆ 10,000 ಬೆಡ್‌ಗಳನ್ನು ಹಾಕಿದ್ದರಲ್ಲ ಎಲ್ಲಿ ಹೋಯಿತು ಅದು. ಸರ್ಕಾರ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಈಗ ಹೀಗೆ ಆಗುತ್ತಿರಲಿಲ್ಲ. ನಮ್ಮ ಭಾವ ಬದುಕಿರುತ್ತಿದ್ದರು. ಒಂದೇ ದಿನ ಆರು ಸಾವುಗಳನ್ನು ನಾನು ನೋಡಿದೆ. ಮಾನಸಿಕವಾಗಿ ಜರ್ಜರಿತವಾಗಿ ಹೋಗಿದ್ದೇನೆ' ಎಂದಿದ್ದಾರೆ.
This News Article Is A Copy Of FILMIBEAT
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm