ಬ್ರೇಕಿಂಗ್ ನ್ಯೂಸ್
03-04-21 10:16 am Source: FILMIBEAT ಸಿನಿಮಾ
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 10 ವರ್ಷಗಳ ಸಿನಿಮಾ ಪಯಣದಲ್ಲಿ ಸಮಂತಾ ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ. ಈಗಲೂ ಬೇಡಿಯನ್ನು ಕುಗ್ಗಿಸಿಕೊಳ್ಳದ ಸಮಂತಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮದುವೆ ಬಳಿಕವೂ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಸ್ಯಾಮ್ ಈ ಹಿಂದೆ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ನಟ-ನಟಿಯರು ಸಿನಿಮಾ ರಿಜೆಕ್ಟ್ ಮಾಡುವುದು ಸಹಜ. ಅನೇಕ ಕಾರಣಗಳಿಂದ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿ ಬಳಿಕ ಅಷ್ಟೆ ನೊಂದುಕೊಂಡ ಉದಾಹರಣೆಗಳು ಇವೆ. ಸಮಂತಾ ಕೂಡ ಸಾಕಷ್ಟು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಅಕ್ಕಿನೇನಿ ಸೊಸೆ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಆಗಿವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.
ಕಾದಲ್ ಸಿನಿಮಾ
ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಬಂದ ಕಾದಲ್ ಸಿನಿಮಾಗೆ ಮೊದಲು ಆಯ್ಕೆ ಸಮಂತಾ ಅಕ್ಕಿನೇನಿ ಆಗಿದ್ದರು. ಆದರೆ ಸಮಂತಾ ಈ ಸಿನಿಮಾವನ್ನು ತಿರಸ್ಕರಿಸುತ್ತಾರೆ. ಗೌತಮ್ ಕಾರ್ತಿಕ್, ಅರವಿಂದ್ ಸ್ವಾಮಿ, ಮತ್ತು ಅರ್ಜುನ್ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಮೀನುಗಾರರ ಜೀವನದ ಸುತ್ತ ಸುತ್ತುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಎವಡು
ಟಾಲಿವುಡ್ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಟಿಸಿರುವ ಎವಡು ಸಿನಿಮಾಗೂ ಮೊದಲ ಆಯ್ಕೆ ಸಮಂತಾ ಆಗಿದ್ದರು. ಆದರೆ ಸ್ಯಾಮ್ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಡೇಟ್ ಹೊಂದಾಣಿಕೆಯ ಕಾರಣ ಈ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ. ಈ ಸಿನಿಮಾ ಕೂಡ ಭರ್ಜರಿ ಸಕ್ಸಸ್ ಕಾಣುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಚಿತ್ರದಲ್ಲಿ ನಾಯಕಿಯರಾಗಿ ಶ್ರುತಿ ಹಾಸನ್, ಆಮಿ ಜಾಕ್ಸನ್ ಮತ್ತು ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ.
ವಿಕ್ರಮ್ ಐ ಸಿನಿಮಾ
ಸಮಂತಾ ರಿಜೆಕ್ಟ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಐ ಸಿನಿಮಾ ಕೂಡ ಇದೆ. ಸಮಂತಾ ತಿರಸ್ಕರಿಸಿದ ಪ್ರತಿಷ್ಠಿತ ಸಿನಿಮಾ ಇದಾಗಿದೆ. ವಿಭಿನ್ನ ಪಾತ್ರದ ಮೂಲಕ ವಿಕ್ರಮ್ ಚಿತ್ರಪ್ರೇಕ್ಷಕರ ಮನ ಗೆದ್ದಿದ್ದರು. ಶಂಕರ್ ನಿರ್ದೇಶನದಲ್ಲಿ ಬಂದ ಐ ಸಿನಿಮಾ ಬಾಕ್ಸ್ ಆಫೀಸ್ ಭರ್ಜರಿ ಕಲೆಕ್ಷನ್ ಮಾಡಿತ್ತು. ಸ್ಯಾಮ್ ಮಾಡಬೇಕಿದ್ದ ಪಾತ್ರವನ್ನು ನಟಿ ಆಮಿ ಜಾಕ್ಸನ್ ನಿರ್ವಹಿಸಿದ್ದಾರೆ.

ನಿನ್ನು ಕೋರಿ
ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿರುವ ನಿನ್ನು ಕೋರಿ ಸಿನಿಮಾಗೂ ಮೊದಲ ಆಯ್ಕೆ ಸಮಂತಾ ಆಗಿದ್ದರು. ಬಳಿಕ ಸಮಂತಾ ಮಾಡಬೇಕಿದ್ದ ಪಾತ್ರವನ್ನು ನಿವೇತಾ ಥಾಮಸ್ ನಿಭಾಯಿಸಿದ್ದಾರೆ. ಲವ್ ಸ್ಟೋರಿ ಸಿನಿಮಾ ಇಗಿದ್ದು, ಚಿತ್ರ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇನ್ನು ಸಾಕಷ್ಟು ಸಿನಿಮಾಗಳು ಸಮಂತಾ ರಿಜೆಕ್ಟ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿದೆ. ಕನ್ನಡದ ಯು ಟರ್ನ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ನಟಿಸಿದ್ದ ಸಮಂತಾಗೆ ಹಿಂದಿಯಲ್ಲೂ ನಟಿಸುವ ಅವಕಾಶ ಒಲಿದು ಬಂದಿತ್ತು. ಆದರೆ ಸಮಂತಾ ಹಿಂದಿ ಯು ಟರ್ನ್ ನಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ ಎನ್ನುವ ಮಾಹಿತಿ ಕೂಡ ತಿಳಿದುಬಂದಿದೆ.
This News Article Is A Copy Of FILMIBEAT
30-10-25 07:25 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
30-10-25 08:06 pm
Mangalore Correspondent
ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm