ಬ್ರೇಕಿಂಗ್ ನ್ಯೂಸ್
22-07-23 02:21 pm Source: Filmy Beat ಸಿನಿಮಾ
ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಓಟಿಟಿಯಲ್ಲೂ ಪ್ರತಿ ವಾರ ಹೊಚ್ಚ ಹೊಸ ಸಿನಿಮಾಗಳು, ವೆಬ್ ಸೀರಿಸ್‌ಗಳು ಜನರನ್ನು ರಂಜಿಸುತ್ತಾ ಬರ್ತಿದೆ. ಈ ವಾರ ಸಾಕಷ್ಟು ಕಂಟೆಂಟ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಬಾಲಿವುಡ್ ಸಿನಿಮಾಗಳು ಈ ಲಿಸ್ಟ್‌ನಲ್ಲಿದೆ. ಅಮೇಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್, ಅಹಾದಲ್ಲಿ ಯಾವ್ಯಾವ ಸಿನಿಮಾ, ವೆಬ್ ಸೀರಿಸ್ ಬಂದಿದೆ ನೋಡೋಣ ಬನ್ನಿ.
ಜಿಯೋ ಸಿನಿಮಾ:
1. 'ಟ್ರಯಲ್ ಪಿರಿಯಡ್'
ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಲೀಡ್ ರೋಲ್‌ನಲ್ಲಿ ನಟಿಸಿರುವ 'ಟ್ರಯಲ್ ಪೀರಿಯಡ್' ಸಿನಿಮಾ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮದುವೆ ನಂತರ ಜೆನಿಲಿಯಾ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಆಗೊಮ್ಮೆ ಈಗೊಮ್ಮೆ ಒಳ್ಳೆ ಅವಕಾಶಗಳು ಸಿಕ್ಕಾಗ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅಲೆಯಾ ಸೇನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿಯೋ ಸಿನಿಮಾ ಓಟಿಟಿ ಜಗತ್ತಿನಲ್ಲಿ ನಿಧಾನವಾಗಿ ಸದ್ದು ಮಾಡ್ತಿದೆ. ಹಾಗಾಗಿ ಒಳ್ಳೆ ಒಳ್ಳೆ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿದೆ.
2. ಚಾಂದ್ ಲೋ (ಗುಜರಾತ್ ಸಿನಿಮಾ)
3. ಸ್ಪೆಷಲ್ ಊಪ್ಸ್: ಲಯನೆಸ್ (ಇಂಗ್ಲೀಷ್ ಸೀರಿಸ್)
ಅಮೆಜಾನ್ ಪ್ರೈಮ್ ವಿಡಿಯೋ:
1. 'ಬವಾಲ್'
ಬಾಲಿವುಡ್ ಸ್ಟಾರ್‌ಗಳ ಸಿನಿಮಾಗಳೇ ನೇರವಾಗಿ ಓಟಿಟಿಗೆ ಬರ್ತಿವೆ. ಈ ವಾರ ವರುಣ್ ಧವನ್, ಜಾನ್ವಿ ಕಪೂರ್ ನಟನೆಯ 'ಬವಾಲ್' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರಕ್ಕೆ ನಿತೀಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ. ಸಾಜಿದ್ ನಡಿಯಾವಾಲಾ, ಅಶ್ವಿನಿ ಅಯ್ಯರ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅಶ್ವಿನಿ ಅಯ್ಯರ್ ತಿವಾರಿ ಕಥೆ ಬರೆದಿದ್ದು ಮಿತೇಶ್ ಮಿರ್ಚಂದನಿ ಛಾಯಾಗ್ರಹಣ ಚಿತ್ರಕ್ಕಿದೆ.
2. 'ಅನ್‌ಸ್ಟಾಪಬಲ್'- ತೆಲುಗು ಸಿನಿಮಾ
3. 'ಗೈ ರಿಚಿಸ್ ದಿ ಕೊವನೆಂಟ್'- ಹಾಲಿವುಡ್ ಸಿನಿಮಾ
ನೆಟ್‌ಫ್ಲಿಕ್ಸ್:
1. 'ಅಶ್ವಿನ್ಸ್'
ತರುಣ್ ತೇಜ್ ನಿರ್ದೇಶನದ ತಮಿಳು ಹಾರರ್ ಸಿನಿಮಾ 'ಅಶ್ವಿನ್ಸ್' ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವಸಂತರವಿ, ವಿಮಲಾರಾಮನ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಜೂನ್ 23ಕ್ಕೆ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಒಂದು ಪುರಾತನ ಬಂಗಲೆಯ ರಹಸ್ಯ ತಿಳಿದುಕೊಳ್ಳಲು ಹೊರಟ ಕೆಲ ಯೂಟ್ಯೂಬರ್‌ಗಳು ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
2. 'ಸ್ವೀಟ್ ಮಂಗೋಲಿಯಾನ್ಸ್ ಸೀಜನ್ -3'
3. 'ಸೂಪಾ ಟೀಮ್ 4'
4. 'ದಿ ಡೀಪೆಸ್ಟ್ ಬ್ರೀತ್'
5. 'ಡೆ ಕ್ಲೋನ್ಡ್ ಟೈರಾನ್'
ಜೀ 5 ಓಟಿಟಿ:
1. ಮೌರ್ಹ್ (ಪಂಜಾಬಿ ಸಿನಿಮಾ)
2. ಲಯನ್ಸ್ ಗೇಟ್ ಪ್ಲೇ
3. ಕಿಲ್ ಬಿಲ್ ವಾಲ್ಯೂಮ್ 1 ಮತ್ತು 2
4. ಕಿಡ್ ಇನ್ ಕಿಂಗ್ ಅರ್ಥ್ ಕೋರ್ಟ್
OTT this week movies and shows on Netflix, Jio cinema, Prime video and more
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 11:08 pm
Mangalore Correspondent
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
ಕೊಲ್ಲೂರು ; ನದಿಯಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ...
30-08-25 09:16 pm
Talapady Accident, Mangalore, Ksrtc Bus: ತಲಪಾ...
30-08-25 04:23 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm