ಬ್ರೇಕಿಂಗ್ ನ್ಯೂಸ್
15-06-23 02:31 pm Source: Filmy Beat ಸಿನಿಮಾ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆ ನೋಡಿದರೂ ಒಂದೇ ಚಿತ್ರದ ಜಪ. ಯಾವ ಸಿನಿಮಾ ವೆಬ್ ತಾಣ, ಫೇಸ್‌ಬುಕ್, ಟ್ವಿಟರ್ ನೋಡಿದ್ರೂ ಬರೀ ಆದಿಪುರುಷ್ ಕುರಿತ ಸುದ್ದಿಗಳೇ ಕಂಡು ಬರುತ್ತಿವೆ. ಸಿನಿ ರಸಿಕರೂ ಸಹ ಆದಿಪುರುಷ್ ಚಿತ್ರದ ಬಗ್ಗೆಯೇ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಮೂಲತಃ ಹಿಂದಿ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ತೆರೆಗೆ ಬರಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಹಿಂದೆ ತಾನ್ಹಾಜಿ ರೀತಿಯ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ಓಂ ರಾವತ್ ನಿರ್ದೇಶನ ಈ ಚಿತ್ರಕ್ಕಿದ್ದು, ಸಾಹೋ ಹಾಗೂ ರಾಧೆ ಶ್ಯಾಮ್ ಚಿತ್ರಗಳ ಮೂಲಕ ಸೋಲನ್ನು ಕಂಡಿರುವ ಪ್ರಭಾಸ್ ಈ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡುವ ನಿರೀಕ್ಷೆ ಹೆಚ್ಚಿದೆ.
ಇನ್ನು ಮೊದಲಿಗೆ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಹೀನಾಯವಾಗಿ ಟ್ರೋಲ್ ಆಗಿದ್ದ ಆದಿಪುರುಷ್ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆಯಾದ ಬಳಿಕ ಸಿನಿ ರಸಿಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡು ನಿರೀಕ್ಷೆ ಹುಟ್ಟುಹಾಕಲು ಆರಂಭಿಸಿತು. ಚಿತ್ರ ನಾಳೆ ( ಜೂನ್ 16 ) ವಿಶ್ವದಾದ್ಯಂತ ಎಲ್ಲಾ ಐದು ಭಾಷೆಗಳಲ್ಲಿಯೂ ತೆರೆಗೆ ಬರುತ್ತಿದ್ದು, ಟಿಕೆಟ್ ಬುಕಿಂಗ್ ಕಳೆದ ಭಾನುವಾರದಿಂದಲೇ ಆರಂಭಗೊಂಡಿತ್ತು.

ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಅವತರಣಿಕೆಗಳ ಹೆಚ್ಚೆಚ್ಚು ಶೋಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮೊದಲಿಗೆ ಕನ್ನಡಕ್ಕಿಂತ ಮುನ್ನ ತೆಲುಗು ಹಾಗೂ ಹಿಂದಿ ಭಾಷೆಯ ಬುಕಿಂಗ್ ತೆರೆಯಲಾಗಿತ್ತು. ಬಳಿಕ ಈಗ ಕನ್ನಡ ಅವತರಣಿಕೆಯ ಬುಕಿಂಗ್ ಸಹ ಆರಂಭಗೊಂಡಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಆದಿಪುರುಷ್ ದಾಖಲೆ ಬರೆದಿದೆ.
ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರ ಎಂಬ ದಾಖಲೆಯನ್ನು ಆದಿಪುರುಷ್ ಬರೆದಿದೆ. ಈ ಮೂಲಕ ಆದಿಪುರುಷ್ ಪಠಾಣ್ ದಾಖಲೆಯನ್ನು ಮುರಿದುಹಾಕಿದೆ. ಚಿತ್ರ ನಾಳೆ ಬಿಡುಗಡೆಯಾಗಲಿದ್ದು, ಇಂದು ( ಜೂನ್ 15 ) ಬೆಳಗ್ಗೆಗೆ 893 ಶೋಗಳು ಬಿಡುಗಡೆಗೆ ದಿನದಂದು ಆಯೊಜನೆಗೊಂಡಿವೆ. ಈ ಸಂಖ್ಯೆ ನಾಳೆ ಮತ್ತಷ್ಟು ಹೆಚ್ಚಾಗಲಿದ್ದು, ಈ ವರ್ಷ ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..
1. ಆದಿಪುರುಷ್ - 893* ಪ್ರದರ್ಶನಗಳು ( ಇನ್ನೂ ಹೆಚ್ಚಿನ ಪ್ರದರ್ಶನಗಳು ಸೇರ್ಪಡೆಗೊಳ್ಳಲಿವೆ )
2. ಪಠಾಣ್ - 821 ಪ್ರದರ್ಶನಗಳು
3. ವಾರಿಸು - 757 ಪ್ರದರ್ಶನಗಳು
4. ಪೊನ್ನಿಯಿನ್ ಸೆಲ್ವನ್ 2 - 690 ಪ್ರದರ್ಶನಗಳು
5. ಕ್ರಾಂತಿ - 680 ಪ್ರದರ್ಶನಗಳು
6. ಕಬ್ಜ - 597 ಪ್ರದರ್ಶನಗಳು
7. ತುನಿವು - 568 ಪ್ರದರ್ಶನಗಳು
8. ಸ್ಪೈಡರ್ ಮ್ಯಾನ್ - 516 ಪ್ರದರ್ಶನಗಳು
9. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ - 507 ಪ್ರದರ್ಶನಗಳು
10. ತೂ ಜೂತಿ ಮೈನ್ ಮಕ್ಕರ್ - 496 ಪ್ರದರ್ಶನಗಳು
Adipurush becomes the movie which got most shows on release day in Bengaluru in 2023.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm