ಬ್ರೇಕಿಂಗ್ ನ್ಯೂಸ್
23-01-23 01:33 pm Source: Hindustantimes ಸಿನಿಮಾ
ಜನವರಿ 26, ಅರ್ಲಿ ಮಾರ್ನಿಂಗ್ ಶೋ ನೋಡಲು ದಚ್ಚು ಫ್ಯಾನ್ಸ್ ಬಹಳ ಥ್ರಿಲ್ ಆಗಿದ್ದಾರೆ. ತಾವು ಬುಕ್ಕಿಂಗ್ ಮಾಡಿರುವ ಟಿಕೆಟ್‌ಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಕ್ರಾಂತಿ ಚಿತ್ರಕ್ಕೆ 300-600 ರೂಪಾಯಿ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದೆ. 'ರಾಬರ್ಟ್' ಸಿನಿಮಾ ನಂತರ ದರ್ಶನ್ ಅಭಿನಯದ ಹೊಸ ಸಿನಿಮಾ ಬಿಡುಗಡೆ ಆಗಿಲ್ಲವಾದ್ದರಿಂದ ಅಭಿಮಾನಿಗಳು ಕಾತರದಿಂದ 'ಕ್ರಾಂತಿ' ನೋಡಲು ಕಾಯುತ್ತಿದ್ದಾರೆ. ಜನವರಿ 26, ಗಣರಾಜ್ಯೋತ್ಸವ ಕೂಡಾ ಆಗಿರುವುದರಿಂದ ಆ ದಿನ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.

'ಕ್ರಾಂತಿ' ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಚಿತ್ರತಂಡವಂತೂ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಕೆಲಸ ಶುರು ಮಾಡಿದೆ. ದರ್ಶನ್, ಬಹುತೇಕ ಎಲ್ಲಾ ವಾಹಿನಿಗಳು ಬಹುತೇಕ ಯೂಟ್ಯೂಬ್ ಚಾನೆಲ್‌ಗಳಿಗೆ ಇಂಟರ್‌ವ್ಯೂ ಕೊಡುತ್ತಾ ಬಂದಿದ್ದಾರೆ. ಜನವರಿ 22, ಭಾನುವಾರದಿಂದ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು ಸಿನಿಮಾ ಮೊದಲ ದಿನವೇ ಭಾರೀ ಸದ್ದು ಮಾಡುವ ಸುಳಿವು ಸಿಕ್ಕಿದೆ. ಏಕೆಂದರೆ ಮೊದಲ ದಿನವೇ 3 ಗಂಟೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗಿದೆ. ಸಂಜೆವರೆಗೂ 1 ಲಕ್ಷದವರೆಗೂ ಟಿಕೆಟ್ ಬುಕ್ಕಿಂಗ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಬಹುತೇಕ ಕಡೆ ಮಾರ್ನಿಂಗ್ ಶೋಗಳು ಸಂಪೂರ್ಣ ಬುಕ್ಕಿಂಗ್ ಆಗಿವೆ. ಒಟ್ಟಾಗಿ ಮೊದಲ ದಿನವೇ 15 ಗಂಟೆಗಳಲ್ಲಿ 2 ಕೋಟಿ ರೂಪಾಯಿಯಷ್ಟು ಅಡ್ವಾನ್ಸ್ ಬುಕ್ಕಿಂಗ್ ಆಗಿದೆ.

ಜನವರಿ 26, ಮೊದಲ ಶೋ ಬೆಳಗ್ಗೆ 5.50 ಹಾಗೂ ಕೆಲವೆಡೆ 6 ಗಂಟೆಗೆ ಆರಂಭವಾಗಲಿದೆ. ಬೆಂಗಳೂರಿನ ಕೆ.ಜಿ. ರಸ್ತೆಯ ಅನುಪಮಾ ಚಿತ್ರಮಂದಿರ ಹಾಗೂ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರ ಸೇರಿದಂತೆ ಕೆಲವೆಡೆ ಈಗಾಗಲೇ ಬೆಳಗಿನ ಶೋ ಸಂಪೂರ್ಣ ಬುಕ್ ಆಗಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಕ್ರಾಂತಿ ಮೊದಲ ದಿನ ಎಷ್ಟು ಸದ್ದು ಮಾಡುವ ಎಲ್ಲಾ ಮುನ್ಸೂಚನೆ ದೊರೆತಿದೆ. 'ಕ್ರಾಂತಿ'ಗೆ ದೊರೆತ ಓಪನಿಂಗ್ ನೋಡಿ ಚಿತ್ರತಂಡ ಕೂಡಾ ಥ್ರಿಲ್ ಆಗಿದೆ. ಅಭಿಮಾನಿಗಳು ಕ್ರಾಂತಿ ಚಿತ್ರದ ಪ್ರೀಮಿಯರ್ ಶೋಗೆ ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಪ್ರೀಮಿಯರ್ ಶೋ ಏರ್ಪಡಿಸಿಲ್ಲ. ಜನವರಿ 26, ಅರ್ಲಿ ಮಾರ್ನಿಂಗ್ ಶೋ ನೋಡಲು ದಚ್ಚು ಫ್ಯಾನ್ಸ್ ಬಹಳ ಥ್ರಿಲ್ ಆಗಿದ್ದಾರೆ. ತಾವು ಬುಕ್ಕಿಂಗ್ ಮಾಡಿರುವ ಟಿಕೆಟ್‌ಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಕ್ರಾಂತಿ ಚಿತ್ರಕ್ಕೆ 300-600 ರೂಪಾಯಿ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.
'ಕ್ರಾಂತಿ' ಚಿತ್ರವನ್ನು ಮೀಡಿಯಾ ಹೌಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ. ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಿದ್ದಾರೆ. ವಿ. ಹರಿಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹರಿಕೃಷ್ಣ ಅವರದ್ದೇ ಸಂಗೀತ ಇದೆ. ರವಿಚಂದ್ರನ್ ಹಾಗೂ ಸುಮಲತಾ ಕೂಡಾ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪುಷ್ಪವತಿ ಹಾಡಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ರೀಲ್ಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಯಶಸ್ಸಿಗೆ ಚಿತ್ರತಂಡ ಮಾತ್ರವಲ್ಲದೆ ದರ್ಶನ್ ಅಭಿಮಾನಿಗಳು ಕೂಡಾ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ.
Darshan starrer Kranti Movie Advance Booking.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 11:13 pm
HK News Desk
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm