ಬ್ರೇಕಿಂಗ್ ನ್ಯೂಸ್
30-12-22 01:31 pm Source: Vijayakarnataka ಸಿನಿಮಾ
'ರಾಕಿಂಗ್ ಸ್ಟಾರ್' ಯಶ್ ಎಂದರೆ ಈಗ ದೇಶಾದ್ಯಂತ ಸಖತ್ ಕ್ರೇಜ್ ಇದೆ. 'ಕೆಜಿಎಫ್: ಚಾಪ್ಟರ್ 2' ಸಿನಿಮಾದಿಂದ ಅವರ ಖ್ಯಾತಿ ಜಾಸ್ತಿ ಆಗಿದೆ. ಅವರ ಮುಂದಿನ ಸಿನಿಮಾ ಯಾವಾಗ ಘೋಷಣೆ ಆಗಲಿದೆ ಎಂದೇ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಯಶ್ ಮಾತ್ರ ಆ ಬಗ್ಗೆ ಯಾವುದೇ ಸಣ್ಣ ಸುಳಿವನ್ನೂ ನೀಡಿಲ್ಲ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 'ಕೆಜಿಎಫ್ 3' ಟ್ರೆಂಡ್ ಆಗಿದೆ. ಹಾಗಾದರೆ, ಯಶ್ 'ಕೆಜಿಎಫ್ 3' ಸಿನಿಮಾ ಮಾಡ್ತಾರಾ? ಇಲ್ಲ ಇಲ್ಲ.. ಈಗ 'ಕೆಜಿಎಫ್ 3' ಟ್ರೆಂಡಿಂಗ್ ಆಗೋದಕ್ಕೆ ಕಾರಣ, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ!
ಪಾಂಡ್ಯ ಸಹೋದರರ ಜೊತೆ ರಾಕಿ ಭಾಯ್
ಹೌದು, ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು 'ರಾಕಿ ಭಾಯ್' ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಯಶ್ ಜತೆಗೆ ಇರುವ ಫೋಟೋಗಳನ್ನು ಹಾರ್ದಿಕ್ ಪಾಂಡ್ಯ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳಿಗೆ ಸಾವಿರಾರು ಲೈಕ್ಸ್ ಸಿಕ್ಕಿವೆ. ಅಂದಹಾಗೆ, ಈ ಫೋಟೋ ಎಲ್ಲಿ ಕ್ಲಿಕ್ ಮಾಡಿರುವುದು? ಈ ಭೇಟಿಯ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ಬಹಿರಂಗಗೊಂಡಿಲ್ಲ. ಒಟ್ಟಿನಲ್ಲಿ ಈ ಫೋಟೋಗೆ ಸಖತ್ ಲೈಕ್ಸ್ ಅಂತೂ ಸಿಗುತ್ತಿವೆ. ಇನ್ನು, ಈ ಫೋಟೋಗಳನ್ನು ಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ 'ಕೆಜಿಎಫ್ 3' ಎಂದು ಕ್ಯಾಪ್ಷನ್ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ 'ಕೆಜಿಎಫ್ 3' ಟ್ರೆಂಡಿಂಗ್ ಆಗಲು ಅದೇ ಕಾರಣವಾಗಿದೆ.

'ಜನರಿಗೆ ಶಿಕ್ಷಣ ನೀಡುತ್ತಿಲ್ಲ, ರಂಜಿಸುತ್ತಿದ್ದೇನೆ' ಎಂದಿದ್ದ ಯಶ್
'ಐಟಿ ಉದ್ಯಮ, ಫ್ಯಾಷನ್ ಸೇರಿ ಸಾಕಷ್ಟು ವಿಚಾರದಲ್ಲಿ ಕರ್ನಾಟಕ ಮುಂದುವರೆದಿದೆ. ಹಾಗೆಯೇ ನಮ್ಮ ಚಿತ್ರರಂಗದಲ್ಲಿಯೂ ದೊಡ್ಡ ಯಶಸ್ಸು ಬೇಕು. ಸಿನಿಮಾ ಮೂಲಕ ನಾನು ಜನರಿಗೆ ಶಿಕ್ಷಣ ನೀಡುತ್ತಿಲ್ಲ, ರಂಜಿಸುತ್ತಿದ್ದೇನೆ. ನಮ್ಮ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ದಿಗ್ಗಜರಿದ್ದಾರೆ. ಈಗ ಇರುವ ಸ್ಥಿತಿ ನೋಡಿದರೆ ಚಿತ್ರರಂಗ ಇನ್ನೂ ಬೆಳೆಯುತ್ತದೆ ಎಂಬ ನಂಬಿಕೆಯಿದೆ. 'ಕೆಜಿಎಫ್' ಸಿನಿಮಾದ ಖ್ಯಾತಿಯು ಎಲ್ಲ ಚಿತ್ರರಂಗವು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿರೋದು ಹೆಮ್ಮೆಯ ವಿಷಯ. ಎಲ್ಲರಲ್ಲಿಯೂ ರಾಕಿ ಇದ್ದಾನೆ ಎಂದು ಭಾವಿಸುತ್ತೇನೆ. ನಾವು ಕೆಲಸ ಮಾಡಿದರೆ ಎಲ್ಲವೂ ಬದಲಾಗುತ್ತದೆ..' ಎಂದು ಯಶ್ ಈಚೆಗೆ ಹೇಳಿದ್ದರು.
'ಚಿತ್ರರಂಗವನ್ನು ಒಂದು ಕೆಜಿಎಫ್ ಬದಲಾಯಿಸಿಲ್ಲ. ನಾವು ಕೆಲಸ ಮಾಡಬೇಕು, ಹೊರಗಡೆ ಹೋಗಬೇಕು, ರೆಕಾರ್ಡ್ ಮುರಿಯಬೇಕು. ರಿಷಬ್ ಶೆಟ್ಟಿ ಅದ್ಭುತವಾದ ವ್ಯಕ್ತಿ. ರಿಷಬ್ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ತುಂಬ ಚೆನ್ನಾಗಿದೆ. ಅದು ಇಂದು ರಿಲೀಸ್ ಆದರೂ ಸೂಪರ್ ಹಿಟ್ ಆಗತ್ತೆ. ನಮ್ಮ ಚಿತ್ರರಂಗದ 'ಗರುಡ ಗಮನ ವೃಷಭ ವಾಹನ', 'ಲೂಸಿಯಾ' ತುಂಬ ಶ್ರೇಷ್ಠ ಸಿನಿಮಾಗಳು. ಇದೇ ಹಾದಿಯಲ್ಲಿ ನಮ್ಮ ಜನರು ಚಿತ್ರರಂಗವನ್ನು ಬೆಳೆಸಲು ಕೆಲಸ ಮಾಡಿದ್ದಾರೆ. ನಮ್ಮ ಹುಡುಗರು ಹೋರಾಡುತ್ತಾರೆ, ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ..' ಎಂದು ಯಶ್ ಹೇಳಿದ್ದರು.
ಸದ್ಯ ಎಲ್ಲರ ಪ್ರಶ್ನೆ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಎಂಬುದೇ ಆಗಿದೆ. ಆದರೆ ಈ ಬಗ್ಗೆ ಯಶ್ ಎಲ್ಲಿಯೂ ಉತ್ತರ ಹೇಳಿಲ್ಲ. ಜನವರಿ 8ರಂದು ಯಶ್‌ಗೆ ಹುಟ್ಟುಹಬ್ಬ. ಆ ಸಂದರ್ಭದಲ್ಲಾದರೂ, ಹೊಸ ಸಿನಿಮಾದ ಬಗ್ಗೆ ಮಾತನಾಡುತ್ತಾರಾ? ಗೊತ್ತಿಲ್ಲ. ಸದ್ಯಕ್ಕಂತೂ ಆ ಬಗ್ಗೆ ಸಣ್ಣ ಸುಳಿವು ಕೂಡ ಇಲ್ಲ.
Kgf Chapter 2 Star Yash Poses With Cricketer Hardik Pandya And Krunal Pandya.
11-12-25 10:57 pm
Bangalore Correspondent
Kalaburgi Accident, Three Killed: ರಾಜ್ಯದಲ್ಲಿ...
11-12-25 10:47 pm
ಗಾಂಜಾಕ್ಕಾಗಿ ಕಾರವಾರ ಜೈಲಿನಲ್ಲಿ ಕೈದಿಗಳ ಗಲಾಟೆ ; ಜ...
11-12-25 08:03 pm
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 10:55 pm
Mangalore Correspondent
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am