ಬ್ರೇಕಿಂಗ್ ನ್ಯೂಸ್
18-10-22 01:48 pm Source: Vijayakarnataka ಸಿನಿಮಾ
ರಿಷಬ್ ಶೆಟ್ಟಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಅವರು ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಸಾಧನೆ ಮಾಡಿದೆ. ಹೌದು, 'ಕಾಂತಾರ' ಭರ್ಜರಿಯಾಗಿ ಶತಕೋಟಿ ಕ್ಲಬ್ ಸೇರ್ಪಡೆಗೊಂಡಿದೆ. ಈ ಸಿನಿಮಾ ತೆರೆಕಂಡು ಈಗಾಗಲೇ 19 ದಿನ ಕಳೆದಿವೆ. ಈವರೆಗೂ ವಿಶ್ವಾದ್ಯಂತ ಎಲ್ಲ ಭಾಷೆಳಿಗಳಿಂದಲೂ ಸೇರಿ 120 ಕೋಟಿ ರೂ.ಗಳಿಗೂ ಅಧಿಕ ಹಣವನ್ನು 'ಕಾಂತಾರ' ಕಮಾಯಿ ಮಾಡಿದೆ ಎಂಬ ಲೆಕ್ಕಾಚಾರದ ಮಾತುಗಳು ಕೇಳಿವೆ.
2022ರಲ್ಲಿ ಮತ್ತೊಂದು ಸಾಧನೆ
ಈ ವರ್ಷ ಸ್ಯಾಂಡಲ್‌ವುಡ್ ಪಾಲಿಗೆ ಅದೃಷ್ಟ ಎಂದೇ ಹೇಳಬಹುದು. ಯಾಕೆಂದರೆ, ಮಾರ್ಚ್‌ನಲ್ಲಿ ತೆರೆಕಂಡ 'ಜೇಮ್ಸ್' ಈ ವರ್ಷ ಶತಕೋಟಿ ಕ್ಲಬ್‌ಗೆ ಸೇರಿದ ಮೊದಲ ಸಿನಿಮಾವಾಗಿದೆ. ಆನಂತರ 'ಕೆಜಿಎಫ್: ಚಾಪ್ಟರ್ 2' ಮಾಡಿದ ಸಾಧನೆ ಎಲ್ಲರಿಗೂ ಗೊತ್ತೇ ಇದೆ. ಮೊದಲ ದಿನವೇ ಈ ಸಿನಿಮಾ ಶತಕೋಟಿ ಕ್ಲಬ್‌ಗೆ ಸೇರಿಕೊಂಡಿತ್ತು. ಒಟ್ಟಾರೆ ಗಳಿಕೆ 1250 ಕೋಟಿ ರೂ. ತಲುಪಿದೆ. ಅದಾದ ಬಳಿಕ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾ 150 ಕೋಟಿ ರೂ. ವ್ಯವಹಾರ ಮಾಡಿತು. ಆನಂತರ ಸುದೀಪ್ ಅವರ 'ವಿಕ್ರಾಂತ್ ರೋಣ' ಕೂಡ ಶತಕೋಟಿ ಕ್ಲಬ್‌ಗೆ ಸೇರಿತ್ತು. ಈಗ ರಿಷಬ್ ಅವರ 'ಕಾಂತಾರ' ಕೂಡ ಶತಕೋಟಿ ಕ್ಲಬ್ ಸೇರಿರುವುದು ಖುಷಿ ವಿಷಯ.
ಎಲ್ಲೆಡೆ ಅಬ್ಬರದ ಕಲೆಕ್ಷನ್
'ಕಾಂತಾರ' ಸಿನಿಮಾಗೆ ಕನ್ನಡ ವರ್ಷನ್‌ನಿಂದಲೇ ಅತೀ ಹೆಚ್ಚು ಗಳಿಕೆ ಆಗಿದೆ. ಅದು ಬಿಟ್ಟರೆ, ತೆಲುಗು, ಹಿಂದಿ, ತಮಿಳು ವರ್ಷನ್‌ನಿಂದಲು ಹಣ ಹರಿದುಬರುತ್ತಿದೆ. ಇನ್ನು, ತೆಲುಗು ನಿರ್ಮಾಪಕರಿಗೆ 'ಕಾಂತಾರ' ಭರ್ಜರಿ ಕಮಾಯಿ ಮಾಡಿಕೊಟ್ಟಿದೆ. ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ತಮ್ಮ ಗೀತಾ ಆರ್ಟ್ಸ್ ಮೂಲಕ 'ಕಾಂತಾರ' ಚಿತ್ರದ ವಿತರಣೆಯನ್ನು ಮಾಡಿದ್ದರು. ಅವರಿಗೆ ಎರಡನೇ ದಿನಕ್ಕೆ ಅಸಲು ಜೊತೆಗೆ ಲಾಭವೂ ಸಿಕ್ಕಿದೆ. ತೆಲುಗಿನಲ್ಲಿ ಮುಗಿಬಿದ್ದು ಕಾಂತಾರ ಸಿನಿಮಾವನ್ನು ಜನರು ನೋಡುತ್ತಿದ್ದಾರೆ.
16ನೇ ದಿನ ದೊಡ್ಡ ದಾಖಲೆ
ಸಾಮಾನ್ಯವಾಗಿ ಒಂದು ಸಿನಿಮಾ ತೆರೆಕಂಡ ಮೊದಲ ದಿನವೇ ಹೆಚ್ಚು ಗಳಿಕೆ ಮಾಡುತ್ತದೆ. ಒಳ್ಳೆಯ ರೆಸ್ಪಾನ್ಸ್ ಇದ್ದರೆ, ಮೊದಲ ವಾರವೂ ಭರ್ಜರಿ ಕಲೆಕ್ಷನ್ ಸಿಗುತ್ತದೆ. ದಿನ ಕಳೆದಂತೆ, ಕಲೆಕ್ಷನ್‌ನಲ್ಲೂ ಕುಸಿತ ಉಂಟಾಗುತ್ತದೆ. ಆದರೆ 'ಕಾಂತಾರ' ಆ ಮಾತನ್ನು ಸುಳ್ಳು ಮಾಡಿದೆ. ಈ ಸಿನಿಮಾ ತೆರೆಕಂಡಿದ್ದು ಸೆ.30ಕ್ಕೆ. ಅಲ್ಲಿಗೆ ಸಿನಿಮಾ ತೆರೆಕಂಡು ಅ.15ರ ಶನಿವಾರಕ್ಕೆ 16 ದಿನಗಳಾಗುತ್ತವೆ. ಆ 16ನೇ ದಿನ ದಾಖಲೆ ಪ್ರಮಾಣದ ಕಲೆಕ್ಷನ್ ಮಾಡುವಲ್ಲಿ 'ಕಾಂತಾರ' ಗೆದ್ದಿದೆ. ಅಂದಹಾಗೆ, ಅ.14ರಂದು ಕಾಂತಾರ ಹಿಂದಿ ವರ್ಷನ್ ರಿಲೀಸ್ ಆಗಿತ್ತು.ಅ.15ಕ್ಕೆ ತಮಿಳು ಮತ್ತು ತೆಲುಗು ವರ್ಷನ್ ರಿಲೀಸ್ ಆಗಿದ್ದವು. ಈ ಎಲ್ಲದರ ಒಟ್ಟಾರೆ ಗಳಿಕೆ ಅದೊಂದೇ ದಿನ 15 ಕೋಟಿ ರೂ. ದಾಟಿತ್ತು.
'ಕೆಜಿಎಫ್' ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣ ಮಾಡಿರುವ 'ಕಾಂತಾರ' ಚಿತ್ರವು ಹಿಂದಿ ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಅ.15ರ ಮೊದಲ ದಿನ 1.27 ಕೋಟಿ ರೂ. ಗಳಿಕೆ ಆಗಿತ್ತು. ಎರಡನೇ ದಿನ ಹಿಂದಿ ಅವತರಣಿಕೆಯಿಂದ 2.75 ಕೋಟಿ ರೂ. ಸಿಕ್ಕಿತ್ತು. ಮೂರನೇ ದಿನ ಭಾನುವಾರವಾಗಿದ್ದರಿಂದ 3.50 ಕೋಟಿ ರೂ. ಗಳಿಕೆ ಆಗಿದೆ. ಹಿಂದಿ ಅವತರಣಿಕೆಯ ಮೊದಲ ಮತ್ತು ಎರಡನೆಯ ದಿನದ ಕಲೆಕ್ಷನ್‌ಗೆ ಹೋಲಿಸಿದರೆ, 3ನೇ ದಿನ ಕಲೆಕ್ಷನ್ ಜಾಸ್ತಿ ಆಗಿದೆ. ಒಟ್ಟು ಮೂರು ದಿನಕ್ಕೆ 7.52 ಕೋಟಿ ರೂ. ಕಲೆಕ್ಷನ್ ಆಗಿದೆ.
Rishab Shetty Vijay Kiragandurs Kantara Movie Enters 100 Cr Club.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm