ಬ್ರೇಕಿಂಗ್ ನ್ಯೂಸ್
03-10-22 01:14 pm Source: Vijayakarnataka ಸಿನಿಮಾ
ನಟಿ ಶರ್ಮಿಳಾ ಮಾಂಡ್ರೆ ಅಭಿನಯದ 'ಗಾಳಿಪಟ 2' ಸಿನಿಮಾ ಈಚೆಗಷ್ಟೇ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಅವರು ಟೀಚರ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರು ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ ಹತ್ತು ವರ್ಷಗಳ ಕೆಳಗೆ ‘ಮಿರತ್ತಲ್’ ಎಂಬ ತಮಿಳು ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಹಾಲಿವುಡ್ ಮಾದರಿಯ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಾಯಕಿಯಾಗಿ ಮತ್ತೆ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈ ಸಿನಿಮಾಗೆ ‘ಮರ್ಡರ್ ಲೈವ್’ ಎಂದು ಹೆಸರಿಟ್ಟಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಮುರುಗೇಶ್ ಎಂಬ ತಮಿಳು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ.
‘ಮರ್ಡರ್‌ಲೈವ್’ ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ‘ಬ್ಲೈಂಡ್ ಡೇಟ್’, ‘ಸ್ಕೈ ಹೈ’, ‘ಗ್ಲಿಚ್’ ಮುಂತಾದ ಹಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ. ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಚಿತ್ರದಲ್ಲಿ, ಕಷ್ಟದ ಪರಿಸ್ಥಿಯಲ್ಲಿ ಸಾಮಾನ್ಯ ಮನುಷ್ಯರೂ ಹೇಗೆ ಸಿಡಿದೆದ್ದು ಹೀರೋಗಳಾಗುತ್ತಾರೆ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುವ ಅವರು, ‘ನನ್ನ ಪಾತ್ರ ಇದುವರೆಗೆ ನಾನು ನಿರ್ವಹಿಸಿದ ಎಲ್ಲ ಪಾತ್ರಗಳಿಗಿಂತ ಭಿನ್ನವಾಗಿದೆ. ಹೊಸ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವ ನನಗೆ ಇಂತಹ ಪಾತ್ರ ಸಿಕ್ಕಿದ್ದು ಖುಷಿಯಾಯಿತು. ನಿರ್ದೇಶಕ ಮುರುಗೇಶ್ ಕಥೆ ಹೇಳಿದಾಗ ಇದೊಂದು ಬೇರೆ ರೀತಿಯ ಸಿನಿಮಾ ಎನಿಸಿತು’ ಎಂದು ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ವಿನಯ್ ರೈ ವಿಲನ್
ಒಬ್ಬ ಸೈಕೋ ಕಿಲ್ಲರ್ ಜಗತ್ತಿನ ಯಾವುದೇ ಕಂಪ್ಯೂಟರ್ ಹ್ಯಾಕ್ ಮಾಡಿ, ಅದರ ಮೂಲಕ ಲೈವ್ ಆಗಿ ಕೊಲೆ ಮಾಡುವ ಕಥೆ ಇರುವ ಈ ಚಿತ್ರವನ್ನು ಸಂಪೂರ್ಣವಾಗಿ ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಸೂರ್ಯ ಅಭಿನಯದ ‘ಇಟಿ’ ಮತ್ತು ಶಿವಕಾರ್ತಿಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದ ವಿನಯ್ ರೈ, ಈ ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶರ್ಮಿಳಾ ಜತೆ ಹಾಲಿವುಡ್ ನಟಿ ನವೋಮಿ ವಿಲ್ಲೋ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಮರ್ಡರ್ ಲೈವ್ ಸಿನಿಮಾ ಟೆಕ್ನಿಕಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವ ಸಿನಿಮಾ. ಹಲವು ದೃಶ್ಯಗಳು ಹಾಲಿವುಡ್ ಮಾದರಿಯಲ್ಲಿ ಮೂಡಿ ಬಂದಿವೆ. ಬಹುಶಃ ಈ ರೀತಿಯ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಅನ್ನು ನಾನು ಹಿಂದೆಂದೂ ನೋಡಿಲ್ಲ' ಎಂದು ಹೇಳಿದ್ದಾರೆ ಶರ್ಮಿಳಾ.
ಈಗಾಗಲೇ ‘ಮರ್ಡರ್ ಲೈವ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ. ಪ್ರಶಾಂತ್ ಡಿ. ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಮದನ್ ಅವರ ಸಂಕಲನವಿದೆ.
Gaalipata 2 Fame Sharmiela Mandre Vinay Rai Starrer Murder Live Movie Ready For Release.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm