ಬ್ರೇಕಿಂಗ್ ನ್ಯೂಸ್
20-09-22 02:48 pm Source: Vijayakarnataka ಸಿನಿಮಾ
ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು, ಹೊಸ ರೀತಿಯ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬ ಸದುದ್ದೇಶದಿಂದ ಪಿಆರ್‌ಕೆ ಪ್ರೊಡಕ್ಷನ್ಸ್ ಶುರು ಮಾಡಿದ್ದರು 'ಪವರ್ ಸ್ಟಾರ್' ಡಾ. ಪುನೀತ್ ರಾಜ್‌ಕುಮಾರ್. ಇಂದು ನಮ್ಮೊಂದಿಗೆ ಪುನೀತ್ ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ಕನಸುಗಳು ಈಡೇರುತ್ತಿವೆ. ಅವರ ಕನಸಿನ ಕೂಸು ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ಹೊಸ ಮಾದರಿಯ ಸಿನಿಮಾಗಳು ಬರುತ್ತಿವೆ. ಸದ್ಯ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸೆಟ್ಟೇರಿದ್ದ 'ಓ2' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಅಕ್ಟೋಬರ್‌ನಲ್ಲಿ ಮುಹೂರ್ತವಾಗಿತ್ತು
ಪ್ರವೀಣ್ ತೇಜ್ ಮತ್ತು ಅಶಿಕಾ ರಂಗನಾಥ್ ಮೂಖ್ಯಭೂಮಿಕೆಯಲ್ಲಿರುವ 'O2' ಸಿನಿಮಾಗೆ ಕಳೆದ ವರ್ಷ ಅಕ್ಟೋಬರ್ 8ರಂದು ಮುಹೂರ್ತ ನೆರವೇರಿತ್ತು. ಅಂದು ಆ ಕಾರ್ಯಕ್ರಮದಲ್ಲಿ ಪುನೀತ್ ಕೂಡ ಇದ್ದರು. ಶೂಟಿಂಗ್ ಕೂಡ ಶುರುವಾಗಿತ್ತು. ಆದರೆ ಪುನೀತ್ ಅವರ ನಿಧನದಿಂದಾಗಿ ಚಿತ್ರೀಕರಣ ತಡವಾಯ್ತು. ಆನಂತರ ಜನವರಿಯಲ್ಲಿ ಮತ್ತೆ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ, ಇದೀಗ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿದೆ.
ಈ ಸಿನಿಮಾಗೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ತೇಜ್ ಮತ್ತು ಆಶಿಕಾ ರಂಗನಾಥ್ ಜೊತೆಗೆ ಈ ಚಿತ್ರದಲ್ಲಿ ಆರ್‌ಜೆ ಸಿರಿ, ಪುನೀತ್ ಬಿ.ಎ., ರಂಗಭೂಮಿ ನಟ ಮೋಹನ್ ನಟಿಸಿದ್ದಾರೆ. 'ರಾಮಾರ್ಜುನ', 'ಬುದ್ಧಿವಂತ 2' ಖ್ಯಾತಿಯ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಇದೊಂದು ಮೆಡಿಕಲ್ ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದೆ.
'ಓ2' ಮೆಚ್ಚಿಕೊಂಡಿದ್ದ ಪುನೀತ್ ರಾಜ್‌ಕುಮಾರ್
ಈ ಬಗ್ಗೆ ಮಾಹಿತಿ ನೀಡುವ ಪ್ರವೀಣ್, 'ಈ ಸಿನಿಮಾದ ಮುಹೂರ್ತ ಮತ್ತು ಮೊದಲ ಹಂತದ ಚಿತ್ರೀಕರಣದ ವೇಳೆ ಅಪ್ಪು ಸರ್ ಇದ್ದರು. ಅವರು ಸಿನಿಮಾದ ಫೂಟೇಜ್ ನೋಡಿ ತುಂಬ ಖುಷಿಪಟ್ಟಿದ್ದರು. ಸಾಕಷ್ಟು ಮೆಚ್ಚುಗೆ ಮಾತುಗಳನ್ನಾಡಿದ್ದರು. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಆಶೀರ್ವಾದ. ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾದ ಸೌಲಭ್ಯಗಳು ನಮಗೆ ಸಿಕ್ಕಿವೆ. ಈ ಸಿನಿಮಾ ತುಂಬ ಅಪ್‌ಡೇಟ್ ಆಗಿದೆ. ತುಂಬ ಉತ್ತಮವಾದ ಕಂಟೆಂಟ್ ಈ ಸಿನಿಮಾದಲ್ಲಿದೆ' ಎಂದಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾದ ಸಿನಿಮಾಗಳಿವು
ಈ ಹಿಂದೆ ಪಿಆರ್‌ಕೆ ಸಂಸ್ಥೆಯಿಂದ ಹೇಮಂತ್ ರಾವ್ ನಿರ್ದೇಶನದ 'ಕವಲುದಾರಿ', ರಾಧಕೃಷ್ಣ ರೆಡ್ಡಿಅವರ 'ಮಾಯಾಬಜಾರ್', ರಾಗಿಣಿ ಚಂದ್ರನ್ ನಟನೆಯ 'ಲಾ', ಪನ್ನಗ ಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ', ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟನೆಯ 'ಫ್ಯಾಮಿಲಿ ಪ್ಯಾಕ್', ಸತ್ಯ ಪ್ರಕಾಶ್ ನಿರ್ದೇಶನದ 'ಮ್ಯಾನ್ ಆಫ್ ದಿ ಮ್ಯಾಚ್' ದಾನೀಶ್ ಸೇಠ್ ನಟನೆಯ 'ಒನ್ ಕಟ್ ಟು ಕಟ್' ಸಿನಿಮಾಗಳು ರಿಲೀಸ್ ಆಗಿವೆ. ವಿಶೇಷವೆಂದರೆ, ಇದರಲ್ಲಿ 'ಕವಲುದಾರಿ' ಮತ್ತು 'ಮಾಯಾಬಜಾರ್' ಸಿನಿಮಾಗಳು ನೇರವಾಗಿ ಚಿತ್ರಮಂದಿರದಲ್ಲಿ ತೆರೆಕಂಡರೆ, ಮಿಕ್ಕೆಲ್ಲ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗಿವೆ. ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಗಂಧದ ಗುಡಿ' ಅಕ್ಟೋಬರ್ 28ರಂದು ತೆರೆಗೆ ಬರಲಿದೆ.
Praveen Tej Ashika Ranganath Starrer Starrer O2 Movie Shooting Completed.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am