ಬ್ರೇಕಿಂಗ್ ನ್ಯೂಸ್
22-08-22 02:07 pm Source: Vijayakarnataka ಸಿನಿಮಾ
'ಸೂಪರ್ ಸ್ಟಾರ್' ರಜನಿಕಾಂತ್ ಅವರು 'ಅಣ್ಣಾಥೆ' ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕುರಿತು ಸಾಕಷ್ಟು ಕುತೂಹಲ ಇತ್ತು. ಅದಕ್ಕೆ 'ಜೈಲರ್' ಮೂಲಕ ಉತ್ತರ ನೀಡಿದ್ದರು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್. ಹೌದು, 'ಬೀಸ್ಟ್', 'ಡಾಕ್ಟರ್' ಸಿನಿಮಾಗಳ ಖ್ಯಾತಿಯ ನಿರ್ದೇಶಕ ನೆಲ್ಸನ್ ಸಿನಿಮಾದಲ್ಲಿ ರಜನಿಕಾಂತ್ ನಟಿಸುವುದು ಕೆಲ ತಿಂಗಳ ಹಿಂದೆಯೇ ಕನ್ಪರ್ಮ್ ಆಗಿತ್ತು. ಇದೀಗ ಆ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ರಜನಿಕಾಂತ್ ಸಾಲ್ಟ್ & ಪೆಪ್ಪರ್ ಲುಕ್‌ನಲ್ಲಿ ಮಿಂಚಿದ್ದಾರೆ. ರಜನಿಕಾಂತ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೊತೆಗೆ ಇಂದಿನಿಂದಲೇ (ಆ.22) 'ಜೈಲರ್' ಸಿನಿಮಾದ ಶೂಟಿಂಗ್ ಕೂಡ ಆರಂಭಗೊಂಡಿದೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಕೂಡ ನಟಿಸುತ್ತಾರೆ ಅನ್ನೋದು ಮತ್ತೊಂದು ವಿಶೇಷ.
'ಜೈಲರ್' ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ. ಇದು ರಜನಿಕಾಂತ್ ಅವರ 169ನೇ ಸಿನಿಮಾವಾಗಿದೆ. ಈ ವರ್ಷ ತೆರೆಕಂಡ 'ಬೀಸ್ಟ್' ಸಿನಿಮಾ ಹೀನಾಯವಾಗಿ ಸೋತಿತ್ತು. ಆದರೂ ನೆಲ್ಸನ್ ಪ್ರತಿಭೆ ಮೇಲೆ ನಂಬಿಕೆ ಇರಿಸಿ, ಈ ಸಿನಿಮಾದ ಆಫರ್ ಅನ್ನು ಸನ್ ಪಿಕ್ಚರ್ಸ್ ಸಂಸ್ಥೆ ನೀಡಿದೆ. 'ಬೀಸ್ಟ್' ಸಿನಿಮಾಗೂ ಸನ್ ಪಿಕ್ಚರ್ಸ್ ಹಣ ಹಾಕಿತ್ತು. ಸದ್ಯ 'ಜೈಲರ್' ಸಿನಿಮಾ ಶೂಟಿಂಗ್ ಶುರುವಾಗಿರುವುದು ಫ್ಯಾನ್ಸ್‌ಗೆ ಖುಷಿ ನೀಡಿದೆ. ಈ ಮಧ್ಯೆ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿದೆ.
ಜೈಲರ್‌ನಲ್ಲಿ ಶಿವಣ್ಣ
'ಜೈಲರ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಕೂಡ ಬಣ್ಣ ಹಚ್ಚುವುದು ಖಚಿತವಾಗಿದೆ. ಅವರ ಲುಕ್ ಹೇಗಿರಲಿದೆ ಅನ್ನೋ ಕುತೂಹಲ ಶಿವಣ್ಣನವರ ಫ್ಯಾನ್ಸ್‌ಗೆ ಇದೆ. ಮೊದಲ ಬಾರಿಗೆ ಶಿವಣ್ಣ ಮತ್ತು ರಜನಿಕಾಂತ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಪ್ರಿಯರಿಗೆ ಸಖತ್ ಥ್ರಿಲ್ ನೀಡಿದೆ. ಸೆಪ್ಟೆಂಬರ್‌ನಲ್ಲಿ ರಜನಿಕಾಂತ್ ಮತ್ತು ಶಿವರಾಜ್‌ಕುಮಾರ್ ಅವರ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಬೆಂಗಳೂರು ಅಥವಾ ಮೈಸೂರಿನಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ.
ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರವೇನು ಅನ್ನೋದು ಗೊತ್ತಾಗಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿವಣ್ಣ, 'ರಜನಿಕಾಂತ್ ಅವರ ಜೊತೆಗೆ ನಟಿಸುವುದು ದೊಡ್ಡ ಅವಕಾಶ. ಈ ಪ್ರಾಜೆಕ್ಟ್‌ನ ಭಾಗವಾಗಿರುವುದು ಖುಷಿ ನೀಡಿದೆ. ನಾನು ಅವರನ್ನು 12 ವರ್ಷದ ಹುಡುಗನಾಗಿದ್ದಾಗಿನಿಂದಲೂ ನೋಡಿದ್ದೇನೆ. ಅವರ ಮೇಲೆ ದೊಡ್ಡ ಗೌರವವಿದೆ. ಅಪ್ಪಾಜಿಗೂ ಅವರು ಬಹಳ ಆತ್ಮೀಯರು. ಅವರೊಂದಿಗೆ ನನಗೆ ತುಂಬ ಒಡನಾಟ ಇದೆ. ನನ್ನ ಪಾತ್ರ ಏನೇ ಇರಲಿ, ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಖುಷಿಯಾಗಿದೆ' ಎಂದಿದ್ದರು. ಸದ್ಯ 'ಜೈಲರ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಹೇಗಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಜೈಲರ್ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಪೆಟ್ಟಾ, ದರ್ಬಾರ್ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್ ಗಿಟ್ಟಿಸಿಕೊಂಡಿದ್ದಾರೆ.
Rajinikanth Shivarajkumar Starrer Jailer Movie First Look Released.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm