ಬ್ರೇಕಿಂಗ್ ನ್ಯೂಸ್
20-08-22 02:27 pm Source: Vijayakarnataka ಸಿನಿಮಾ
ಸ್ಯಾಂಡಲ್‌ವುಡ್‌ನಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿ ಮೆರೆದ ಕ್ವೀನ್, ಇಂದು ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ರಮ್ಯಾ ( Ramya ) ಅವರಿಗೆ ವಯಸ್ಸು 39 ಆದರೂ ಇನ್ನು ಮದುವೆಯಾಗಿಲ್ಲ. ಮದುವೆ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾದಾಗಲೂ ಕೂಡ ರಮ್ಯಾ ನಾನು ಮದುವೆಯಾಗುತ್ತಿಲ್ಲ ಎಂದಿದ್ದರು. ಈಗ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ರಮ್ಯಾ, ನನ್ನ ಸೋಲ್‌ಮೇಟ್ ಸತ್ತುಹೋಗಿರಬಹುದು ಎಂದಿದ್ದಾರೆ.
ರಮ್ಯಾ ಶೇರ್ ಮಾಡಿರುವ ವಿಡಿಯೋದಲ್ಲಿದೆ?
ರಮ್ಯಾ ಅವರು Iamnotshane ಅವರ Maybe My Soulmate Died ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ "ಯಾಕೆ ಮದುವೆಯಾಗಿಲ್ಲ? ನನ್ನ ಸೋಲ್‌ಮೇಟ್ ಸತ್ತುಹೋಗಿರಬಹುದು" ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದು ತಮಾಷೆಯ ಮಾತಾಗಿರಬಹುದು. ಸಾಕಷ್ಟು ಜನರು ಈ ವಿಡಿಯೋವನ್ನು ನೋಡಿ ಕ್ಯೂಟ್ ಎಂದಿದ್ದಾರೆ. ಒಟ್ಟಿನಲ್ಲಿ ರಮ್ಯಾ ಸೋಶಿಯಲ್ ಮೀಡಿಯಾ ಅಪ್‌ಡೇಟ್ಸ್, ಪೋಸ್ಟ್ ನೋಡಿದವರೆಲ್ಲ ಸಖತ್ ಖುಷಿ ಪಡುವುದಂತೂ ಸತ್ಯ.
ರಮ್ಯಾ ಮದುವೆ ಬಗ್ಗೆಯೇ ಚರ್ಚೆ
ಸಾಕಷ್ಟು ನಟ, ರಾಜಕಾರಣಿ, ಉದ್ಯಮಿ ಜೊತೆ ರಮ್ಯಾ ಮದುವೆಯಾಗಲಿದೆ ಎಂಬ ಮಾತು ಕೇಳಿಬಂದಿತ್ತಾದರೂ ಕೂಡ ಅದ್ಯಾವುದು ನಿಜವಾಗಿಲ್ಲ. ವೃತ್ತಿ ಜೀವನಕ್ಕೆ ಬರೋದಾದರೆ ಕಳೆದ ಎರಡು ವರ್ಷದ ಹಿಂದೆ ರಾಜಕಾರಣದಿಂದಲೂ ಹಿಂದೆ ಸರಿದಿರುವ ರಮ್ಯಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಚಿತ್ರರಂಗಕ್ಕೆ ರಮ್ಯಾ ರೀ ಎಂಟ್ರಿ?
ಚಿತ್ರರಂಗಕ್ಕೆ ಮರಳುವ ದೃಷ್ಟಿಯಿಂದ ರಮ್ಯಾ ಅವರು ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರಂತೆ. ರಮ್ಯಾ ಅವರ ಸಿನಿಮಾಕ್ಕೆ ನಟ, ನಿರ್ದೇಶಕ ರಾಜ್.ಬಿ.ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ, ರಾಜ್.ಬಿ.ಶೆಟ್ಟಿ ಹೇಳಿರುವ ಕಥೆ ಕೇಳಿ ರಮ್ಯಾ ಇಂಪ್ರೆಸ್ ಆಗಿದ್ದಾರೆ, ಈ ಚಿತ್ರಕ್ಕೆ ಅವರೇ ಬಂಡವಾಳ ಹಾಕಲೂ ಮುಂದಾಗಿದ್ದಾರಂತೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ರಾಜ್ ಬಿ ಶೆಟ್ಟಿ ಇದು ಗಾಸಿಪ್ ಎಂದಿದ್ದಾರೆ.
ಕುತೂಹಲಕರವಾಗಿರುವ ರಮ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್
ರಮ್ಯಾ ನಟಿಸಬೇಕು ಎಂದು ಅವರ ಸಹಸ್ರಾರು ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಡಾಲಿ ಧನಂಜಯ ಅವರ ಸಿನಿಮಾ ಸೆಟ್‌ಗೆ ರಮ್ಯಾ ಭೇಟಿ ನೀಡಿದ್ದರು. ಹೊಸ ಹೊಸ ಚಿತ್ರಗಳಿಗೆ ಅವರು ಬೆಂಬಲ ನೀಡುತ್ತಾರೆ. ಸಾಕಷ್ಟು ಸಿನಿಮಾಗಳು, ಕಲಾವಿದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಿರುತೆರೆ ಕಲಾವಿದರ ಲಿಪ್‌ಸಿಂಕ್ ವಿಡಿಯೋ, ಹಾಡುಗಳಿಗೂ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಗಳಿಕೆ ನೀಡಿದ್ದರು.
2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಅವರು 2016ರ ನಂತರ ಸಿನಿಮಾಗಳಲ್ಲಿ ನಟಿಸಿಲ್ಲ. ರಾಜಕೀಯದ ಕಡೆ ಗಮನ ಕೊಟ್ಟು ಅವರು ಸಿನಿಮಾದಿಂದ ದೂರವಾದರು. ಪುನೀತ್ ರಾಜ್‌ಕುಮಾರ್ ಜೊತೆ ಮತ್ತೆ ರಮ್ಯಾ ಅವರು ಕಂಬ್ಯಾಕ್ ಮಾಡುವ ಇಂಗಿತ ಕೂಡ ಹೊಂದಿದ್ದರಂತೆ. ಆದರೆ ಅದೀಗ ಕನಸಾಗಿದೆ.
Ramya Says Why She Is Not Married Because Maybe My Soulmate Died.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm