ಬ್ರೇಕಿಂಗ್ ನ್ಯೂಸ್
23-07-22 09:33 pm Mangalore Correspondent ಸಿನಿಮಾ
ಮಂಗಳೂರು, ಜುಲೈ 23: ತುಳುನಾಡಿನ ದೈವಾರಾಧನೆಯ ಸೊಗಡನ್ನು ಬೆರಸಿಕೊಂಡು ನಿರ್ಮಿಸಿದ ವಿಭಿನ್ನ ಕಥಾಹಂದರದ 'ಜೀಟಿಗೆ’ ತುಳು ಸಿನೆಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಲಿನಲ್ಲಿ 'ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಪಾತ್ರವಾಗಿದೆ.
ತುಳು ಸಿನೆಮಾಕ್ಕೆ ಸಿಗುತ್ತಿರುವ ಏಳನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. ಇದಕ್ಕೂ ಮುನ್ನ “ಬಂಗಾರ್ ಪಟ್ಲೇರ್’, “ಕೋಟಿ ಚೆನ್ನಯ’, “ಗಗ್ಗರ’, “ಮದಿಪು’, “ಪಡ್ಡಾಯಿ’, “ಪಿಂಗಾರ’ ಸಿನೆಮಾಗಳು ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದ್ದವು.

ಸಂತೋಷ್ ಮಾಡ ನಿರ್ದೇಶನ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣ, ನವೀನ್ ಡಿ. ಪಡೀಲ್ ಅವರ ಮುಖ್ಯ ತಾರಾಗಣದಲ್ಲಿ “ಜೀಟಿಗೆ’ ಸಿನಿಮಾ ಸಿದ್ಧವಾಗಿದೆ. ಸಂತೋಷ್ ಮಾಡ ಅವರ ಮೊದಲ ಸಿನೆಮಾ ನಿರ್ದೇಶನವೇ “ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನವಾಗಿರುವುದು ವಿಶೇಷ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ 15 ದಿನದಲ್ಲಿ ಶೂಟಿಂಗ್ ಕಂಡ “ಜೀಟಿಗೆ’ ಇನ್ನಷ್ಟೇ ತೆರೆ ಕಾಣಬೇಕಿದೆ.

ತುಳುನಾಡಿನ ದೈವಾರಾಧನೆ ಮತ್ತು ವಿಭಿನ್ನ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ ಇದಾಗಿದೆ. ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಜೆ.ಪಿ. ತೂಮಿನಾಡ್, ಚೇತನ್ ರೈ ಮಾಣಿ, ಅರುಣ್ ರೈ ಸಹಿತ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರಕಥೆ, ಸಂಭಾಷಣೆ ಶಶಿರಾಜ್ ಕಾವೂರು ಅವರದ್ದು. ಉನ್ನಿ ಮದವೂರ್ ಕೆಮರಾ, ಸ್ಯಾಕ್ಸೋಫೋನ್ ಜಯರಾಮ್ ಸಂಗೀತವಿದೆ.

ಒಂದು ಒಳ್ಳೆಯ ಸಿನೆಮಾ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಅದನ್ನು ತುಂಬಾ ಶ್ರದ್ಧೆಯಿಂದ ಮಾಡಿದ್ದೇವೆ. ಈಗ ಅದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಚಿತ್ರದಲ್ಲಿ ದುಡಿದ ಎಲ್ಲರಿಗೆ, ನಮ್ಮ ಚಿತ್ರವನ್ನು ಗುರುತಿಸಿದ ಜ್ಯೂರಿಗಳಿಗೆ ಧನ್ಯವಾದ ಹೇಳಬಯಸುತ್ತೇನೆ ಎಂದು ಚಿತ್ರದ ನಿರ್ಮಾಪಕ ಅರುಣ ರೈ ತೋಡಾರು ಪ್ರತಿಕ್ರಿಯಿಸಿದ್ದಾರೆ.
The National Film Awards are the most prestigious awards for art and cinema in India. This year's National Film Awards, which were announced on July 22, saw actors and filmmakers taking home the award for the extraordinary work that they have done in Indian cinema. Among the long list of awards, the Tulu film Jeetige (Deevatige - traditional torch), which is helmed by Santhosh Mada won the Best Film Award in the Tulu film category.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm