ಬ್ರೇಕಿಂಗ್ ನ್ಯೂಸ್
17-09-20 02:45 pm Dhruthi Anchan - Correspondent ದೇಶ - ವಿದೇಶ
ಉತ್ತರ ಕೊರಿಯಾ, ಸೆಪ್ಟೆಂಬರ್.17 : ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ಇದೀಗ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದಾರೆ.
ಕಿಮ್ ಯೋ ಜಾಂಗ್ ಹೊರಡಿಸಿರುವ ಆದೇಶದಲ್ಲಿ ಇನ್ನು ಮುಂದೆ ಪ್ರೀ ನರ್ಸರಿ ಮಕ್ಕಳು ಕಡ್ಡಾಯವಾಗಿ 90 ನಿಮಿಷಗಳ ಕಾಲ ಸಹೋದರನ ಗುಣಗಾನ ಮಾಡಬೇಕು. ಅಂದರೆ ತನ್ನ ಸಹೋದರ ಇಲ್ಲಿಯವರೆಗೆ ಮಾಡಿರುವ 'ಮಹಾನ್' ಕಾರ್ಯಗಳ ಬಗ್ಗೆ ಕಡ್ಡಾಯವಾಗಿ ಕಲಿಯಬೇಕು. ಕಲಿಕೆಯ ಸಂದರ್ಭದಲ್ಲಿ ಕಿಮ್ ಜೊಂಗ್ ಉನ್ ಮಾಡಿರುವ ಸಾಧನೆಗಳ ಬಗ್ಗೆ ಶ್ಲಾಘನೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಕಿಮ್ ಜೊಂಗ್ ಉನ್ನ ಸಾಧನೆಗಳ ಪಟ್ಟಿಯನ್ನು ಪ್ರೀ ನರ್ಸರಿ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಪ್ರತಿದಿನ ಕನಿಷ್ಠ 90 ನಿಮಿಷ ಮಕ್ಕಳು ಅದರ ಬಗ್ಗೆ ಕಲಿಯಬೇಕಿದೆ. ಉತ್ತರ ಕೊರಿಯಾದ ಬಗ್ಗೆ ನಿಷ್ಠೆ ಮತ್ತು ನಂಬಿಕೆಯನ್ನು ಉಳಿಸಿ ಬೆಳೆಸಿಕೊಳ್ಳಲು ಅಧ್ಯಕ್ಷ ಕಿಮ್ನ ಗುಣಗಾನ, ಅವರ ಶ್ರೇಷ್ಠತೆ ಬಗ್ಗೆ ಮಕ್ಕಳು ಕಲಿಯಬೇಕು ಎನ್ನುವುದು ಸಹೋದರಿ ಕಿಮ್ ಯೋ ಜಾಂಗ್ ಅನಿಸಿಕೆ.
ಇದಕ್ಕಾಗಿಯೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈ ಮೊದಲು ಇದ್ದ ಪಠ್ಯಕ್ರಮದಲ್ಲಿ 30 ನಿಮಿಷ ಕಿಮ್ನ ಗುಣಗಾನ ಮಾಡುವುದು ಕಡ್ಡಾಯವಾಗಿತ್ತು. ಅದನ್ನೀಗ 90 ನಿಮಿಷಕ್ಕೆ ಏರಿಕೆ ಮಾಡಲಾಗಿದೆ.
ಈ ಪಠ್ಯದ ತರಬೇತಿಗಾಗಿ ವಿಶೇಷ ಅಧ್ಯಾಪಕರನ್ನೂ ನೇಮಕ ಮಾಡಿದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನೂ ಮೀಸಲು ಇರಿಸಲಾಗಿದೆ. ಇದರ ಅವಧಿ 90 ನಿಮಿಷಗಳಾಗಿದ್ದು, ಅದರಲ್ಲಿ ಮಕ್ಕಳು ಕಿಮ್ ಬಗ್ಗೆ ತಿಳಿದುಕೊಳ್ಳುವುದು ಇನ್ನುಮುಂದೆ ಕಡ್ಡಾಯವಾಗಿದೆ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am