ಬ್ರೇಕಿಂಗ್ ನ್ಯೂಸ್
04-03-26 12:58 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 4: ಇರಾನ್ ಪರಮೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರ ಬಳಿಕ ದೇಶವನ್ನು ಮುನ್ನಡೆಸಲು ಅವರ ಪುತ್ರ ಮೊಜ್ತಾಬಾ ಹೊಸೇನಿ ಖಮೇನಿ ಅವರನ್ನು ಮುಂದಿನ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಹಂಗಾಮಿ ಮುಖ್ಯಸ್ಥರ ಸಭೆಯಲ್ಲಿ ಹೊಸೇನಿ ಅವರನ್ನು ಖಮೇನಿ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಖಮೇನಿ ಅವರನ್ನು ಗುರಿಯಾಗಿಸಿ ಅಮೆರಿಕ- ಇಸ್ರೇಲ್ ದಾಳಿ ನಡೆಸಿ ಅವರನ್ನು ವಾರದ ಹಿಂದೆ ಹತ್ಯೆ ಮಾಡಿತ್ತು. ಇದರಿಂದ ಖಾಲಿಯಾದ ಸರ್ವೋಚ್ಚ ನಾಯಕನ ಸ್ಥಾನಕ್ಕೆ ರೆವೊಲ್ಯುಶನರಿ ಗಾರ್ಡ್ ಒತ್ತಾಯದಂತೆ, ಪುತ್ರ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಮುಂದಿನ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ ಮಾಹಿತಿ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಖಮೇನಿ ಅವರನ್ನು ಪವಿತ್ರ ನಗರವಾದ ಮಶಾದ್‌ನಲ್ಲಿ ಸಮಾಧಿ ಮಾಡಲಾಗುವುದು ಮತ್ತು ಟೆಹ್ರಾನ್‌ನಲ್ಲಿ “ದೊಡ್ಡ ವಿದಾಯ ಸಮಾರಂಭ” ನಡೆಸಲಾಗುವುದು ಎಂದು ಅವರ ಪರವಾಗಿರುವ ರೆವೊಲ್ಯುಶನರಿ ಗಾರ್ಡ್‌ಗಳು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿವೆ.
ಖಮೇನಿ ಅವರಿಗೆ ಯಾವುದೇ ನಿಯೋಜಿತ ಉತ್ತರಾಧಿಕಾರಿ ಇರಲಿಲ್ಲ. ಅಯತೊಲ್ಲಾ ಅಲಿರೆಜಾ ಅರಾಫಿ, ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸೇನ್ ಮೊಹ್ಸೆನಿ ಎಜೈ ಅವರನ್ನು ಒಳಗೊಂಡ ಮೂವರು ಸದಸ್ಯರ ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿಯು ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ವರೆಗೆ ಸುಪ್ರೀಂ ನಾಯಕನ ಜವಾಬ್ದಾರಿಗಳನ್ನು ವಹಿಸಿಕೊಂಡಿತ್ತು.
ಮೊಜ್ತಬಾ ರೆವೊಲ್ಯುಶನರಿ ಗಾರ್ಡ್ ನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರಾದರೂ, ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆಗಳನ್ನು ನಿರ್ವಹಿಸಿದವರಲ್ಲ. ತಂದೆಯ ಜೊತೆಗೆ ಪ್ರಮುಖ ಸಲಹೆಗಾರರಾಗಿ ಇದ್ದರು. ಮಿಲಿಟರಿ ಮತ್ತು ಅರೆಸೈನಿಕ ಪಡೆಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ಇರಾನ್‌ನ ಶಿಯಾ ದೇವಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವೋಚ್ಚ ನಾಯಕ ಅತ್ಯಂತ ಶಕ್ತಿಶಾಲಿ ಸ್ಥಾನವಾಗಿದ್ದು, ದೇಶದ ಸಶಸ್ತ್ರ ಪಡೆಗಳ ಕಮಾಂಡರ್ ಇನ್-ಚೀಫ್ ಆಗಿರುತ್ತಾರೆ. ರಾಜಕೀಯ, ಮಿಲಿಟರಿ ಹಾಗೂ ತಂತ್ರಾತ್ಮಕ ನಿರ್ಧಾರಗಳ ಮೇಲೆ ಅಂತಿಮ ಅಧಿಕಾರ ಹೊಂದಿರುವ ಈ ಹುದ್ದೆಗೆ ಮೊಜ್ತಬಾ ಖಮೇನಿ ನೇಮಕಗೊಂಡಿರುವುದು ದೇಶದ ನೀತಿಗಳಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತದೆ.
ಆದರೆ ಮೊಜ್ತಬಾ ಖಮೇನಿ ಆಯ್ಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 2009ರ ಪ್ರತಿಭಟನೆಗಳ ಸಂದರ್ಭದಲ್ಲಿ ಅವರ ಪಾತ್ರದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಈಗ ವಂಶಾವಳಿ ಆಧಾರಿತ ಅಧಿಕಾರ ವರ್ಗಾವಣೆಯ ಕುರಿತು ವಿರೋಧ ವ್ಯಕ್ತವಾಗಿದೆ. ಈಗಾಗಲೇ ಇಸ್ರೇಲ್ ಇರಾನ್ ಪಾಲಿಬಯ ಹೊಸ ನಾಯಕರನ್ನು ಟಾರ್ಗೆಟ್ ಮಾಡಿರುವುದು ಮತ್ತು ಇರಾನ್ ಒಳಗಡೆ ಜನಸಾಮಾನ್ಯರು ಖಮೇನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದುದರಿಂದ ಹೊಸ ನಾಯಕನನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಇದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am