ಬ್ರೇಕಿಂಗ್ ನ್ಯೂಸ್
01-12-21 06:18 pm HK Desk news ದೇಶ - ವಿದೇಶ
ಮುಂಬೈ, ಡಿ.1: ಬಾಲಿವುಡ್ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕಳೆದ ಬಾರಿ ವಿವಾದಕ್ಕೊಳಗಾಗಿದ್ದ ‘ಮಿಡ್ ಬ್ರೇನ್ ಪ್ರಿಡಿಕ್ಷನ್ ’ ಎನ್ನುವ ಪ್ರೋಗ್ರಾಮಿನ ಆಕ್ಷೇಪಾರ್ಹ ಅಂಶವನ್ನು ಎಪಿಸೋಡಿನಿಂದಲೇ ತೆಗೆದು ಹಾಕಲಾಗಿದೆ. ಸೋನಿ ಟಿವಿಯ ಅಧಿಕೃತ ಯೂಟ್ಯೂಬ್ ಪ್ಲಾಟ್ ಫಾರಂ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಪ್ರಸಾರ ಆಗಿದ್ದ ಕಾರ್ಯಕ್ರಮದ ವಿಡಿಯೋಗಳಿಗೆ ಕತ್ತರಿ ಹಾಕಲಾಗಿದೆ.
ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಕತ್ತರಿ ಹಾಕಲು ಕಾರಣವಾಗಿದ್ದು ಮಂಗಳೂರು ಮೂಲದ ವಿಚಾರವಾದಿ ನರೇಂದ್ರ ನಾಯಕ್ ಬರೆದಿದ್ದ ಪತ್ರ. ನರೇಂದ್ರ ನಾಯಕ್ ಸೋನಿ ಟಿವಿಗೆ ಹಾಕಿದ್ದ ಸವಾಲು, ವಾಹಿನಿ ತನ್ನ ಎಪಿಸೋಡನ್ನೇ ಕತ್ತರಿ ಹಾಕಲು ಕಾರಣವಾಗಿತ್ತು. ಸೋನಿ ಟಿವಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ನಡುವೆ ಮಿಡ್ ಬ್ರೇನ್ ಎನ್ನುವ ಹೆಸರಲ್ಲಿ ಸ್ಪೆಷಲ್ ಪ್ರೋಗ್ರಾಮ್ ಪ್ರಸಾರ ಮಾಡಲಾಗುತ್ತದೆ. ವಿಶೇಷ ಶಕ್ತಿಯಿಂದಾಗಿ ಮಕ್ಕಳು ಪುಸ್ತಕವನ್ನು ತೆರೆಯದೇ ಅದರಲ್ಲಿರುವ ವಿಚಾರಗಳನ್ನು ಓದುತ್ತಾರೆ, ಯಾವುದೇ ವಸ್ತುವನ್ನು ಬರಿಕಣ್ಣಿನಲ್ಲಿ ನೋಡದೇ ಗುರುತಿಸುತ್ತಾರೆ ಎಂಬುದನ್ನು ತೋರಿಸಲಾಗಿತ್ತು.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 13ನೇ ಸೀಸನಿನ 62ನೇ ಎಪಿಸೋಡಿನಲ್ಲಿ ಈ ರೀತಿಯ ಚಿತ್ರಣ ಪ್ರಸಾರವಾಗಿದ್ದು ಅದಕ್ಕೆ ಹಲವೆಡೆಗಳಿಂದ ಆಕ್ಷೇಪ ಕೇಳಿಬಂದಿತ್ತು. ಅಖಿಲ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರೂ ಆಗಿರುವ ನರೇಂದ್ರ ನಾಯಕ್ ನೇರವಾಗಿ ಸೋನಿ ಟಿವಿ ಕಾರ್ಯಕ್ರಮ ಮುಖ್ಯಸ್ಥರು ಮತ್ತು ಅಮಿತಾಬ್ ಬಚ್ಚನ್ ಅವರನ್ನುದ್ದೇಶಿ ಪತ್ರ ಬರೆದಿದ್ದರು. ಈ ರೀತಿಯ ಅವೈಜ್ಞಾನಿಕ ಮಾದರಿಯ ಚಿತ್ರಣವನ್ನು ತೋರಿಸುವ ಮೂಲಕ ನೀವು ಭಾರತದ ಗೌರವವನ್ನು ಹಾಳು ಮಾಡುತ್ತಿದ್ದೀರಿ. ಇದನ್ನು ನೋಡಿ ಜಗತ್ತು ಭಾರತೀಯರ ಬಗ್ಗೆ ನಗುವುದಕ್ಕೆ ಆಸ್ಪದ ಕೊಟ್ಟಿದ್ದೀರಿ. ಕಣ್ಣಿನ ರೆಟಿನಾಕ್ಕೆ ಯಾವುದೇ ಬಿಂಬದ ಬೆಳಕು ಪ್ರತಿಫಲನ ಆಗದೆ ಕಣ್ಣು ಹೇಗೆ ಅದನ್ನು ದೃಢಪಡಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮಿಡ್ ಬ್ರೇನ್ ಏಕ್ಟಿವೇಶನ್ ಎನ್ನುವ ಹೊಸ ಪರಿಕಲ್ಪನೆಯಡಿ ಮಕ್ಕಳಿಗೆ ಯಾವುದೇ ವಸ್ತುಗಳನ್ನು ನೋಡದೆ ಕಲ್ಪಿಸಿ, ಓದುವಂತೆ ಮಾಡಲು ಕಲಿಸಲಾಗುವುದು ಎಂದು ತೋರಿಸಲಾಗಿತ್ತು. ದೇಶ- ವಿದೇಶದಲ್ಲಿ ಖ್ಯಾತಿ ಗಳಿಸಿರುವ ಕಾರ್ಯಕ್ರಮದ ನಡುವೆ ಈ ರೀತಿಯ ಪ್ರೋಗ್ರಾಮ್ ಒಂದನ್ನು ಪ್ರಸಾರ ಮಾಡಿದ್ದು ಹಲವರ ಆಕ್ಷೇಪಕ್ಕೆ ಕಾರಣವಾಗಿತ್ತು. ಪ್ರೊ.ನರೇಂದ್ರ ನಾಯಕ್ ಮತ್ತು ಇತರ ವಿಜ್ಞಾನಿಗಳು, ಮಿಡ್ ಬ್ರೇನ್ ಏಕ್ಟಿವೇಶನ್ ಅನ್ನೋದು ಜನರನ್ನು ಮರುಳು ಮಾಡುವ ತಂತ್ರಗಾರಿಕೆ, ಹಣ ಮಾಡುವ ದಂಧೆ ಎಂದು ಜರೆದಿದ್ದರು. ಅಲ್ಲದೆ, ನರೇಂದ್ರ ನಾಯಕ್ ಈ ಬಗ್ಗೆ ಚಾಲೆಂಜ್ ಮಾಡಿದ್ದಲ್ಲದೆ, ಮಕ್ಕಳ ಹೆತ್ತವರು ಅನುಮತಿ ಕೊಟ್ಟಲ್ಲಿ ಅದನ್ನು ನಕಲಿ ಎಂದು ಪ್ರೂವ್ ಮಾಡಿ ತೋರಿಸಬಲ್ಲೆ ಎಂದು ಸವಾಲು ಹಾಕಿದ್ದರು.
ಕಳೆದ ಬಾರಿ ಪ್ರಸಾರವಾಗಿದ್ದ ಮತ್ತು ಈಗ ಡಿಲೀಟ್ ಮಾಡಲಾಗಿರುವ ಎಪಿಸೋಡ್ ನಲ್ಲಿ ನಟ ಅಮಿತಾಬ್ ಬಚ್ಚನ್, ಒಬ್ಬಳು ಬಾಲಕಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಪುಸ್ತಕವನ್ನು ತೋರಿಸಿ ಓದಿ ಹೇಳುವಂತೆ ತೋರಿಸುವ, ಜಾದೂ ರೀತಿಯ ವಿದ್ಯಮಾನ ತೋರಿಸಲಾಗಿತ್ತು. ಈ ಬಗ್ಗೆ ವಿಚಾರವಾದಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಆ ಅಂಶವನ್ನು ಕತ್ತರಿಸಲಾಗಿದೆ. ಇದೀಗ ಸೋನಿ ಟಿವಿಯ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಭಾಗವನ್ನು ಕಟ್ ಮಾಡಿ ರೀ ಅಪ್ಲೋಡ್ ಮಾಡಲಾಗಿದೆ. ಅಲ್ಲದೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸೋನಿ ಟಿವಿ ಸಂಸ್ಥೆ ಪ್ರತಿನಿಧಿಗಳು ತಿಳಿಸಿದ್ದಾರೆ.
A portion of a recent episode of Amitabh Bachchan’s Kaun Banega Crorepati, which depicted the unscientific practice of “mid-brain activation”, has been pulled down from several official platforms, including YouTube, after it was called out by rationalist Narendra Nayak. The questionable portion of the video, which has been pulled down by Sony Entertainment Television India, showed a young girl claiming to be able to read a book while being blindfolded, by merely “smelling” it.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
09-10-25 12:12 pm
HK News Desk
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
09-10-25 11:58 am
Mangalore Correspondent
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am