ಬ್ರೇಕಿಂಗ್ ನ್ಯೂಸ್
01-09-20 12:01 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 01: ನಿನ್ನೆ ಸಂಜೆ ಮೃತಪಟ್ಟಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ 2ಕ್ಕೆ ನಡೆಯಲಿದೆ. ದೆಹಲಿಯ ಲೋಧಿ ರಸ್ತೆಯ ಕ್ರಿಮೇಟೋರಿಯಮ್ನಲ್ಲಿ ಮಾಜಿ ರಾಷ್ಟ್ರಪತಿಗಳ ಅಂತಿಮ ವಿಧಿವಿಧಾನ ನಡೆಯಲಿದೆ. ಅದಕ್ಕೂ ಮುನ್ನ ರಾಜಾಜಿ ಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 9ರಿಂದ 12ಗಂಟೆಯವರೆಗೂ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ಇದೇ ವೇಳೆ, ಕೇಂದ್ರ ಸರ್ಕಾರ 84 ವರ್ಷದ ಪ್ರಣಬ್ ಮುಖರ್ಜಿ ಅವರ ಸಾವಿಗೆ ಗೌರವ ಸೂಚಕವಾಗಿ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ಸೆಪ್ಟೆಂಬರ್ 6ರವರೆಗೆ ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಾಡುತ್ತದೆ. ಸರ್ಕಾರದಿಂದ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ.
ಹಿರಿಯ ಕಾಂಗ್ರೆಸ್ ಮುಖಂಡರಾಗಿ, ಬಳಿಕ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿ ಅವರು ವಿವಿಧ ಅನಾರೋಗ್ಯಗಳ ಕಾರಣದಿಂದ ಆಗಸ್ಟ್ 10ರಂದು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರಲ್ ಆಸ್ಪತ್ರೆಗೆ ದಾಖಲಅಗಿದ್ದರು. ಅವರ ಮಿದುಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರ ಅವರು ಕೋಮಾಗೆ ಜಾರಿದರು. ಕೋವಿಡ್-19 ಸೋಂಕು ಕೂಡ ತಗುಲಿ ಅವರ ಅನಾರೋಗ್ಯ ಇನ್ನಷ್ಟು ಬಿಗಡಾಯಿಸಿತು. ಶ್ವಾಸಕೋಶದ ಸೋಂಕಿನಿಂದ ಸೆಪ್ಟಿಕ್ ಶಾಕ್ ಆಗಿ ಅವರು ಸೋಮವಾರ ಸಂಜೆ 4:30ಕ್ಕೆ ಕೊನೆಯುಸಿರೆಳೆದರು.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am