ಬ್ರೇಕಿಂಗ್ ನ್ಯೂಸ್
28-05-21 05:35 pm Headline Karnataka News Network ದೇಶ - ವಿದೇಶ
ನವ ದೆಹಲಿ,ಮೇ 28: "ಭಾರತದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಲು ಹಾಗೂ ಇದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಬೇಜವಾಬ್ದಾರಿ ನಡೆ ಮತ್ತು ನೌಟಂಕಿ ನಾಟಕಗಳೇ ಕಾರಣ. ಏಕೆಂದರೆ ಅವರಿಗೆ ಕೊರೋನಾ ಸೋಂಕಿನ ಬಗ್ಗೆ ಏನೂ ಗೊತ್ತಿಲ್ಲ" ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಇಂದು ಆನ್ಲೈನ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, "ಕೊರೋನಾ ಮೊದಲ ಅಲೆ ಯಾರಿಗೂ ಅರ್ಥವಾಗಲಿಲ್ಲ…ಆದರೆ ಎರಡನೆಯ ಅಲೆಯ ಬಗ್ಗೆ ಎಲ್ಲರಲ್ಲೂ ಭಯ ಇತ್ತು. ವಿದೇಶಗಳಲ್ಲಿ ಇದನ್ನು ಸರಿಯಾಗಿ ನಿಭಾಯಿಸಿದ್ದರು. ಆದರೆ, ಭಾರತದಲ್ಲಿ ಈ ಸೋಂಕು ಉಲ್ಬಣವಾಗಲು ಪ್ರಧಾನಮಂತ್ರಿ ಮೋದಿಯೇ ಜವಾಬ್ದಾರರಾಗಿದ್ದಾರೆ. ಅವರ ಸಾಹಸಗಳು(ಸ್ಟಂಟ್‌ಗಳು), ಸಾವಿನ ಬಗ್ಗೆ ಅವರ ಸುಳ್ಳುಗಳು ಮತ್ತು ನೌಟಂಕಿ ನಾಟಕಗಳೇ ಈ ದುರಂತಗಳಿಗೆಲ್ಲಾ ಕಾರಣ" ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿರುವ ರಾಹುಲ್ ಗಾಂಧಿ, "ಭಾರತದ ಪ್ರಧಾನಿ ಓರ್ವ ಉತ್ತರ ಈವೆಂಟ್ ಮ್ಯಾನೇಜರ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಗಮನವೆಲ್ಲಾ ಅವರ ಕಾರ್ಯಕ್ರಮಗಳ ಮೇಲಿದೆಯೇ ವಿನಃ ಜನರ ಪರವಾಗಿಲ್ಲ. ಆದರೆ, ನಮಗೆ ಬೇಕಾದದ್ದು ಅವರ ಕಾರ್ಯಕ್ರಮಗಳಲ್ಲ ಬದಲಾಗಿ ಕಾರ್ಯತಂತ್ರಗಳು. ದುರಾದೃಷ್ಟವಶಾತ್ ಮೋದಿ ಅವರಿಗೆ ವೈರಸ್ ಬಗ್ಗೆ ಏನೂ ಗೊತ್ತಿಲ್ಲ" ಎಂದು ಆರೋಪಿಸಿದ್ದಾರೆ.
"ಕೊರೋನಾ ದೇಶವನ್ನು ಪ್ರವೇಶಿಸಲು ನೀವು ಬಾಗಿಲು ತೆರೆದಿದ್ದೀರಿ, ಆದರೆ ಇನ್ನೂ ಬಾಗಿಲು ಮುಚ್ಚಿಲ್ಲ. ದೇಶದ ಜನಸಂಖ್ಯೆಯ ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದ್ದೀರಿ, ಉಳಿದವರು ಇನ್ನೂ ಅಪಾಯದಲ್ಲಿದ್ದಾರೆ. ಅಮೆರಿಕ ತನ್ನ ಅರ್ಧದಷ್ಟು ಜನಸಂಖ್ಯೆಗೆ ಲಸಿಕೆ ನೀಡಿದೆ. ಬ್ರೆಜಿಲ್ ಶೇ.8 ರಿಂದ 9% ದಷ್ಟು ಲಸಿಕೆ ನೀಡಿದೆ. ಅವರು ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸುವುದಿಲ್ಲ, ಆದರೆ ನಾವು ಹೆಸರಿಗಷ್ಟೇ ವಿಶ್ವದಲ್ಲಿ ಅತಿಹೆಚ್ಚು ಲಸಿಕೆ ಉತ್ಪಾದಿಸುವ ದೇಶ. ಆದರೆ, ನಮ್ಮ ಜನಗಳಿಗೇ ಲಸಿಕೆ ನೀಡಲಾಗುತ್ತಿಲ್ಲ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಭಾರತವು ತನ್ನ ವ್ಯಾಕ್ಸಿನೇಷನ್ ತಂತ್ರವನ್ನು ಸರಿಯಾಗಿ ಮಾಡದಿದ್ದರೆ, ಕೊರೋನಾ ವೈರಸ್‌ನ ಅನೇಕ ಅಲೆಗಳು ದೇಶವನ್ನು ಕಾಡುವ ಭೀತಿ ಇದೆ. ಮಾರಣಾಂತಿಕ ಕೊರೋನಾ ಮತ್ತು ಲಾಕ್‌ಡೌನ್‌ಗಳಿಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗ ಬಲ್ಲವು. ಸಾಮಾಜಿಕ ಅಂತರ ಮತ್ತು ಮಾಸ್ಕ್‌ಗಳು ತಾತ್ಕಾಲಿಕವಾದವು. ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದಿದ್ದರೆ, ಭಾರತವು ಸೋಂಕಿನ ಅನೇಕ ಅಲೆಗಳನ್ನು ಎದುರಿಸುವುದು ಸಾಧ್ಯವಿಲ್ಲ.
ಲಸಿಕೆ ನೀಡುವ ಪ್ರಕ್ರಿಯೆ ಈ ವೇಗದಲ್ಲಿ ಮುಂದುವರಿದರೆ, ಸೋಂಕಿನ ಮೂರನೆಯ ಮತ್ತು ನಾಲ್ಕನೆಯ ಅಲೆಗಳೂ ಬರಲಿದೆ. ಏಕೆಂದರೆ ವೈರಸ್ ರೂಪಾಂತರಗೊಳ್ಳುತ್ತದೆ. ನಾವು ರೂಪಾಂತರ ಹೊಂದುತ್ತಿರುವ ಕಾಯಿಲೆಯಾದ ಕೊರೋನಾ ವೈರಸ್‌ನೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಆದರೆ ಸರ್ಕಾರವು ವಿರೋಧ ಪಕ್ಷದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಭಾವಿಸುತ್ತಿದೆಯೆ ಹೊರತು ವೈರಸ್ ಜೊತೆ ಹೋರಾಡುತ್ತಿದ್ದೇವೆ ಎಂದಲ್ಲ" ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇದು ಸುಳ್ಳನ್ನು ಹರಡುವ ಸಮಯವಲ್ಲ. ಸರ್ಕಾರ ಸತ್ಯ ಸಂಧತೆಯಿಂದ ಕೂಡಿರಬೇಕು. ಇದು ದೇಶದ ಭವಿಷ್ಯವನ್ನು, ಜೀವಗಳನ್ನು ಉಳಿಸುವ ಪ್ರಶ್ನೆಯಾಗಿದೆ. ನಾವು ಸರ್ಕಾರದ ಶತ್ರುಗಳಲ್ಲ, ಪ್ರತಿಪಕ್ಷಗಳು ದಾರಿ ತೋರಿಸುತ್ತಿವೆ. ಅವರು ಫೆಬ್ರವರಿಯಲ್ಲೇ ನಮ್ಮ ಮಾತನ್ನು ಆಲಿಸಿದ್ದರೆ ನಾವು ಈ ಬಿಕ್ಕಟ್ಟನ್ನು ಎದುರಿಸ ಬೇಕಾಗುತ್ತಿರಲಿಲ್ಲ" ಎಂದು ರಾಹುಲ್ ಗಾಂಧಿ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಕಿವಿ ಮಾತು ಹೇಳಿದ್ದಾರೆ.
LIVE: My interaction with members of the Press about GOI’s Covid vaccine disaster. https://t.co/YbC8iSe4aw
— Rahul Gandhi (@RahulGandhi) May 28, 2021
Rahul Gandhi, in one of his sharpest attacks yet on the government's handling of Covid and the deadly second surge, said today that Prime Minister Narendra Modi was responsible for the second wave and that he "did not understand Covid at all". The Congress leader also predicted "multiple waves" in the country if vaccinations continued at the current pace. Soon after, the government hit back and declared that vaccinations would be completed before December this year.
15-08-25 07:15 pm
Bangalore Correspondent
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm