ಬ್ರೇಕಿಂಗ್ ನ್ಯೂಸ್
26-05-21 08:57 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 26: ಅಲೋಪತಿ ವೈದ್ಯಕೀಯವೇ ಸುಳ್ಳು, ಮೂರ್ಖ ವಿಜ್ಞಾನ ಎಂದು ಹೇಳಿಕೆ ನೀಡಿದ್ದ ಪತಂಜಲಿ ಗುರು ಬಾಬಾ ರಾಮದೇವ್ ವಿರುದ್ಧ ಐಎಂಎ ಒಂದು ಸಾವಿರ ಕೋಟಿ ರೂ. ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದೆ. ತಮ್ಮ ಹೇಳಿಕೆಯ ಬಗ್ಗೆ 15 ದಿನಗಳಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಈ ಬಗ್ಗೆ ಸಾವಿರ ಕೋಟಿ ಪರಿಹಾರಕ್ಕಾಗಿ ಪ್ರಕರಣ ದಾಖಲಿಸುತ್ತೇವೆ ಎಂದು ಉತ್ತರಾಖಂಡ ರಾಜ್ಯ ಐಎಂಎ ಘಟಕ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬಾಬಾ ರಾಮದೇವ್ ವಿರುದ್ಧ ಆರು ಪುಟಗಳ ನೋಟೀಸ್ ನೀಡಿರುವ ಉತ್ತರಾಖಂಡ ಐಎಂಎ ಘಟಕದ ಕಾರ್ಯದರ್ಶಿ ಅಜಯ್ ಖನ್ನಾ, ರಾಮದೇವ್ ಅಲೋಪತಿ ವೈದ್ಯರನ್ನು ಅವಮಾನಿಸಿದ್ದಾರೆ. ನಮ್ಮ ಘಟಕದ ಎರಡು ಸಾವಿರ ಮಂದಿ ಸದಸ್ಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
15 ದಿನಗಳಲ್ಲಿ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸದಿದ್ದರೆ ಯೋಗಗುರು ವಿರುದ್ಧ ಸೆಕ್ಷನ್ 499 ಪ್ರಕಾರ ಕ್ರಿಮಿನಲ್ ಕೇಸು ದಾಖಲು ಮಾಡುತ್ತೇವೆ. ಪ್ರತೀ ಸದಸ್ಯನಿಗೆ 50 ಲಕ್ಷ ರೂ.ನಂತೆ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇವೆ ಎಂದು ವಕೀಲರ ಮೂಲಕ ಹೇಳಿದ್ದಾರೆ.
ಇದೇ ವೇಳೆ, ಪತಂಜಲಿಯಿಂದ ನೀಡಲಾಗುತ್ತಿರುವ ಕೊರೊನಿಲ್ ಕಿಟ್ ಬಗ್ಗೆಯೂ ಐಎಂಎ ಆಕ್ಷೇಪ ಎತ್ತಿದೆ. ಕೊರೊನಾಗೆ ಔಷಧಿ ಎನ್ನುವ ರೀತಿ ಬಿಂಬಿಸಿ ಜಾಹೀರಾತು ನೀಡಲಾಗಿದೆ. ಅದನ್ನೂ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದರ ವಿರುದ್ಧವೂ ಎಫ್ಐಆರ್ ದಾಖಲು ಮಾಡುತ್ತೀವಿ ಎಂದು ಎಚ್ಚರಿಸಲಾಗಿದೆ.
ಅಲೋಪತಿ ವೈದ್ಯರು ಮತ್ತು ಫಾರ್ಮಾ ಕಂಪನಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಾಬಾ ರಾಮದೇವ್, 25 ಪ್ರಶ್ನೆಗಳನ್ನು ಮುಂದಿಟ್ಟು ಅಲೋಪತಿ ವೈದ್ಯಕೀಯ ವಿಜ್ಞಾನವನ್ನೇ ಅಣಕಿಸಿದ್ದಾರೆ. ಅಲೋಪತಿಯಲ್ಲಿ ಮಧುಮೇಹ, ಬಿಪಿಗಳಿಗೆ ಶಾಶ್ವತ ಪರಿಹಾರ ಇದೆಯೇ, ಸಂಧಿವಾತ, ಥೈರಾಯ್ಡ್, ಅಸ್ತಮಾಗೆ ಶಾಶ್ವತ ಚಿಕಿತ್ಸೆ ಇದೆಯೇ, ಹೆಪಟೈಟಿಸ್, ಪಿತ್ತ ಜನಕಾಂಗದ ಸಿರೋಸಿಸ್ ಗುಣಪಡಿಸುವ ಚಿಕಿತ್ಸೆ ಇದೆಯೇ, ತಲೆನೋವು, ಮೈಗ್ರೇನ್ ಗೆ ಶಾಶ್ವತ ಪರಿಹಾರ ಇದೆಯೇ, ಪಾರ್ಕಿನ್ಸನ್ ಕಾಯಿಲೆಗೆ ಶಾಶ್ವತ ಚಿಕಿತ್ಸೆ ಇದೆಯೇ ಇತ್ಯಾದಿ 25 ಪ್ರಶ್ನೆಗಳನ್ನು ಕೇಳಿ ಫಾರ್ಮಾ ಸಂಸ್ಥೆಗಳನ್ನೇ ದಂಗು ಬಡಿಸಿದ್ದಾರೆ.
Yoga guru Ramdev has been served a defamation notice by the Indian Medical Association’s (IMA’s) Uttarakhand division for his recent statements questioning the efficacy of allopathy medicines.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm