ಬ್ರೇಕಿಂಗ್ ನ್ಯೂಸ್
26-05-21 08:48 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 26: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಐಟಿ ರೂಲ್ಸ್ ಅನ್ನು ಪ್ರಶ್ನಿಸಿ ವಾಟ್ಸಪ್ ಕಂಪನಿ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಗರಂ ಆಗಿದೆ. ಭಾರತದಲ್ಲಿ ಕಾರ್ಯ ವೆಸಗುವ ಯಾವುದೇ ಕಂಪನಿ ಈ ನೆಲದ ಕಾನೂನನ್ನು ಗೌರವಿಸಬೇಕು. ನಿಯಮಗಳ ನೆಪದಲ್ಲಿ ಯಾವುದೇ ನಾಗರಿಕನ ಖಾಸಗಿತನಕ್ಕೆ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ. ಖಾಸಗಿತನದ ಹಕ್ಕನ್ನು ನಾವು ಗೌರವಿಸುತ್ತೇವೆ. ಅದನ್ನು ಉಲ್ಲಂಘಿಸುವ ಇರಾದೆಯೂ ನಮಗಿಲ್ಲ ಎಂದು ಸಚಿವಾಲಯದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ವಾಟ್ಸಪ್ ಕಂಪನಿ, ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ತಪ್ಪು ಅರ್ಥ ಬರುವಂತೆ ನಡೆದುಕೊಳ್ಳುತ್ತಿದೆ. ಆದರೆ, ಭಾರತದಲ್ಲಿ ಖಾಸಗಿತನದ ಹಕ್ಕು ಮೂಲಭೂತ ಹಕ್ಕೆನ್ನುವುದು ಗೊತ್ತಿದೆ. ಹಾಗೆಂದು ಕೆಲವು ನಿರ್ಬಂಧಗಳೂ ಇವೆ ಎನ್ನುವುದನ್ನು ಮರೆಯಬಾರದು. ವಾಟ್ಸಪ್ ನಲ್ಲಿ ಯಾವುದೇ ಆಕ್ಷೇಪಾರ್ಹ ಸಂದೇಶದ ಮೂಲಕರ್ತೃವನ್ನು ಪತ್ತೆ ಮಾಡುವ ಸಂದರ್ಭದಲ್ಲಿ ಖಾಸಗಿತನದ ಹಕ್ಕಿನ ನೆಪದಲ್ಲಿ ನುಣುಚಿಕೊಳ್ಳುವಂತಿಲ್ಲ. ಐಟಿ ಆಕ್ಟ್ 4(2) ಪ್ರಕಾರ ಮೂಲಪುರುಷನ ಪತ್ತೆ ಮಾಡುವುದಕ್ಕೆ ಅವಕಾಶವಿದೆ ಎಂದು ಹೇಳಿಕೆ ನೀಡಿದೆ.
ಹಾಗೆಂದು ವಾಟ್ಸಪ್ ಎಲ್ಲ ಸಂದರ್ಭಗಳಲ್ಲಿ ಖಾಸಗಿತನಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಕೆಂದು ನಾವು ಬಯಸುವುದಿಲ್ಲ. ದೇಶದ ಭದ್ರತೆಗೆ ಧಕ್ಕೆ ತರುವ ರೀತಿ ನಡೆದುಕೊಂಡ ವೇಳೆ ಅಥವಾ ಯಾವುದೇ ಸಂದೇಶಗಳು ಗಂಭೀರ ಅಪರಾಧಗಳಿಗೆ ಕಾರಣವಾಗುವ ಸಾಧ್ಯತೆ ಇದ್ದಾಗ ಅದರ ಮೂಲಕರ್ತನನ್ನು ಪತ್ತೆ ಮಾಡುವ ಅಗತ್ಯವಿರುತ್ತದೆ. ತನಿಖಾ ತಂಡಗಳಿಗೆ ಅಗತ್ಯವಾದ ಸಂದರ್ಭದಲ್ಲಿ ವಾಟ್ಸಪ್ ಜಾಲತಾಣಗಳು ಸಹಕರಿಸಬೇಕೆಂಬ ನೆಲೆಯಲ್ಲಿ ಈ ಕಾನೂನು ತರಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ.
ಇಂಗ್ಲೆಂಡ್, ಅಮೆರಿಕ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಇದಕ್ಕಿಂತ ಕಠಿಣ ನೀತಿಗಳನ್ನು ಹೇರಲಾಗಿದೆ. ಹಾಗೆ ನೋಡಿದರೆ, ಬೇರೆ ಕೆಲವು ರಾಷ್ಟ್ರಗಳು ವಿಧಿಸುತ್ತಿರುವ ರೀತಿ ನಿಯಮಗಳನ್ನು ಭಾರತದಲ್ಲಿ ಹೇರಲಾಗಿಲ್ಲ. ಅಲ್ಲಿಗಿಂತ ತುಂಬ ಕಡಿಮೆ ಮಾನದಂಡಗಳನ್ನು ನಾವು ಹಾಕುತ್ತಿದ್ದೇವೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.
ಐಟಿ ಸಚಿವಾಲಯವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುತ್ತಿರುವ ಸಂದರ್ಭದಲ್ಲೇ ವಾಟ್ಸಪ್ ಜಾಲತಾಣ ದೆಹಲಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದು, ಸರಕಾರದ ಹೊಸ ಸೂತ್ರಗಳು ವ್ಯಕ್ತಿಯ ಖಾಸಗಿತನವನ್ನು ಪ್ರಶ್ನಿಸುವಂತಿದೆ ಎಂದು ದೂರು ದಾಖಲಿಸಿದೆ.
WhatsApp has filed a lawsuit in the Delhi High Court against the government's new digital rules that take effect today, saying these would compel it to break privacy protections to users. The Facebook-owned messaging service filed its petition on Tuesday against the rules that will require it to "trace" the origin of messages sent on the service, which it says is a violation of privacy.
15-08-25 07:15 pm
Bangalore Correspondent
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm