ಬ್ರೇಕಿಂಗ್ ನ್ಯೂಸ್
20-05-21 11:00 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಮೇ 20: ಕೇರಳದಲ್ಲಿ ಇದೇ ಮೊದಲ ಬಾರಿಗೆ ರಾಜಕಾರಣಿಯಾಗಿ ಬದಲಾಗಿರುವ ಪತ್ರಕರ್ತೆಯೊಬ್ಬರು ಮಂತ್ರಿಯಾಗುವ ಯೋಗ ಪಡೆದಿದ್ದಾರೆ. ಮಲಯಾಳಂ ಸುದ್ದಿ ವಾಹಿನಿಗಳಲ್ಲಿ ಆ್ಯಂಕರ್ ಆಗಿದ್ದ ವೀಣಾ ಜಾರ್ಜ್ ಎರಡನೇ ಬಾರಿಗೆ ಶಾಸಕರಾಗಿದ್ದು ಈ ಬಾರಿ ಪಿಣರಾಯಿ ವಿಜಯನ್ ಸಂಪುಟ ಸೇರಿದ್ದಾರೆ.
ವಿಶೇಷ ಅಂದ್ರೆ, ವೀಣಾ ಜಾರ್ಜ್ ಕಳೆದ ಬಾರಿ ಆರೋಗ್ಯ ಸಚಿವೆಯಾಗಿದ್ದ ಶೈಲಜಾ ಟೀಚರ್ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗುತ್ತಿದೆ. 2016ರಲ್ಲಿ ಪತ್ತನಂತಿಟ್ಟ ಜಿಲ್ಲೆಯ ಆರನ್ಮುಳ ಕ್ಷೇತ್ರದಲ್ಲಿ ಶಾಸಕರಾಗಿ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದ ವೀಣಾ ಜಾರ್ಜ್ ಈ ಬಾರಿ ಅದೇ ಕ್ಷೇತ್ರದಲ್ಲಿ 19,003 ಮತಗಳಿಂದ ಗೆದ್ದಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ಎಸ್ಎಫ್ಐನಲ್ಲಿ ಗುರುತಿಸಿಕೊಂಡಿದ್ದ ವೀಣಾ ಆಬಳಿಕ ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯಕರ್ತೆಯಾಗಿದ್ದರು. 2016ರಲ್ಲಿ ಕಾಂಗ್ರೆಸಿನಲ್ಲಿ ಹಾಲಿ ಶಾಸಕರಾಗಿದ್ದ ಸದಾಶಿವನ್ ನಾಯರ್ ಅವರನ್ನು 7,646 ಮತಗಳಿಂದ ಸೋಲಿಸಿ ಕ್ಷೇತ್ರವನ್ನು ಎಡರಂಗದ ಹಿಡಿತಕ್ಕೆ ತಂದಿದ್ದರು.
ಎಂಎಸ್ಸಿ ಫಿಸಿಕ್ಸ್ ನಲ್ಲಿ ರ್ಯಾಂಕ್ ಗಳಿಸಿದ್ದ ವೀಣಾ ಜಾರ್ಜ್ ಬಳಿಕ ಬಿಎಡ್ ಪೂರೈಸಿದ್ದರು. ಆದರೆ ಶಿಕ್ಷಕಿಯಾಗದೆ ಪತ್ರಕರ್ತೆಯಾಗಿ ಗುರುತಿಸಿದ್ದರು. 45 ವರ್ಷದ ವೀಣಾ ಈಗ ಎರಡು ಮಕ್ಕಳ ತಾಯಿ. ಪತಿ ಡಾ. ಜಾರ್ಜ್ ಜೋಸೆಫ್ ಪ್ರೌಢಶಾಲೆಯಲ್ಲಿ ಶಿಕ್ಷಕ. ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚ್ ನಲ್ಲಿ ಕಾರ್ಯದರ್ಶಿಯೂ ಆಗಿದ್ದಾರೆ.
ವೀಣಾ ಅಲ್ಲದೆ, ಇನ್ನಿಬ್ಬರು ಮಹಿಳೆಯರು ಕೂಡ ಪಿಣರಾಯಿ ಸಂಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎ. ವಿಜಯರಾಘವನ್ ಪತ್ನಿ ಪ್ರೊ.ಆರ್. ಬಿಂದು ಮತ್ತು ಚಾದಯಮಂಗಲಂ ಸಿಪಿಐ ಶಾಸಕಿ ಜೆ. ಚಿಂಚು ರಾಣಿ ಕೂಡ ಸಚಿವೆಯಾಗಿದ್ದಾರೆ. ಸಿಪಿಐನಿಂದ ಇದೇ ಮೊದಲಿಗೆ ಮಹಿಳೆಯೊಬ್ಬರಿಗೆ ಸ್ಥಾನ ನೀಡಲಾಗಿದೆ.
ಕಳೆದ ಬಾರಿ ಕೊರೊನಾ ನಿರ್ವಹಣೆಯಲ್ಲಿ ಹೆಸರು ಮಾಡಿದ್ದ ಶೈಲಜಾ ಟೀಚರನ್ನು ಕ್ಯಾಬಿನೆಟ್ ನಿಂದ ಕೈಬಿಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಪಿಣರಾಯಿ ವಿಜಯನ್, ಅದು ಪಕ್ಷದ ನಿರ್ಧಾರ. ಹಳಬರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ಎರಡು ಬಾರಿಗಿಂತ ಹೆಚ್ಚು ಸಚಿವರಾಗಲು ಅವಕಾಶ ಇಲ್ಲ ಎಂದಿದ್ದಾರೆ. ಕಣ್ಣೂರಿನಲ್ಲಿ 67 ಸಾವಿರ ಮತಗಳಿಂದ ಗೆಲುವು ಕಂಡಿದ್ದ ಶೈಲಜಾರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ.
For the first time in its history, a woman journalist-turned politician will become a minister in Kerala. CPI(M) member Veena George, who had excelled as journalist and news anchor in various Malayalam news channels, has been selected by the party to be a minister in the Pinarayi Vijayan-led government.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm