ಬ್ರೇಕಿಂಗ್ ನ್ಯೂಸ್
28-08-20 01:15 pm Dhruthi Anchan - Correspondant ದೇಶ - ವಿದೇಶ
ಮುಂಬೈ, ಆಗಸ್ಟ್ 27: ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಮ್‌ಗೆ ಗ್ರಾಹಕರೊಬ್ಬರ ಬಳಿ ದರಕ್ಕಿಂತ ೧೦ ರೂ.ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿದ್ದಕ್ಕಾಗಿ ಮುಂಬೈನ ಸೆಂಟ್ರಲ್ ಶಗುನ್ ವೆಜ್ ರೆಸ್ಟೋರೆಂಟ್‌ಗೆ ಜಿಲ್ಲಾ ಗ್ರಾಹಕ ವೇದಿಕೆ ೨ ಲಕ್ಷ ರೂ. ದಂಡ ವಿಧಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಆರು ವರ್ಷಗಳ ಹಿಂದೆ ಅಂಗಡಿ ಮಾಲಿಕರು ಗ್ರಾಹಕನ ಬಳಿಯಲ್ಲಿ ಎಂ ಆರ್ ಪಿ ರೇಟ್ ೧೬೫ ರೂ. ಗಳ ಬದಲು ೧೭೫ ರೂ.ಗಳನ್ನು ಪಡೆದಿತ್ತು. ಈ ಕುರಿತು ರೆಸ್ಟೋರೆಂಟ್‌ರವರ ಬಳಿ ವಿಚಾರಿಸಿದಾಗ, ಐಸ್‌ಕ್ರೀಮ್ ತೆಗೆದಿಡಲು ವೆಚ್ಚ ತಗಲುವುದಲ್ಲದೆ, ಅಂಗಡಿ ಹಾಗೂ ರೆಸ್ಟೋರೆಂಟ್ ನಡುವೆ ವ್ಯತ್ಯಾಸ ಇದೆಯೆಂದು ಹೇಳಿತ್ತು. ಆದರೆ ಗ್ರಾಹಕ ತಾವು ಹೋಟೆಲ್‌ನ ಬೇರೆ ಯಾವುದೇ ಸೇವೆಯಾಗಲಿ ಅಥವಾ ಅಲ್ಲಿನ ವಸ್ತುವನ್ನಾಗಲಿ ಬಳಸಿಲ್ಲ. ಕೌಂಟರ್‌ನಿಂದಲೆ ಐಸ್ ಕ್ರೀಂ ತೆಗೆದುಕೊಂಡು ಹೋಗಿದ್ದಾಗಿ ದೂರಿನಲ್ಲಿ ಹೇಳಿದ್ದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಜಾಧವ್ ಎಂಬುವವರು ದೂರುದಾರರಾಗಿದ್ದು, ಇವರು ಜೂನ್ ೮,೨೦೧೪ ರಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಮನೆಯಲ್ಲಿದ್ದ ಅತಿಥಿಗಳಿಗೆಂದು ಐಸ್ ಕ್ರೀಂ ಖರೀದಿಸಲು ರೆಸ್ಟೋರೆಂಟ್‌ಗೆ ಹೋಗಿದ್ದಾಗಿ ಹಾಗೂ ತಮಗೆ ಒಂದರ ಬೆಲೆಗೆ ಎರಡು ಫ್ಯಾಮಿಲಿ ಪ್ಯಾಕ್ ದೊರೆತಿದ್ದರೂ ದರ ಹಾಗೂ ಹೆಚ್ಚುವರಿ ಬಿಲ್ ನೋಡಿ ಆಘಾತವಾಯಿತು ಎಂದು ದೂರಿನಲ್ಲಿ ಹೇಳಿದ್ದರು.
ಇವುಗಳನ್ನೆಲ್ಲಾ ಪರಿಶೀಲಿಸಿದ ಗ್ರಾಹಕ ವೇದಿಕೆ ಹೆಚ್ಚುವರಿ ದರ ವಿಧಿಸಿದ್ದು ಸರಿಯಲ್ಲ ಎಂದು ರೆಸ್ಟೋರೆಂಟ್‌ಗೆ ದಂಡ ವಿಧಿಸಿದೆ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am