ಬ್ರೇಕಿಂಗ್ ನ್ಯೂಸ್
18-05-21 04:34 pm Headline Karnataka News Network ದೇಶ - ವಿದೇಶ
Photo credits : Representative Image
ನವದೆಹಲಿ, ಮೇ 18: ಕೊರೊನಾ ಸೋಂಕು ಏನೆಲ್ಲಾ ವಿಚಿತ್ರಗಳಿಗೆ ಸಾಕ್ಷಿಯಾಗುತ್ತಿದೆ ಅನ್ನೋದನ್ನು ಊಹಿಸುವಂತಿಲ್ಲ. ಉತ್ತರ ಪ್ರದೇಶದ ಬಾರಾಮತಿ ಜಿಲ್ಲೆಯಲ್ಲಿ ಕುಟುಂಬವೊಂದು 76 ವರ್ಷದ ಅಜ್ಜಿ ಕೊರೊನಾ ಸೋಂಕಿನಿಂದ ಸತ್ತಿದ್ದಾರೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿತ್ತು. ಆದರೆ, ಇನ್ನೇನು ಅಂತ್ಯವಿಧಿ ಮುಗಿಸಬೇಕು ಎನ್ನುವಷ್ಟರಲ್ಲಿ ಅಜ್ಜಿ ಕಣ್ಣು ಬಿಟ್ಟುಕೊಂಡು ಅಳಲು ಆರಂಭಿಸಿದ್ದಾರೆ. ಅಲ್ಲಿ ಸೇರಿದ್ದ ಕುಟುಂಬಸ್ಥರು ಅಚ್ಚರಿಯಿಂದ ಗಲಿಬಿಲಿಗೊಂಡಿದ್ದಾರೆ.
ಬಾರಾಮತಿ ಜಿಲ್ಲೆಯ ಮುಧಾಳೆ ಎಂಬ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ. ಹೀಗೆ ಸತ್ತು ಬದುಕಿದ ವೃದ್ಧ ಮಹಿಳೆಯನ್ನು 76 ವರ್ಷದ ಶಕುಂತಳಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಕೋವಿಡ್ ಪಾಸಿಟಿವ್ ಆಗಿದ್ದ ಮಹಿಳೆಯನ್ನು ಮನೆಯಲ್ಲೇ ಐಸೋಲೇಶನ್ ಮಾಡಲಾಗಿತ್ತು. ಆದರೆ, ವೃದ್ಧೆಯಾಗಿದ್ದರಿಂದ ಮಹಿಳೆಯ ದೇಹಸ್ಥಿತಿ ಬಿಗಡಾಯಿಸಿತ್ತು. ಹೀಗಾಗಿ ವೃದ್ಧೆಯನ್ನು ಮೇ 10ರಂದು ಬಾರಾಮತಿಯ ಖಾಸಗಿ ಆಸ್ಪತ್ರೆ ಒಂದಕ್ಕೆ ಒಯ್ಯಲಾಯಿತು.
ಕುಟುಂಬಸ್ಥರು ಆಸ್ಪತ್ರೆಯಲ್ಲಿ ವಿಚಾರಿಸಿದಾಗ, ಬೆಡ್ ಸಿಗಲಿಲ್ಲ. ಹೊರಗೆ ಕಾರಿನಲ್ಲಿ ಮಲಗಿದ್ದ ಅಜ್ಜಿ ಕೋಮಾಕ್ಕೆ ಜಾರಿದ್ದಲ್ಲದೆ, ನಿಶ್ಚಲವಾಗಿ ಬಿದ್ದುಕೊಂಡಿದ್ದರು. ಇದನ್ನು ಕಂಡ ಕುಟುಂಬಸ್ಥರು ಅಜ್ಜಿ ಮೃತಪಟ್ಟಿದ್ದಾಗಿ ನಂಬಿ ನೇರವಾಗಿ ಮನೆಗೆ ತಂದಿದ್ದಾರೆ. ಇತರೇ ಕುಟುಂಬಸ್ಥರಿಗೂ ಈ ಬಗ್ಗೆ ತಿಳಿಸಿದ್ದು, ಎಲ್ಲರೂ ಅಜ್ಜಿಯನ್ನು ಕೊನೆಯ ಬಾರಿಗೆ ನೋಡಲು ಮನೆಗೆ ಆಗಮಿಸಿದ್ದರು. ಜೊತೆಗೆ ಅಂತ್ಯಕ್ರಿಯೆ ನಡೆಸುವುದಕ್ಕೂ ತಯಾರಿ ನಡೆಸಿದ್ದರು.
ಅತ್ತ ಅಂತ್ಯವಿಧಿಗಳನ್ನು ನಡೆಸಲು ಮನೆಯಲ್ಲಿ ಸಿದ್ಥತೆ ನಡೆಸುತ್ತಿರುವಾಗಲೇ ಅಜ್ಜಿ ಬಾಯಿ ತೆರೆದುಕೊಂಡಿದ್ದು, ಅಳುವುದನ್ನು ಆರಂಭಿಸಿದ್ದಾಳೆ. ಕಣ್ಣು ಬಿಟ್ಟುಕೊಂಡು ಎಲ್ಲರೂ ಸೇರಿದ್ದನ್ನು ನೋಡಿ, ದಂಗಾಗಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ಒಯ್ದಿದ್ದು, ದಾಖಲು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಸುದ್ದಿ ಮುಟ್ಟಿದ್ದು ಮನೆಗೆ ತೆರಳಿ ಎಡವಟ್ಟು ಆಗಿರುವುದನ್ನು ದೃಢಪಡಿಸಿದ್ದಾರೆ. ಅಜ್ಜಿಗೇನೋ ಆಯುಷ್ಯ ಇತ್ತು. ಸ್ವಲ್ಪ ಹೊತ್ತು ಕಳೆಯುತ್ತಿದ್ದರೆ, ದೇಹ ಚಿತೆಗೆ ಬಿದ್ದು ಅಂತಿಮ ಯಾನ ಕೈಗೊಳ್ಳುತ್ತಿದ್ದರು.
In a bizarre incident, a 76-year-old woman who was believed to be dead came to life moments before she was to be cremated as her family members prepared for her last rites, at Mudhale village in Baramati.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm