ಬ್ರೇಕಿಂಗ್ ನ್ಯೂಸ್
17-05-21 08:26 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 17: ಭಾರತದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಲಸಿಕೆಗಳಿಗೆ ಅನುಮೋದನೆ ನೀಡಿದೆ.
44 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ಮೊದಲ ಹಂತದಲ್ಲಿ ಹಾಕಲಾಗಿದೆ, 18-44 ವರ್ಷದವರಿಗೆ ಮೊದಲ ಹಂತದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ.
ಆದರೆ ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ, ಆದರೆ ಈ ಕುರಿತು ತಜ್ಞರು ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ ಲಸಿಕೆಯಿಂದ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ರಕ್ತ ಹೆಪ್ಪುಗಟ್ಟುತ್ತದೆ ಇಂತಹ ಪ್ರಕರಣಗಳ ಕುರಿತು ಕಡಿಮೆ ಉದಾಹರಣೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಮಾರ್ಚ್ 29ರಂದು ಲಸಿಕೆ ಪಡೆದವರಲ್ಲಿ 180 ಮಂದಿ ಮೃತಪಟ್ಟಿದ್ದರು. ಒಂದೊಮ್ಮೆ ರಕ್ತ ಹೆಪ್ಪುಗಟ್ಟಿದರೆ ತಲೆ ನೋವು, ವಾಂತಿ, ಹೊಟ್ಟೆನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

ಎಷ್ಟು ಪ್ರಕರಣಗಳಿವೆ;
ಭಾರತದಲ್ಲಿ ಸುಮಾರು 7.5 ಕೋಟಿ ಡೋಸ್ ಕೋವಿಡ್ ಲಸಿಕೆಗಳ ನಂತರ 684 ಜಿಲ್ಲೆಗಳಿಂದ ಒಟ್ಟು 23,000 ಎಇಎಫ್‌ಐ ವರದಿಯಾಗಿದೆ ಎಂದು ಸಮಿತಿ ತಿಳಿಸಿದೆ. ಈ ಪೈಕಿ 700 ಗಂಭೀರ ಅಥವಾ ತೀವ್ರ ಸ್ವರೂಪದ್ದಾಗಿತ್ತು.
ಕೋವ್ಯಾಕ್ಸಿನ್‌ನಿಂದ ರಕ್ತ ಹೆಪ್ಪುಗಟ್ಟುವ ಅಂಶ ಕಡಿಮೆ;
ಕೋವಾಕ್ಸಿನ್ ಲಸಿಕೆಯಲ್ಲಿ ಯಾವುದೇ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಸಮಿತಿ ಹೇಳಿದೆ. ಭಾರತದಲ್ಲಿ ಇಲ್ಲಿಯವರೆಗೆ ಶೇ. 90 ರಷ್ಟು ಮಂದಿಗೆ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಉಳಿದವರಿಗೆ ಕೋವಾಕ್ಸಿನ್ ನೀಡಲಾಗಿದೆ. ಭಾರತವು ಈಗ ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ತುರ್ತು ಬಳಕೆಯ ಅನುಮತಿ ನೀಡಿದೆ ಮತ್ತು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮೊದಲ ಡೋಸ್ ನೀಡಲಾಗುತ್ತಿದೆ.
ರಕ್ತ ಹೆಪ್ಪುಗಟ್ಟುವ ಅಪಾಯ ಎಷ್ಟಿದೆ?
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅತ್ಯಂತ ಕಡಿಮೆ ಇದ್ದು, ಕನಿಷ್ಠ ಅಪಾಯ ಅಂದರೆ ಒಂದು ಮಿಲಿಯನ್ ಗೆ 0.61 ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ರೋಗನಿರೋಧಕ ನಂತರದ ರಾಷ್ಟ್ರೀಯ ಪ್ರತಿಕೂಲ ಘಟನೆಗಳ(ಎಇಎಫ್‌ಐ) ಸಮಿತಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದೆ.
ಬೇರೆ ದೇಶದಕ್ಕಿಂತಲೂ ಭಾರತದಲ್ಲಿ ಕಡಿಮೆ ಅಪಾಯ;
ಕೋವಿಶೀಲ್ಡ್‌ನಿಂದ ಬ್ರಿಟನ್ ಮತ್ತು ಜರ್ಮನಿಗಿಂತಲೂ ಭಾರತದಲ್ಲಿ ಅತಿ ಕಡಿಮೆ ಅಪಾಯ ಕಂಡುಬಂದಿದ್ದು, ಬ್ರಿಟನ್ ನಲ್ಲಿ ಅಸ್ಟ್ರಾಜೆನೆಕಾ(ಭಾರತದಲ್ಲಿ ಕೋವಿಶೀಲ್ಡ್) ವ್ಯಾಕ್ಸಿನೇಷನ್ ನಿಂದ ಮಿಲಿಯನ್‌ಗೆ 4 ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳ ಕಂಡುಬಂದಿದ್ದು, ಜರ್ಮನಿಯಲ್ಲಿ ಮಿಲಿಯನ್‌ಗೆ 10 ಪ್ರಕರಣಗಳು ವರದಿಯಾಗಿವೆ ಎಂದು ಸಮಿತಿ ಹೇಳಿದೆ.
The number of bleeding and clotting events following a Covid vaccine injection in India - of which 26 have been identified - are "miniscule" and "in line with the expected number of diagnoses", a panel on AEFI (adverse events following immunisation) told the Union Health Ministry Monday afternoon.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am