ಬ್ರೇಕಿಂಗ್ ನ್ಯೂಸ್
02-02-21 12:45 pm Headline Karnataka News Network ದೇಶ - ವಿದೇಶ
ಕತಾರ್, ಫೆ.2: ಭಾರತ 72ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಜಾತಿ, ಮತ, ಪಂಥ, ವರ್ಗ, ವರ್ಣಗಳ ಭೇದ ಇಲ್ಲದೆ ಭಾರತೀಯರೆಲ್ಲಾ ಒಂದು ಎಂಬ ಆಶಯದೊಂದಿಗೆ 1950 ರ ಜನವರಿ 26 ರಂದು ಜಾರಿಗೆ ಬಂದ ನಮ್ಮ ಸಂವಿಧಾನದ ನೈಜ ಆಶಯವನ್ನು ಉಳಿಸುವ ಬಗ್ಗೆ ಭಾರತೀಯರು ಪ್ರತಿಜ್ಞಾ ಬದ್ಧರಾಗಬೇಕು. ಸಂವಿಧಾನವು ಘೋಷಿಸುವಂತಹ ಸಾರ್ವಭೌಮತೆ, ಸಹೋದರತ್ವ ಮತ್ತು ಸಮಾನತೆಯನ್ನು ಎತ್ತಿಹಿಡಿದು ಬಲಿಷ್ಠ ಭಾರತದ ನಿರ್ಮಾಣ ನಮ್ಮ ಧ್ಯೇಯವಾಗಬೇಕು ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರಾಷ್ಟ್ರೀಯ ಸಮಿತಿ ನಾಯಕರಾದ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಕತ್ತರ್ ಕೆಸಿಎಫ್ ಸಾಮಾಜಿಕ ಮಾಧ್ಯಮ ಝೂಮ್ ಮೂಲಕ ಆಯೋಜಿಸಿದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಮಹಾಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಎಂಬ ಸುಂದರ ಆಶಯವು ನಮ್ಮ ಕನಸಾಗಿದೆ ಎಂದರು.

ಗಣ್ಯ ಅತಿಥಿಯಾಗಿದ್ದ ಕತಾರ್ ಇಂಡಿಯನ್ ಕಲ್ಚರಲ್ ಸೆಂಟರ್ ನ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಮಾತನಾಡಿ, ಅನಿವಾಸಿ ಕನ್ನಡಿಗರ ನಡುವೆ ಕೆಸಿಎಫ್ ನಡೆಸುತ್ತಿರುವ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಸಂಘಟನೆಯ ಕಾರ್ಯಕರ್ತರನ್ನು ಅಭಿನಂದಿಸಿದರು. ಹಾಫಿಲ್ ಉಮರುಲ್ ಫಾರೂಕ್ ಸಖಾಫಿಯವರ ದುವಾದೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಕಮರುದ್ದೀನ್ ಗೂಡಿನಬಳಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಕತಾರ್ ರಾಯಭಾರಿ ಕಚೇರಿ ಅಧೀನದಲ್ಲಿರುವ ವಿವಿಧ ಸಂಸ್ಥೆಗಳ MC (ಮ್ಯಾನೇಜ್ಮೆಂಟ್ ಕಮಿಟಿ) ಸದಸ್ಯರುಗಳಾಗಿ ಆಯ್ಕೆಯಾದ ಕನ್ನಡಿಗರನ್ನು ಆಹ್ವಾನಿಸಿ ಕೆಸಿಎಫ್ ವತಿಯಿಂದ ಅಭಿನಂದಿಸಲಾಯ್ತು. ICC ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ICBF ನಿರ್ವಹಣಾ ಸಮಿತಿ ಸದಸ್ಯರಾದ ದಿನೇಶ್ ಗೌಡ ಹಾಗೂ ISC ನಿರ್ವಹಣಾ ಸದಸ್ಯರಾದ ಟಿ. ಶ್ರೀನಿವಾಸ ಅವರನ್ನು ಕೆಸಿಎಫ್ ಕತಾರ್ ಸಂಘಟನೆ ಅಧ್ಯಕ್ಷರಾದ ಹನೀಫ್ ಪಾತೂರು ಅಭಿನಂದಿಸಿದರು.

ಕೆಸಿಎಫ್ ಕತ್ತರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಯೂಸುಫ್ ಸಖಾಫಿ ಅಯ್ಯಂಗೇರಿ ಅಧ್ಯಕ್ಷತೆ ವಹಿಸಿದ್ದರು. ಝಾಕಿರ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರೆ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿದರು. ರಿಶಾದ್ ಮಧುವನ್ ವಂದಿಸಿದರು.
72nd Republic day in Qatar by Karnataka Culture Federation celebrated via Video Conference.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm