ಬ್ರೇಕಿಂಗ್ ನ್ಯೂಸ್
20-01-21 02:12 pm Headline Karnataka News Network ದೇಶ - ವಿದೇಶ
ಚೆನ್ನೈ, ಜ.20: ತಮಿಳ್ನಾಡಿನ ಹೆಸರಾಂತ ಉದ್ಯಮಿ, ಮಿಶನರಿಯಾಗಿ ಗುರುತಿಸಲ್ಪಟ್ಟಿರುವ ಜೀಸಸ್ ಕಾಲ್ಸ್ ಎನ್ನುವ ಸಂಸ್ಥೆಯ ನಿರ್ದೇಶಕ ಪೌಲ್ ದಿನಕರನ್ ಗೆ ಸೇರಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈ, ಕೊಯಂಬತ್ತೂರು ಸೇರಿದಂತೆ ತಮಿಳ್ನಾಡಿನ 28 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.

ವಿದೇಶಿ ಫಂಡ್ ನಲ್ಲಿ ಅವ್ಯವಹಾರ ಮತ್ತು ಐಟಿ ತೆರಿಗೆ ವಂಚನೆಯ ಬಗ್ಗೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನಲ್ಲಿರುವ ಜೀಸಸ್ ಕಾಲ್ಸ್ ಮಿಷನರಿ ಸಂಸ್ಥೆಯ ಪ್ರಧಾನ ಕಚೇರಿ, ಪೌಲ್ ದಿನಕರನ್ ಅವರ ಮನೆ ಮತ್ತು ಕೊಯಂಬತ್ತೂರಿನಲ್ಲಿರುವ ಕಾರುಣ್ಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎನ್ನುವ ಇಂಜಿನಿಯರಿಂಗ್ ಕಾಲೇಜಿನ ಕಚೇರಿಗೂ ದಾಳಿ ನಡೆದಿದೆ.

ಜೀಸಸ್ ಕಾಲ್ಸ್ ಎನ್ನುವ ಮಿಶನರಿ ಸಂಸ್ಥೆಯನ್ನು ಡಿಜಿಎಸ್ ದಿನಕರನ್ 1962ರಲ್ಲಿ ಸ್ಥಾಪಿಸಿದ್ದು, ಸದ್ಯ ಅವರ ಮಗ ಪೌಲ್ ದಿನಕರನ್ ಕುಟುಂಬಸ್ಥರು ನಡೆಸುತ್ತಿದ್ದಾರೆ. ಮಿಶನರಿ ಸಂಸ್ಥೆಯು ದೇಶ- ವಿದೇಶದಲ್ಲಿ ನೂರಾರು ಕಚೇರಿಗಳನ್ನು ಹೊಂದಿದೆ. ರಾಷ್ಟ್ರೀಯ ವಾಹಿನಿಗಳಲ್ಲಿ ಮಿಶನರಿ ಪ್ರಣೀತ ಕಾರ್ಯಕ್ರಮಗಳು ದಿನವೂ ಪ್ರಸಾರವಾಗುತ್ತಿದ್ದು, ಅದರಲ್ಲಿ ಪೌಲ್ ದಿನಕರನ್ ಪ್ರಚಾರಕರಾಗಿ ಭಾಗವಹಿಸುತ್ತಾರೆ. ಅಮೆರಿಕ, ಬ್ರಿಟನ್, ಜರ್ಮನಿ ಹೀಗೆ ಶ್ರೀಮಂತ ದೇಶಗಳಲ್ಲಿ ಕಚೇರಿಯನ್ನು ಹೊಂದಿದ್ದು ವಾರ್ಷಿಕ ಕೋಟ್ಯಂತರ ರೂಪಾಯಿ ಫಂಡ್ ರೂಪದಲ್ಲಿ ಸಂಸ್ಥೆಗೆ ದೇಣಿಗೆ ಬರುತ್ತದೆ. ಇದೇ ಹಣದಲ್ಲಿ ಮಿಶನರಿ ಚಟುವಟಿಕೆಗಳು ನಡೆಯುತ್ತಿದ್ದವು.

ಭಾರತದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮಿಶನರಿ ಸಂಸ್ಥೆಯಾಗಿ ಜೀಸಸ್ ಕಾಲ್ಸ್ ಗುರುತಿಸಲ್ಪಟ್ಟಿದೆ. ದಶಕಗಳಿಂದ ಕಾರ್ಯಾಚರಿಸುತ್ತಿರುವುದರಿಂದ ತಮಿಳುನಾಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರಿಸ್ತಿಯನ್ನರು ಈ ಸಂಸ್ಥೆಯ ಬೆಂಬಲಿಗರಾಗಿದ್ದಾರೆ. ಅಸೆಂಬ್ಲಿ ಚುನಾವಣೆ ಹತ್ತಿರ ಬಂದಿರುವುದರಿಂದ ಮಿಶನರಿ ಅನುಯಾಯಿಗಳು ಡಿಎಂಕೆಗೆ ಬೆಂಬಲ ನೀಡುತ್ತಿದ್ದಾರೆಂಬ ಭಯದಲ್ಲಿ ಇಂಥ ದಾಳಿಯನ್ನು ಆಡಳಿತಾರೂಢ ಎಐಎಡಿಎಂಕೆ ಮಾಡಿಸಿದೆ ಎಂದು ಸಂಸ್ಥೆಯ ಬೆಂಬಲಿಗರು ಕಿಡಿಕಾರಿದ್ದಾರೆ. ಡಿಜಿಎಸ್ ದಿನಕರನ್ ಮತ್ತು ಡಿಎಂಕೆಯ ಕರುಣಾಕರನ್ ಅತ್ಯಾಪ್ತರಾಗಿದ್ದು, ಡಿಜಿಎಸ್ ಸಂಸ್ಥೆ ತಮಿಳ್ನಾಡಿನಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆಯಲು ಡಿಎಂಕೆ ಅಭಯ ಇತ್ತು.
The Income Tax department on Wednesday conducted raids at 28 properties across Tamil Nadu belonging to evangelist Dr Paul Dhinakaran over alleged tax evasion.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm