ಬ್ರೇಕಿಂಗ್ ನ್ಯೂಸ್
31-08-26 01:28 pm HK News Staffer ದೇಶ - ವಿದೇಶ
ಕಠ್ಮಂಡು, ಆ 31: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ; ಈ ಮಧ್ಯೆ, ಇನ್ನೂ ಸುಮಾರು 4,250 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪತ್ತು ಸಂಭವಿಸಿ ಆರು ದಿನಗಳು ಕಳೆದಿದ್ದರೂ, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲು ಮತ್ತು ಸಿಲುಕಿಕೊಂಡಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದು, ಬಾಧಿತವಾಗಿರುವ ಎಲ್ಲ ಎಂಟು ಜಿಲ್ಲೆಗಳಿಂದಲೂ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ ಮತ್ತು ಬಂಡೆಗಳ ಕುಸಿತ ಅಥವಾ ಹಿಮಪಾತದಿಂದ ಉಂಟಾಯಿತೆಂದು ನಂಬಲಾದ ಈ ದುರಂತವು, ಆಗಸ್ಟ್ 26 ರಂದು ಉತ್ತರ ಮತ್ತು ಮಧ್ಯ ನೇಪಾಳದ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿತು.
ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.
NDRRMA ಪ್ರಕಾರ, ಇಲ್ಲಿಯವರೆಗೆ ಚಿತ್ವಾನ್‌ನಿಂದ 272, ಪೂರ್ವ ನವಾಲ್‌ಪರಸಿಯಿಂದ 207, ಪಶ್ಚಿಮ ನವಾಲ್‌ಪರಸಿಯಿಂದ 151 ಮತ್ತು ಗೋಖಾ ಜಿಲ್ಲೆಗಳಿಂದ 62 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅದೇ ರೀತಿ, ನುವಾಕೋಟ್‌ನಿಂದ 95, ಧಾಡಿಂಗ್‌ನಿಂದ 55, ತನಹುವಿನಿಂದ 37 ಮತ್ತು ರಸುವಾದಿಂದ 24 ಮೃತದೇಹಗಳನ್ನು ಹೊರತೆಗೆಯಲಾಗಿದೆ.
85 ಮಂದಿ ಭದ್ರತಾ ಸಿಬ್ಬಂದಿ ಮತ್ತು 320 ವಿದೇಶಿಯರು ಸೇರಿದಂತೆ ಒಟ್ಟು 4,247 ಮಂದಿ ನಾಪತ್ತೆಯಾಗಿದ್ದಾರೆ.

ನೇಪಾಳದಲ್ಲಿ ಸಿಲುಕಿದ್ದ 54 ಕನ್ನಡಿಗರು ಕರ್ನಾಟಕಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ಅವರ ಕುಟುಂಬಸ್ಥರು ಆತಂಕದಿಂದ ಹೊರಬಂದಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಕರ್ನಾಟಕದ ಬೆಂಗಳೂರು, ಹಾವೇರಿ, ಶಿವಮೊಗ್ಗ, ಕಡೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳಕ್ಕೆ ಪ್ರಯಾಣಿಸಿದ್ದರು. ಆಗಸ್ಟ್ 26ರಂದು ಅವರ ಪ್ರವಾಸ ಅಪಾಯಕಾರಿ ತಿರುವು ಪಡೆದುಕೊಂಡಿತು. ಹಠಾತ್ ಪ್ರವಾಹವು ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ನಾಶಗೊಂಡಿದ್ದವು. ಹಲವಾರು ಪ್ರವಾಸಿಗರು ಸಿಲುಕಿಕೊಂಡಿದ್ದರು. ನೇಪಾಳಕ್ಕೆ ತೆರಳುವ ಮುನ್ನ ಕನ್ನಡಿಗರ ಗುಂಪು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಪ್ರಯಾಣಿಸಿತು.
ಪ್ರವಾಹಕ್ಕೆ ತುತ್ತಾದ ಮಾರ್ಗದಲ್ಲಿ ಪ್ರಯಾಣಿಸುವಾಗ ಸುಮಾರು 30 ನಿಮಿಷಗಳ ಕಾಲ ಚಹಾ ಕುಡಿಯಲು ತಂಗಿದ್ದವು. ನಾವು ಜೀವಂತವಾಗಿರುವುದು ಒಂದು ಪವಾಡ, ನಾವೆಲ್ಲರೂ ನಮ್ಮ ಜೀವಕ್ಕೆ ಹೆದರುತ್ತಿದ್ದೆವು. ಆ ಮಾರ್ಗವು ಒಂದು ದುರಂತದ ಕ್ಷಣವಾಗಿತ್ತು. ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿದ್ದೇವು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಚಹಾ ವಿರಾಮದ ಸಮಯದಲ್ಲಿ ನಮಗೆ ಮೊದಲೇ ಪ್ರವಾಹದ ಕುರಿತಂತೆ ಮಾಹಿತಿ ಸಿಕ್ಕಿತ್ತು. ಇಲ್ಲದಿದ್ದರೆ ನಾವು ಹಠಾತ್ ಪ್ರವಾಹಕ್ಕೆ ಸಿಲುಕುತ್ತಿದ್ದೇವು ಎಂದು ಎಂದು ಹೇಳಿದರು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm