ಬ್ರೇಕಿಂಗ್ ನ್ಯೂಸ್
11-08-20 04:50 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 11: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಹಸ್ಥಿತಿ ಗಂಭೀರವಾಗಿದೆ. ಸದ್ಯಕ್ಕೆ ಮುಖರ್ಜಿಯವರನ್ನು ಎಮರ್ಜೆನ್ಸಿ ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು ಆರೋಗ್ಯ ವಿಷಮವಾಗುತ್ತಿದೆ ಎಂದು ಅವರನ್ನು ಸರ್ಜರಿಗೆ ಒಳಪಡಿಸಿದ ದೆಹಲಿಯ ಸೇನಾ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.
ನಿನ್ನೆಯಷ್ಟೇ ಪ್ರಣಬ್ ಮುಖರ್ಜಿ ಅವರನ್ನು ಬ್ರೈನ್ ಸರ್ಜರಿಗೆ ಒಳಪಡಿಸಲಾಗಿತ್ತು. ಆದರೆ, ಸರ್ಜರಿ ಬಳಿಕ ಅವರು ಕೋಮಾ ಸ್ಥಿತಿಯಿಂದ ಹೊರಬಂದಿಲ್ಲ. ವೆಂಟಿಲೇಟರ್ ಮೂಲಕ ಶ್ವಾಸ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಇಂದು ದೇಹಸ್ಥಿತಿ ಮತ್ತಷ್ಟು ವಿಷಮವಾಗಿದೆ ಎಂದು ಆರ್ ಆರ್ ಆಸ್ಪತ್ರೆಯಿಂದ ನೀಡಿರುವ ಬುಲೆಟಿನ್ ನಲ್ಲಿ ವೈದ್ಯರು ತಿಳಿಸಿದ್ದಾರೆ.
ಸರ್ಜರಿಗೂ ಮುನ್ನ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಆಗಿದ್ದರು. ಈ ಬಗ್ಗೆ ಪ್ರಣಬ್ ಮುಖರ್ಜಿಯವರ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಹೇಳಿಕೊಳ್ಳಲಾಗಿತ್ತು. ಆನಂತ್ರ ಮುಖರ್ಜಿ ಅವರನ್ನು ಮೆದುಳಿನಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ತುರ್ತಾಗಿ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿತ್ತು. ದುರದೃಷ್ಟ ಅಂದ್ರೆ ಶಸ್ತ್ರಚಿಕಿತ್ಸೆ ಬಳಿಕ ಕೋಮಾಕ್ಕೆ ಜಾರಿದ 84 ವರ್ಷದ ಮುಖರ್ಜಿ ಮರಳಿ ವಾಸ್ತವಕ್ಕೆ ಬಂದಿಲ್ಲ.
ಪ್ರಣಬ್ ಮುಖರ್ಜಿಯವರು ಭಾರತದ 13 ನೇ ರಾಷ್ಟ್ರಪತಿಯಾಗಿದ್ದು 2012ರಿಂದ 2017ರ ವರೆಗೆ ಈ ಹುದ್ದೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವೇ ಕೆಲವು ನಿಷ್ಠಾವಂತ ಮತ್ತು ಅಪಾರ ಜ್ಞಾನವುಳ್ಳ ಮುತ್ಸದ್ಧಿಗಳಲ್ಲಿ ಮುಖರ್ಜಿ ಒಬ್ಬರು..
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am