ಬ್ರೇಕಿಂಗ್ ನ್ಯೂಸ್
04-07-26 09:47 pm HK News Staffer ಕ್ರೈಂ
ನವದೆಹಲಿ, ಜುಲೈ 4: ಅಯೋಧ್ಯೆಯ ರಾಮ ಮಂದಿರದಲ್ಲಿ ಹುಂಡಿ ಹಣ ಕಳವು ವಿವಾದ ಸೃಷ್ಟಿಸಿರುವಾಗಲೇ ಮತ್ತೊಂದು ಪುಣ್ಯಕ್ಷೇತ್ರ ಬದರಿ- ಕೇದಾರನಾಥ ಧಾಮದಲ್ಲಿಯೂ ಕಾಣಿಕೆ ಹಣದ ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ. ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಮತ್ತು ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.
ಶ್ರೀ ಬದರಿನಾಥ ಧಾಮದ ಉದ್ಯೋಗಿಯೊಬ್ಬರು ದೇಣಿಗೆ ಹಣ ಮತ್ತು ಕಾಣಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಡೆಹ್ರಾಡೂನ್ ಮೂಲದ ಭೈರವ ಸೇನಾ ಸಂಘಟನೆ ಆರೋಪಿಸಿದೆ ಎಂದು ಬಿಕೆಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಗಳಿಗೆ ಸಂಬಂಧಿಸಿದಂತೆ ಸಂಘಟನೆಯು ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲವಾದರೂ, ವಿಷಯದ ಗಂಭೀರತೆಯನ್ನು ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೇಣಿಗೆ ಎಣಿಕೆ ಕಾರ್ಯದ ಉಸ್ತುವಾರಿ ಹೊಂದಿರುವ ಸಿಬ್ಬಂದಿಯಿಂದಲೂ ಬಿಕೆಟಿಸಿ ಸ್ಪಷ್ಟನೆ ಕೋರಿದೆ. "ಈ ಆರೋಪಗಳನ್ನು ಬಿಕೆಟಿಸಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದು ಕೋಟ್ಯಂತರ ಭಕ್ತರ ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ, ಆರೋಪಗಳ ತನಿಖೆಗೆ ಸಮಿತಿಯನ್ನು ರಚಿಸಲು ಆದೇಶಿಸಲಾಗಿದೆ" ಎಂದು ದ್ವಿವೇದಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಿಕೆಟಿಸಿ ಅಧ್ಯಕ್ಷರ 'ವೈಯಕ್ತಿಕ ಸಹಾಯಕ' ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬರು ಈ ಆಪಾದಿತ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿದೆ. ಆದರೆ, "ನನಗೆ ಯಾವುದೇ ವೈಯಕ್ತಿಕ ಕಾರ್ಯದರ್ಶಿ ಇಲ್ಲ. ಆರೋಪಕ್ಕೆ ಒಳಗಾಗಿರುವ ವ್ಯಕ್ತಿ ಬಿಕೆಟಿಸಿ ಉದ್ಯೋಗಿಯಾಗಿದ್ದು, ಈ ಹಿಂದೆ ಮೂವರು ಅಧ್ಯಕ್ಷರೊಂದಿಗೆ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ವಿರುದ್ಧದ ಆರೋಪಗಳು ತನಿಖೆಯಲ್ಲಿ ಸಾಬೀತಾದರೆ, ಕ್ರಮ ಕೈಗೊಳ್ಳಲಾಗುವುದು" ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.
ಬಿಕೆಟಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗರ್ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, "ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಶ್ರೀ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ ಕಾಯ್ದೆ–1939 ಮತ್ತು ನೌಕರರ ನಡವಳಿಕೆ ನಿಯಮಗಳ ಅನ್ವಯ ತಪ್ಪಿತಸ್ಥರ ವಿರುದ್ಧ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ದೇಣಿಗೆ ಹಣ ಎಣಿಕೆ ನಡೆಯುವ ಕೊಠಡಿಯಲ್ಲಿ ಐದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 04:14 pm
HK News Staffer
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am