ಬ್ರೇಕಿಂಗ್ ನ್ಯೂಸ್
14-03-26 10:31 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 14: ಪಶ್ಚಿಮ ಏಶ್ಯಾದಲ್ಲಿ ಅಮೆರಿಕಾ- ಇರಾನ್ ಯುದ್ಧ ಹೊತ್ತಿಕೊಂಡಿದ್ದರೆ ಉತ್ತರ ಕೊರಿಯಾ ಏಕಾಏಕಿ ತನ್ನ ಪೂರ್ವ ಕರಾವಳಿಯತ್ತ ಹತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ಶನಿವಾರ ಮಧ್ಯಾಹ್ನ ಭಾರತೀಯ ಕಾಲಮಾನ 1.30ರ ಸುಮಾರಿಗೆ ಜಪಾನ್ ವ್ಯಾಪ್ತಿಯ ಸಮುದ್ರವನ್ನು ಗುರಿಯಾಗಿಸಿ ಉತ್ತರ ಕೊರಿಯಾ ಮಿಸೈಲ್ ದಾಳಿ ಮಾಡಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕವು ಜಂಟಿಯಾಗಿ ಸಮುದ್ರದಲ್ಲಿ ಸಮಾರಾಭ್ಯಾಸ ನಡೆಸುತ್ತಿರುವಾಗಲೇ ರಷ್ಯಾ ಮಿತ್ರ ಉತ್ತರ ಕೊರಿಯಾ ಕ್ಷಿಪಣಿ ದಾಳಿ ಮಾಡಿರುವುದು ಆತಂಕಕ್ಕೀಡು ಮಾಡಿದೆ. ಸಿಯೋಲ್ ಮಿಲಿಟರಿ ದಾಳಿಯನ್ನು ದೃಢಪಡಿಸಿದ್ದರೂ, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಜಪಾನ್ ಕೂಡ ಕೊರಿಯಾ ದಾಳಿಯನ್ನು ದೃಢಪಡಿಸಿದ್ದು ದ್ವೀಪಗಳಲ್ಲಿ ತೊಂದರೆ ಆಗಿದೆಯೇ ಎನ್ನುವ ಬಗ್ಗೆ ಮಿಲಿಟರಿ ತನಿಖೆಗೆ ಆದೇಶಿಸಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕ ಸೇನೆಯು ವಾರ್ಷಿಕ ಜಂಟಿ ಸಮಾರಾಭ್ಯಾಸದಲ್ಲಿ ತೊಡಗಿದ್ದು ಮಾರ್ಚ್ 19ರ ವರೆಗೆ ಅಭ್ಯಾಸ ಇರಲಿದೆ. ಸಾವಿರಾರು ಅಮೆರಿಕನ್ ಸೈನಿಕರು ದಕ್ಷಿಣ ಕೊರಿಯಾದಲ್ಲಿದ್ದಾರೆ. ಇದಕ್ಕೆ ಉತ್ತರ ಕೊರಿಯಾ ವಿರೋಧ ಮಾಡಿದೆ. ಇದೇ ವೇಳೆ, ಪೂರ್ವ ಸಮುದ್ರದ ಕಡೆಗೆ ಮಿಸೈಲ್ ಗುರಿಯಿಟ್ಟು ಉತ್ತರ ಕೊರಿಯಾ ಪರೀಕ್ಷೆಯನ್ನು ನಡೆಸಿದೆ. ಇದೇ ವೇಳೆ, ಜಗತ್ತಿನ ಅತಿ ದೊಡ್ಡ ಮಿಸೈಲ್ ಗಳನ್ನೂ ಅನಾವರಣ ಮಾಡಿದೆ. ಇದರಿಂದ ಸೌತ್ ಕೊರಿಯನ್ನರು ಭಯಗೊಂಡಿದ್ದಾರೆ. ಯಾಕಂದ್ರೆ, ದಕ್ಷಿಣ ಕೊರಿಯಾಗೆ ಅಮೆರಿಕದ ಡಿಫೆನ್ಸ್ ಭದ್ರತೆ ಇದೆ. ಅದನ್ನೇ ನಂಬಿಕೊಂಡು ಸೌತ್ ಕೊರಿಯಾ ಕೂತಿದೆ.
ಇತ್ತ ಇರಾನ್ ದಾಳಿಯಿಂದ ಗಲ್ಫ್ ರಾಷ್ಟ್ರದಲ್ಲಿ ಅಮೆರಿಕದ ಡಿಫೆನ್ಸ್ ಸಿಸ್ಟಮ್ ಹಾಳಾಗಿದೆ ಎಂಬ ವರದಿಗಳು ಬರುತ್ತಿವೆ. ಇದರ ಬೆನ್ನಲ್ಲೇ ಹುಚ್ಚು ದೊರೆ ಉತ್ತರ ಕೊರಿಯಾದ ಕಿಮ್ ಜಾಂಗ್ ಜಪಾನ್ ಕಡೆಗೆ ಗುರಿಯಿಟ್ಟು ಮಿಸೈಲ್ ದಾಳಿ ಮಾಡಿಸಿದ್ದಾನೆ. ಅಮೆರಿಕದ ಡಿಫೆನ್ಸ್ ವ್ಯವಸ್ಥೆ ಪ್ರಬಲವಾಗಿಲ್ಲ ಎಂದರಿತೇ ಕಿಮ್ ಜಾಂಗ್ ಈ ರೀತಿ ಕಾಲು ಕೆರೆದಿರುವಂತೆ ತೋರಿದೆ. ಜಪಾನ್ ಈಗ ಅಮೆರಿಕದ ಮಿತ್ರ ರಾಷ್ಟ್ರವಾಗಿದ್ದು ಉತ್ತರ ಕೊರಿಯಾದ ನಡೆ ವಿರುದ್ಧ ಕೆರಳಿ ನಿಂತಿದೆ. ಒಂದೆಡೆ ಅದು ವಿಷಯ ಅಲ್ಲ ಎಂದು ಹೇಳುತ್ತಿದ್ದರೂ, ಸಮುದ್ರ ಭಾಗದಲ್ಲಿ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ ಎನ್ನಲಾಗುತ್ತಿದೆ.
ಹೀಗಾಗಿ ಒಂದೆಡೆ, ಅಫ್ಗನಿಸ್ತಾನ- ಪಾಕಿಸ್ತಾನ, ಇರಾನ್- ಅಮೆರಿಕ ಯುದ್ಧ ಆಗುತ್ತಿದ್ದರೆ ಪೂರ್ವದಲ್ಲೂ ಈಗ ಯುದ್ಧದ ಕಾರ್ಮೋಡ ಕವಿದಿದೆ. ಉತ್ತರ ಕೊರಿಯಾ ಮಿಸೈಲ್ ದಾಳಿ ನಡೆಸಿರುವುದು ಜಪಾನ್, ದಕ್ಷಿಣ ಕೊರಿಯಾವನ್ನು ಕೆರಳಿಸಿದೆ. ಅಲ್ಲಿಯೂ ಯುದ್ಧ ಹೊತ್ತಿಕೊಳ್ಳುತ್ತಾ ಎನ್ನುವ ಆತಂಕ ಎದುರಾಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am