ಬ್ರೇಕಿಂಗ್ ನ್ಯೂಸ್
02-03-26 01:30 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 1: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ ಬೆನ್ನಲ್ಲೇ ಹಂಗಾಮಿ ಉತ್ತರಾಧಿಕಾರಿಯಾಗಿ ಖಮೇನಿ ಆಪ್ತನಾಗಿದ್ದ ಅಯತೊಲ್ಲಾ ಅಲಿರೆಜಾ ಅರಾಫಿ ಸುಪ್ರೀಂ ಲೀಡರ್ ಆಗಿದ್ದಾರೆ. ಖಮೇನಿಯವರ 37 ವರ್ಷಗಳ ಯುಗ ಅಂತ್ಯವಾಗಿದ್ದು, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಮುಂದಿನ ಆಯ್ಕೆ ವರೆಗೂ ದೇಶವನ್ನು ಮುನ್ನಡೆಸಲಿದ್ದಾರೆ.
ಇರಾನ್ ಸಂವಿಧಾನದ 111ನೇ ವಿಧಿಯ ಪ್ರಕಾರ ದೇಶದಲ್ಲಿ ಇದ್ದಕ್ಕಿದ್ದಂತೆ ಸರ್ವೋಚ್ಚ ನಾಯಕನ ಕೊರತೆ ಉಂಟಾದರೆ, ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಸಂಪೂರ್ಣ ನಾಯಕತ್ವದ ಕರ್ತವ್ಯಗಳನ್ನು ವಹಿಸಿಕೊಳ್ಳಲು ತಾತ್ಕಾಲಿಕ ಮೂವರು ವ್ಯಕ್ತಿಗಳ ಮಂಡಳಿಯನ್ನು ರಚಿಸಬೇಕು. ಮಂಡಳಿಯ ಮುಖ್ಯಸ್ಥನೇ ಅಲ್ಲಿಯ ತನಕ ಸರ್ವೋಚ್ಚ ನಾಯಕನಾಗಿ ಕಾರ್ಯ ನಿರ್ವಹಿಸುತ್ತಾನೆ.
ನಿಯಮದ ಪ್ರಕಾರ, ಇರಾನ್ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲು ತಾತ್ಕಾಲಿಕ ನ್ಯಾಯಮಂಡಳಿಯನ್ನು ನೇಮಿಸಲಾಗುತ್ತದೆ. ಇದರ ಮುಖ್ಯ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಕಾರ್ಯ ನಿರ್ವಹಿಸಲಿದ್ದಾರೆ. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸೇನ್ ಮೊಹ್ಸೆನಿ ಸಹ ಮಂಡಳಿಯಲ್ಲಿ ಇರುತ್ತಾರೆ.
ಇರಾನ್ ಸಂಘರ್ಷದ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುವ ಜೊತೆಗೆ ಖಮೇನಿ ಹತ್ಯೆಗೆ ಪ್ರತೀಕಾರ, ಮುಂದಿನ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಕಾರ್ಯವನ್ನೂ ಮಾಡಲಿದ್ದಾರೆ. ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನೂ ಅಲಿರೆಜಾ ಹೊಂದಲಿದ್ದಾರೆ.
ಅಯತೊಲ್ಲಾ ಅಲಿರೆಜಾ ಅರಾಫಿ 1959 ರಲ್ಲಿ ಜನಿಸಿದ್ದು ಈಗ 67 ವರ್ಷ. ಅಲಿರೆಜಾ ಅರಾಫಿ ಇರಾನಿನ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪನೆಯಲ್ಲಿ ಪ್ರಮುಖರು. ಇಸ್ಲಾಮಿಕ್ ಸೆಮಿನರಿ ವ್ಯವಸ್ಥೆಯಲ್ಲಿ ನಿರ್ದೇಶಕರು. ಪ್ರಬಲ ಗಾರ್ಡಿಯನ್ ಕೌನ್ಸಿಲ್‌ನ ಪರಿಶೀಲನಾ ಸದಸ್ಯರು ಮತ್ತು ತಜ್ಞರ ಸಭೆಯ ಹಾಲಿ ಸದಸ್ಯರು. ಹೀಗೆ ಏಕಕಾಲಕ್ಕೆ ಮೂರು ಪ್ರಬಲ ಹುದ್ದೆಯಲ್ಲಿದ್ದರು. ಇವರನ್ನು ಇದರ ಮೊದಲೇ ಖಮೇನಿಯವರು ನೇಮಕ ಮಾಡಿದ್ದರು ಎನ್ನಲಾಗುತ್ತಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am