ಬ್ರೇಕಿಂಗ್ ನ್ಯೂಸ್
28-02-26 07:17 pm HK News Staffer ದೇಶ - ವಿದೇಶ
ನವದೆಹಲಿ, ಫೆ.28: ಇರಾನ್ -ಅಮೆರಿಕ ಸಂಘರ್ಷ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಿಗೆ ಯುರೋಪ್, ಏಷ್ಯಾದಿಂದ ತೆರಳುವ ಬಹುತೇಕ ವಿಮಾನಗಳನ್ನು ರದ್ದುಪಡಿಸಲಾಗಿದೆ. ಗಲ್ಫ್ ರಾಷ್ಟ್ರಗಳ ಮೂಲಕ ಯುರೋಪ್ ಕಡೆಗೆ ತೆರಳುತ್ತಿದ್ದ ವಿಮಾನಗಳನ್ನು ಬೇರೆ ದಾರಿ ಮೂಲಕ ತೆರಳಲು ಸೂಚಿಸಲಾಗಿದೆ.
ಭಾರತದ ಏರ್ ಇಂಡಿಯಾವು ಗಲ್ಫ್ ರಾಷ್ಟ್ರಗಳಿಗೆ ತೆರಳುವ ಎಲ್ಲ ವಿಮಾನಗಳನ್ನು ರದ್ದುಪಡಿಸಿದೆ. ಶನಿವಾರ ದೆಹಲಿಯಿಂದ ಇಸ್ರೇಲಿನ ಟೆಲ್ ಅವೀವ್ ತೆರಳಿದ್ದ ವಿಮಾನ ಅರ್ಧ ದಾರಿಯಿಂದಲೇ ಭಾರತಕ್ಕೆ ಮರಳಿದ್ದು ಮುಂಬೈನಲ್ಲಿ ಲ್ಯಾಂಡ್ ಆಗಿದೆ. ಮುಂದಿನ ಸಂಚಾರದ ಬಗ್ಗೆ ದಿನಾಂಕವನ್ನು ತಿಳಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ. ಇಂಡಿಗೋ ಕಂಪನಿಯು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಪ್ರಯಾಣಿಕರು ವಿಮಾನ ಸಂಚಾರದ ಸ್ಟೇಟಸ್ ಬಗ್ಗೆ ನಿಗಾ ಇರಿಸುವಂತೆ ಸೂಚಿಸಿದೆ. ಲುಫ್ತಾನ್ಸಾ ಕಂಪನಿ ಬೀರತ್ ಮತ್ತು ಒಮಾನ್ ತೆರಳುವ ವಿಮಾನವನ್ನು ರದ್ದುಮಾಡಿದೆ.
ಕೆಲವು ವಿಮಾನ ಕಂಪನಿಗಳು ವಾರ ಕಾಲಕ್ಕೆ ತಮ್ಮ ಸಂಚಾರ ರದ್ದುಪಡಿಸಿದ್ದರೆ, ಕೆಲವು ಕಂಪನಿಗಳು ಪರಿಸ್ಥಿತಿ ನೋಡಿಕೊಂಡು ವಿಮಾನ ಸಂಚಾರದ ಬಗ್ಗೆ ತಿಳಿಸಲಾಗುವುದು ಎಂದಿವೆ. ದುಬೈ ಎಮಿರೇಟ್ಸ್ ದುಬೈ ಏರ್ಪೋರ್ಟ್ ನಿಂದ ತನ್ನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಪಾಕಿಸ್ತಾನದ ಪಿಐಎ ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರವನ್ನು ಬಂದ್ ಮಾಡಿದೆ. ರಷ್ಯನ್ ಏರ್ ಲೈನ್ಸ್ ಇರಾನ್ ಮತ್ತು ಇಸ್ರೇಲ್ ಮೂಲಕ ತೆರಳುವ ವಿಮಾನಗಳನ್ನು ರದ್ದುಪಡಿಸಿದೆ. ಗಲ್ಫ್ ರಾಷ್ಟ್ರಗಳಿಗೆ ಪರ್ಯಾಯ ದಾರಿ ಮೂಲಕ ಸಂಚಾರಕ್ಕೆ ಯತ್ನಿಸುವುದಾಗಿ ರಷ್ಯಾ ಹೇಳಿಕೊಂಡಿದೆ.

ಟರ್ಕಿಶ್ ಏರ್ಲೈನ್ಸ್ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್ ತೆರಳುವ ವಿಮಾನಗಳನ್ನು ಮಾರ್ಚ್ 2ರ ವರೆಗೆ ನಿರ್ಬಂಧಿಸಿದೆ. ಬಲ್ಗೇರಿಯಾ ಏರ್ಲೈನ್ಸ್ ಕೂಡ ಮಧ್ಯ ಪ್ರಾಚ್ಯಕ್ಕೆ ಸಂಚಾರ ರದ್ದುಪಡಿಸಿದೆ. ಜಪಾನ್ ಏರ್ಲೈನ್ಸ್ ಟೋಕ್ಯೋ- ದೋಹಾ ನಡುವಿನ ಸಂಚಾರವನ್ನು ರದ್ದುಪಡಿಸಿದೆ. ಸ್ವಿಸ್ ಇಂಟರ್ನ್ಯಾಶನಲ್ ಏರ್ಲೈನ್ಸ್ ಕಡೆಯಿಂದ ಮಾರ್ಚ್ 7ರ ವರೆಗೆ ವಿಮಾನ ಸಂಚಾರ ರದ್ದುಪಡಿಸಿದೆ.
ಏರ್ಪೋರ್ಟ್ ಗಳಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರು:
ಇದೇ ವೇಳೆ, ಯುಎಇ, ಬೆಹ್ರೈನ್, ಟರ್ಕಿ, ಒಮಾನ್, ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಾವಿರಾರು ಪ್ರಯಾಣಿಕರು ಏರ್ಪೋರ್ಟ್ ನಲ್ಲಿ ಸೇರಿದ್ದು, ವಿಮಾನಗಳ ರದ್ದತಿಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಗಲ್ಫ್ ದೇಶಗಳು ತಮ್ಮ ವಾಯು ಪ್ರದೇಶವನ್ನು ನಿಷೇಧಿಸಿರುವುದರಿಂದ ಬೇರೆ ಬೇರೆ ದೇಶಗಳ ಜನರು ತಮ್ಮ ನಿಗದಿತ ಪ್ರಯಾಣದಿಂದ ವಂಚಿತರಾಗಿದ್ದಾರೆ. ಅಂದಾಜು ಪ್ರಕಾರ, 346 ವಿಮಾನಗಳ ಸಂಚಾರವನ್ನು ರದ್ದುಪಡಿಸಿದ್ದರೆ, 525 ವಿಮಾನಗಳ ಸಂಚಾರವನ್ನು ವಿಳಂಬಿಸಲಾಗಿದೆ.

ಕೇರಳದ ಏರ್ಪೋರ್ಟ್ ಗಳಲ್ಲಿ ಎಫೆಕ್ಟ್:
ಕರ್ನಾಟಕದ ಮಂಗಳೂರು, ಕೇರಳದ ಕಣ್ಣೂರು, ಕ್ಯಾಲಿಕಟ್, ತಿರುವನಂತಪುರಂ, ಕೊಚ್ಚಿನ್ ಏರ್ಪೋರ್ಟ್ ನಿಂದ ಗಲ್ಫ್ ರಾಷ್ಟ್ರಗಳಿಗೆ ಹೋಗಿ ಬರುವ ವಿಮಾನಗಳು ಅತಿ ಹೆಚ್ಚು ಇರುವುದರಿಂದ ಆಯಾ ವಿಮಾನ ನಿಲ್ದಾಣಗಳಿಂದ ವಿಮಾನ ರದ್ದತಿ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದೇಶದಿಂದ ಬರುವ ಮತ್ತು ಇಲ್ಲಿಂದ ತೆರಳುವ ವಿಮಾನಗಳ ಸಂಚಾರ ವ್ಯತ್ಯಯವಾಗಿದ್ದು, ತಮ್ಮ ಸಂಚಾರ ಸಾಧ್ಯವಾಗದೆ ಪ್ರಯಾಣಿಕರು ಗೊಂದಲಕ್ಕೆ ಈಡಾಗಿದ್ದಾರೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am