ಬ್ರೇಕಿಂಗ್ ನ್ಯೂಸ್
10-02-26 07:31 pm HK News Desk ದೇಶ - ವಿದೇಶ
ಮಥುರಾ, ಫೆ.10 : ಉತ್ತರ ಪ್ರದೇಶದ ಮಥುರಾದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರು ಮಕ್ಕಳಿಗೆ ಹಾಲಿಗೆ ವಿಷ ಬೆರೆಸಿ ಕೊಟ್ಟು ಪತಿ- ಪತ್ನಿ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮಕ್ಕಳು ಹೊರಗೆ ಬಾರದೇ ಇದ್ದುದರಿಂದ ನೆರೆಯವರು ಅನುಮಾನದಿಂದ ಮನೆ ಬಾಗಿಲು ತೆರೆದಾಗ ಐವರೂ ಮೃತಪಟ್ಟಿದ್ದಾರೆ.
ಮಥುರಾ ಜಿಲ್ಲೆಯ ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರ್ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಘಟನೆಗೆ ಕಾರಣವೇನೆಂದು ತಿಳಿಯಲು ಮೃತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರೈತ ಮನೀಶ್(35), ಪತ್ನಿ ಸೀಮಾ, ಇಬ್ಬರು ಹೆಣ್ಮಕ್ಕಳಾದ ಪ್ರಿಯಾಂಶಿ, ಹನಿ ಮತ್ತು ಎರಡೂವರೆ ವರ್ಷದ ಪಂಕಜ್ ಮೃತರು. ತಾಯಿ ಮಕ್ಕಳ ಶವಗಳು ಬೆಡ್ ನಲ್ಲಿದ್ದರೆ, ಮನೀಶ್ ಹೊರಗಡೆ ಹಾಲ್ನಲ್ಲಿತ್ತು. ಮನೆಯ ಒಳಗಡೆ ಗೋಡೆಯಲ್ಲಿ ನಾನು ಮನೀಶ್ ಮತ್ತು ಸೀಮಾ ನಮ್ಮ ಸ್ವಂತ ಇಚ್ಛೆಯಂತೆ ಸಾವಿಗೆ ಶರಣಾಗಿದ್ದೇವೆ, ಇದರಲ್ಲಿ ಯಾರದೇ ಪಾತ್ರವಿಲ್ಲ. ಯಾರಿಗೂ ಕಿರುಕುಳ ಕೊಡುವುದು ಬೇಡ ಎಂದು ಬರೆಯಲಾಗಿದೆ. ಇದೇ ಅಂಶವನ್ನು ಕಾಗದದಲ್ಲಿ ಡೆತ್ ನೋಟ್ ಬರೆಯಲಾಗಿದೆ.



ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ಮೊದಲು ತಮ್ಮ ಮಕ್ಕಳ ಹಾಲಿಗೆ ವಿಷ ಹಾಕಿ, ನಂತರ ತಾವೂ ಅದನ್ನು ಕುಡಿದು ಸಾವಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ಸಂಪೂರ್ಣ ಗ್ರಾಮವನ್ನು ಶೋಕದಲ್ಲಿ ಮುಳುಗಿಸಿದೆ.
ರೈತ ಮನೀಶ್ ಮತ್ತು ಅತನ ಸೋದರ ಒಂದೇ ಗ್ರಾಮದಲ್ಲಿ ಪ್ರತ್ಯೇಕ ವಾಸವಿದ್ದರು. ಇತ್ತೀಚೆಗೆ ತನಗಿದ್ದ ಜಾಗವನ್ನು ಮನೀಶ್ 19 ಲಕ್ಷಕ್ಕೆ ಮಾರಾಟ ಮಾಡಿದ್ದು ಅದರ ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದ. ಇದಲ್ಲದೆ, ದೈನಿಕ್ ಭಾಸ್ಕರ್ ಮಾಹಿತಿ ಪ್ರಕಾರ ಇತ್ತೀಚೆಗೆ ಮನೀಶ್ ಕುಟುಂಬದೊಂದಿಗೆ ದೇವಸ್ಥಾನ ತೆರಳಿದ್ದಾಗ ಅಲ್ಲಿನ ಅರ್ಚಕ ಅವಮಾನಿಸಿ ಕೂಡಿ ಹಾಕಿದ್ದರು ಎನ್ನುವ ಮಾಹಿತಿ ಇದೆ.
In a tragic incident in Uttar Pradesh’s Mathura district, a couple allegedly poisoned their three young children before taking their own lives. The family of five was found dead inside their home in Khapparpur village after neighbors grew suspicious. A suicide note written on the wall and on paper stated that no one else was responsible for their decision. Preliminary reports suggest the couple mixed poison in milk given to the children and later consumed it themselves.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am