ಬ್ರೇಕಿಂಗ್ ನ್ಯೂಸ್
07-01-26 01:53 pm HK News Desk ದೇಶ - ವಿದೇಶ
ಚೆನ್ನೈ, ಜ.7 : ತಮಿಳುನಾಡಿನ ತಿರುಪ್ಪರನ್‌ಕುಂದ್ರಂ ದೀಪೋತ್ಸವ ವಿವಾದಕ್ಕೆ ಸಂಬಂಧಿಸಿ ಮಧುರೈ ಹೈಕೋರ್ಟ್ ಪೀಠ ಹಿಂದೂಗಳಿಗೆ ದೀಪ ಬೆಳಗಲು ಅನುಮತಿ ನೀಡಿದೆ. ಈ ಮೂಲಕ ದೀಪೋತ್ಸವಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಡಿಎಂಕೆ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ತಿರುಪ್ಪರನ್‌ಕುಂದ್ರಂ ದೀಪೋತ್ಸವ ವಿಚಾರ ಎರಡು ಧರ್ಮಗಳ ನಡುವೆ ವಿವಾದವನ್ನು ಹುಟ್ಟುಹಾಕಿತ್ತು. ಮುಸ್ಲಿಮರ ದರ್ಗಾ ಬಳಿಯಲ್ಲೇ ಇದೆಯೆಂದು ಡಿಎಂಕೆ ಸರ್ಕಾರ, ದೀಪೋತ್ಸವಕ್ಕೆ ಅನುಮತಿ ನಿರಾಕರಿಸಿತ್ತು. ಸರ್ಕಾರದ ನಡೆಯನ್ನು ವಿರೋಧಿಸಿ ಭಕ್ತರು ಕೋರ್ಟ್ ಮೆಟ್ಟಿಲೇರಿದ್ದರು. ಸ್ಥಳೀಯ ಕೋರ್ಟ್ ಅವಕಾಶ ನೀಡಿದರೂ ಡಿಎಂಕೆ ಸರ್ಕಾರ, ಇದರಿಂದ ಶಾಂತಿ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿ ಅನುಮತಿ ನಿರಾಕರಿಸಿತ್ತು. ಇದೀಗ ಮಧುರೈ ಹೈಕೋರ್ಟ್ ಪೀಠವೂ ಹಿಂದೂಗಳಿಗೆ ದೀಪ ಬೆಳಗಲು ಅನುಮತಿ ನೀಡಿದ್ದು, ಉತ್ಸವ ವಿರುದ್ಧ ನಿಂತಿದ್ದ ಎಡಪಂಥೀಯರು ಹಾಗೂ ತಮಿಳುನಾಡು ಸರ್ಕಾರಕ್ಕೆ ಪೆಟ್ಟು ಕೊಟ್ಟಿದೆ.
ತಮಿಳುನಾಡು ಸರ್ಕಾರ ಮತ್ತು ಜಿಲ್ಲಾಡಳಿತದ ವಾದಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿರಸ್ಕರಿಸಿದೆ. ದೇವಸ್ಥಾನದ ದೀಪ ಪ್ರಕರಣವನ್ನು ಆಲಿಸಿದ ನಂತರ, ಮಧುರೈ ಹೈಕೋರ್ಟ್ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ತಮಿಳುನಾಡು ಸರ್ಕಾರವು ದೇವಾಲಯವು ಜೈನ ದೇವಾಲಯ ಎಂದು ವಾದಿಸಿತ್ತು. ಇದಲ್ಲದೆ, ದೀಪಸ್ತಂಭವು ದರ್ಗಾದ ಆಸ್ತಿ ಎಂದು ವಕ್ಫ್ ಮಂಡಳಿ ಹೇಳಿಕೊಂಡಿದ್ದನ್ನು ತಗಾದೆ ತೆಗೆದಿತ್ತು. ಇದೀಗ ಮಧುರೈ ಹೈಕೋರ್ಟ್ ಪೀಠ ಹಿಂದೂಗಳಿಗೆ ಸಂಪ್ರದಾಯದಂತೆ ದೀಪ ಬೆಳಗಲು ಅನುಮತಿ ನೀಡಿದೆ.
ಹೈಕೋರ್ಟ್ ತಮಿಳುನಾಡು ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದ್ದು, ಸ್ಟಾಲಿನ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ದೀಪ ಹಚ್ಚಲು ಜಗಳವಾಡಬೇಡಿ. ಈ ವಿಷಯದಲ್ಲಿ ಅನಗತ್ಯ ರಾಜಕೀಯ ನಡೆಯುತ್ತಿದೆ. ದೀಪಸ್ತಂಭ ದೇವಸ್ಥಾನಕ್ಕೆ ಸೇರಿದ್ದು, ಹೀಗಾಗಿ ಸ್ತಂಭದ ಬಳಿ ಜನರಿಗೆ ಹೋಗಲು ಅವಕಾಶ ಇಲ್ಲ ಎಂದು ತಿಳಿಸಿದೆ. ಜೊತೆಗೆ ಇದೇ ವೇಳೆ ಪುರಾತತ್ವ ಇಲಾಖೆಗೆ ಷರತ್ತುಗಳನ್ನು ವಿಧಿಸಲು ಹೈಕೋರ್ಟ್ ಸೂಚಿಸಿದೆ. ದೀಪೋತ್ಸವಕ್ಕೆ ಅನುಮತಿ ನೀಡಿದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.
ಇದಕ್ಕೂ ಮುನ್ನ ತಿರುಪ್ಪರನ್‌ಕುಂದ್ರಂ ಬೆಟ್ಟದಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಹೈಕೋರ್ಟ್ ಅನುಮತಿ ನೀಡಿತ್ತು. ಈ ಮಧ್ಯೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಡಿಎಂಕೆ ಸುಪ್ರಿಂಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಆದೇಶಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
In a significant development, the Madurai Bench of the Madras High Court has granted permission to Hindus to light lamps during the traditional Deepotsava at Thirupparankundram, overturning the Tamil Nadu government’s refusal. The order has come as a major setback to the DMK government, while devotees have expressed happiness.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm