ಬ್ರೇಕಿಂಗ್ ನ್ಯೂಸ್
28-11-25 07:28 pm HK News Desk ದೇಶ - ವಿದೇಶ
ಪಣಜಿ, ನ.28 : ಗೋವಾದ ಕಾಣಕೋಣ ಎಂಬಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಪ್ರತಿಷ್ಠಾಪನೆಗೊಂಡ ಜಗತ್ತಿನ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದ್ದಾರೆ.
ಗೋವಾದ ಪರ್ತಗಾಳಿ ಮಠವು "ದಕ್ಷಿಣದ ಅಯೋಧ್ಯೆ'ಯಾಗಿ ರೂಪುಗೊಳ್ಳುತ್ತಿದೆ. ಬಿಲ್ಲಿನಾಕಾರದಲ್ಲಿ ರೂಪಿಸಲಾಗಿರುವ "ಆದರ್ಶ ಧಾಮ್' ಪ್ರದೇಶದಲ್ಲಿ ಶ್ರೀರಾಮನ ಬೃಹತ್ ಮೂರ್ತಿಯನ್ನು ಇರಿಸಲಾಗಿದೆ. ಮೂರ್ತಿಯನ್ನು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರ ಜೊತೆ ಮೋದಿ ಅನಾವರಣಗೊಳಿಸಿದರು.





ಶ್ರೀಮಠಕ್ಕೆ 550 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ "ಸಾರ್ಧ ಪಂಚ ಶತಮಾನೋತ್ಸವ' ಕಾರ್ಯಕ್ರಮದ ನಿಮಿತ್ತ ಪ್ರಧಾನಿಯವರು ವಿಶೇಷ ಅಂಚೆ ಚೀಟಿ ಹಾಗೂ ನಾಣ್ಯವನ್ನೂ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಶ್ರೀರಾಮನ ಮೂರ್ತಿ ಸುತ್ತಲೂ ರಾಮಾಯಣ ಥೀಮ್ ಪಾರ್ಕ್, ಶ್ರೀರಾಮನ ಮಹಿಮೆ ಸಾರುವ ಮ್ಯೂಸಿಯಂ ಹಾಗೂ 7ಡಿ ರಂಗಮಂದಿರಕ್ಕೂ ಚಾಲನೆ ನೀಡಲಾಯಿತು.


ಶ್ರೀಮಠಕ್ಕೆ 550 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರು, ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆದರೆ, 590 ಕೋಟಿಗೂ ಹೆಚ್ಚು ಶ್ರೀರಾಮ ನಾಮ ಜಪ ನಡೆದು ದಾಖಲೆ ಸೃಷ್ಟಿಸಿದೆ. ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬೆಂಗಳೂರಿನಲ್ಲಿ ಕೆಂಪೇಗೌಡರ ಮೂರ್ತಿಗಳನ್ನು ವಿನ್ಯಾಸಗೊಳಿಸಿದ್ದ ಪ್ರಖ್ಯಾತ ಶಿಲ್ಪಿ "ಪದ್ಮಭೂಷಣ' ಪುರಸ್ಕೃತ ರಾಮ ಸುತಾರ್ ಅವರೇ 77 ಅಡಿ ಎತ್ತರದ ಈ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಿದ್ದಾರೆ.
Prime Minister Narendra Modi inaugurated the world’s tallest 77-foot bronze statue of Lord Rama at Kanakona in Goa, installed by the Gokarna Partagali Jeevottam Math. The newly developed “Adarsh Dham,” designed in the shape of a bow, is now being hailed as the “Ayodhya of the South.”
28-11-25 10:37 pm
Bangalore Correspondent
ಇಬ್ಬರೂ ಬಿಟ್ಕೊಡ್ತಾ ಇಲ್ಲ, 3ನೇ ಸೂತ್ರ ತಯಾರಾಗ್ತಾ ಇ...
28-11-25 10:33 pm
ಸಿದ್ದರಾಮಯ್ಯ ಕೃತಘ್ನ ವ್ಯಕ್ತಿ, ತನ್ನ ಬೆಳೆಸಿದವರನ್ನ...
28-11-25 09:31 pm
ಸಿದ್ದರಾಮಯ್ಯ ಸಂಕಲ್ಪ ಈಡೇರುತ್ತೆ, ಡಿಕೆ ಶಿವಕುಮಾರ್...
28-11-25 07:19 pm
Koppala News, Baby: ವಸತಿ ನಿಲಯದಲ್ಲೇ ಮಗುವಿಗೆ ಜನ...
27-11-25 10:23 pm
28-11-25 10:42 pm
HK News Desk
ಗೋವಾದಲ್ಲಿ ಜಗತ್ತಿನ ಅತಿ ಎತ್ತರದ ಶ್ರೀರಾಮನ ಮೂರ್ತಿ...
28-11-25 07:28 pm
ಪಾಕಿಸ್ತಾನ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್...
26-11-25 07:16 pm
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
28-11-25 02:48 pm
Udupi Correspondent
Mangalore, Udupi, PM Narendra Modi, Krishna M...
28-11-25 11:29 am
ಪೊಲೀಸ್ ವಾರ್ಷಿಕ ಕ್ರೀಡಾಕೂಟ ; ನಾಗರಾಜ್ ಗೌಡ ಓಟದಲ್ಲ...
26-11-25 07:21 pm
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
28-11-25 06:23 pm
HK News Desk
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm
ಧರ್ಮಸ್ಥಳದಲ್ಲಿ ಭಕ್ತರ ಬ್ಯಾಗ್ ನಿಂದ ಚಿನ್ನಾಭರಣ ಕಳವ...
26-11-25 10:43 pm