ಬ್ರೇಕಿಂಗ್ ನ್ಯೂಸ್
13-11-25 05:13 pm HK Staffer ದೇಶ - ವಿದೇಶ
ಚೆನ್ನೈ, ನ.13: ತರಬೇತಿ ವಿವಾನವೊಂದು ಪುದುಕೊಟ್ಟೈ ಜಿಲ್ಲೆಯ ಕೀರನೂರ್ ಬಳಿಯ ತಿರುಚಿ-ಪುದುಕೊಟ್ಟೈ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತಿರುಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಎಂಜಿನ್ ವೈಫಲ್ಯದಿಂದಾಗಿ ತರಬೇತಿ ಪೈಲಟ್‌ಗಳು ವಿಮಾನವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ಪೈಲಟ್ ಮತ್ತು ತರಬೇತಿ ಪೈಲಟ್ ಇಬ್ಬರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ತಾಂತ್ರಿಕ ವೈಫಲ್ಯ ತಿಳಿಯುತ್ತಲೇ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಖಾಸಗಿ ಕಂಪನಿಯ ಒಡೆತನ ಹೊಂದಿರುವ ಮತ್ತು ಸೇಲಂನಿಂದ ಕಾರ್ಯ ನಿರ್ವಹಿಸುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಕಾರೈಕುಡಿ ವಾಯುಪ್ರದೇಶಕ್ಕೆ ತೆರಳುತ್ತಿದ್ದಾಗ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತಿರುಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಮಾನವನ್ನು ಪರಿಶೀಲಿಸಿದ್ದಾರೆ. ಬಿಝಿ ರೋಡ್ ನಲ್ಲಿ ವಿಮಾನ ಲ್ಯಾಂಡ್ ಆಗುತ್ತಲೇ ಜನರು ಅಚ್ಚರಿಗೀಡಾಗಿದ್ದಾರೆ. ಆದರೆ ಯಾವುದೇ ವಾಹನಕ್ಕೆ ಡಿಕ್ಕಿಯಾಗದೆ ಸೇಫ್ ಆಗಿ ಲ್ಯಾಂಡ್ ಆಗಿದೆ. ರಸ್ತೆಯಲ್ಲಿ ಲ್ಯಾಂಡ್ ಆದ ವಿಮಾನವನ್ನು ನೋಡಲು ಜನರು ಅಚ್ಚರಿಯಿಂದ ಸೇರಿದ್ದಾರೆ.
ಸೆಸ್ನಾ ವಿಮಾನವು ಸೇಲಂನ ಎಕ್ವೀರ್ ಫ್ಲೈಯಿಂಗ್ ಕ್ಲಬ್ ಒಡೆತನದಲ್ಲಿದೆ. ಡಿಜಿಸಿಎ ಅಧಿಕಾರಿಗಳ ತನಿಖೆಯ ನಂತರವೇ ಎಂಜಿನ್ ವೈಫಲ್ಯಕ್ಕೆ ನಿಖರವಾದ ಕಾರಣ ತಿಳಿಯಲಿದೆ.
Single-Engine Training Aircraft Makes Emergency Landing on Trichy-Pudukottai Highway.
— RT_India (@RT_India_news) November 13, 2025
Two people on board were not injured, and there was no damage to the public property when the… pic.twitter.com/zcw20Ooqp7
A training aircraft made an emergency landing on the Tiruchi–Pudukottai National Highway near Keeranur in Pudukottai district, surprising motorists and onlookers on Tuesday.
08-01-26 11:06 pm
HK News Desk
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
ಅತ್ತೆ ಕಿರುಕುಳ ಆರೋಪ ; ಸೊಸೆ ತನ್ನ ಇಬ್ಬರು ಮಕ್ಕಳೊಂ...
08-01-26 07:51 pm
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನದುದ್ದಕ್ಕೂ ಹೋರಾ...
08-01-26 02:10 pm
08-01-26 11:21 pm
HK News Desk
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
08-01-26 08:48 pm
Mangalore Correspondent
ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸ...
08-01-26 08:09 pm
ಗಡಿನಾಡು ಕಾಸರಗೋಡಿನಲ್ಲಿ ಮಲಯಾಳ ಹೇರಿಕೆ ; ಕಡ್ಡಾಯ ಭ...
08-01-26 02:34 pm
ಸುಳ್ಯ ಶಾಸಕಿ ಭಾಗೀರಥಿ ಬಗ್ಗೆ ಅವಹೇಳನ ಪೋಸ್ಟ್ ; ಕಾಂ...
07-01-26 11:06 pm
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ನಿಂದಿಸಿ ಬರೆದು ಜ...
07-01-26 05:15 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm