ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರು ; ಟ್ರೋಫಿ ಹಿಡಿದು ಹರ್ಮನ್ ಪ್ರೀತ್ ಕೌರ್ ತಂಡದ ವಿಶಿಷ್ಟ ಸಂಭ್ರಮಾಚರಣೆ, ವಿಡಿಯೋ ವೈರಲ್  

03-11-25 01:13 pm       HK News Desk   ದೇಶ - ವಿದೇಶ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಐಸಿಸಿ ಮಹಿಳಾ ವಿಶ್ವಕಪ್ 13ನೇ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ಭಾರತ ವನಿತೆಯರ ತಂಡ ಕಪ್ ಎತ್ತಿ ಹಿಡಿದಿದೆ. ಇದೇ ವೇಳೆ, ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೊಸ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 

ಮುಂಬೈ, ನ.3 : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಐಸಿಸಿ ಮಹಿಳಾ ವಿಶ್ವಕಪ್ 13ನೇ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ಭಾರತ ವನಿತೆಯರ ತಂಡ ಕಪ್ ಎತ್ತಿ ಹಿಡಿದಿದೆ. ಇದೇ ವೇಳೆ, ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೊಸ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿತ್ತು. ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ ಗಳಿಸಿ ಆಲೌಟ್ ಆಗಿದ್ದು 52 ರನ್​ಗಳ ಜಯಭೇರಿ ಬಾರಿಸಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು. 

Watch: Harmanpreet Kaur lifts India's maiden Women's ODI World Cup, Messi  like celebration goes viral

Watch Harmanpreet Kaur Receive ICC Women's World Cup 2025 Trophy From ICC  Chairman Jay Shah, Perform Special Celebration With Teammates (Video  Inside) | 🏏 LatestLY

Watch: Harmanpreet Kaur lifts India's first-ever Women's World Cup trophy -  India Today

India win maiden Women's World Cup title after Verma-Sharma show | Reuters

Our World Cup began that night': Harmanpreet Kaur on how one defeat united  India to script history | Cricket News - The Times of India

ವಿಶ್ವಕಪ್‌ ಟ್ರೋಫಿ ಪಡೆಯುತ್ತಲೇ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಹೊಸ ರೀತಿಯ ಸೆಲೆಬ್ರೇಷನ್​ಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಭಾರತ ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ರೊಬೋಟ್ ವಾಕ್ ಮಾಡಿ ಸಂಭ್ರಮಿಸಿದ್ದರು. ಹರ್ಮನ್ ಪ್ರೀತ್ ಕೂಡ ಅದೇ ರೀತಿ ವಿಶಿಷ್ಟವಾಗಿ ಸಂಭ್ರಮಾಚಣೆ ಮಾಡಿದ್ದಾರೆ. ಹರ್ಮನ್ ಪ್ರೀತ್ ಐಸಿಸಿ ಅಧ್ಯಕ್ಷ ಜಯ್ ಶಾರಿಂದ ಟ್ರೋಫಿ ಪಡೆದು ಸಹ ಆಟಗಾರ್ತಿಯರತ್ತ ತೆರಳುತ್ತಾ ಟ್ರೋಫಿ ಬೇಕಾ.. ಬೇಕಾ... ಕೊಡಲ್ಲ ಎನ್ನುತ್ತ ಹಿಂದೆ ಮುಂದೆ ಹೋಗಿ ಬಳಿಕ ಒಟ್ಟಾಗಿ ಎತ್ತಿಹಿಡಿದು ಸಂಭ್ರಮಿಸಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ.

Team India’s women cricketers have created history by winning the ICC Women’s One Day World Cup for the first time ever. The video of captain Harmanpreet Kaur’s unique celebration after lifting the trophy has now gone viral on social media.