ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು, ಟ್ರಕ್ ಡಿಕ್ಕಿ ಹೊಡೆದು ಯಾತ್ರಿಕರಿದ್ದ ಟ್ರಾವೆಲರ್ ಅಪ್ಪಚ್ಚಿ 

02-11-25 11:12 pm       HK News Desk   ದೇಶ - ವಿದೇಶ

ರಾಜಸ್ಥಾನದ ಜೋಧಪುರ ಜಿಲ್ಲೆಯ ಫಲೋಡಿ ಪ್ರದೇಶದಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 18 ಜನರು ಸಾವನ್ನಪ್ಪಿದ್ದಾರೆ. ಟೆಂಪೋ ಟ್ರಾವೆಲ್ ಮತ್ತು ಟ್ರಕ್‌ ಮುಖಾಮುಖಿ ಡಿಕ್ಕಿಯಾಗಿದ್ದು ಟ್ರಾವೆಲರ್ ಬಸ್ ನಜ್ಜುಗುಜ್ಜಾಗಿದೆ. 

ಜೈಪುರ, ನ.2 : ರಾಜಸ್ಥಾನದ ಜೋಧಪುರ ಜಿಲ್ಲೆಯ ಫಲೋಡಿ ಪ್ರದೇಶದಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 18 ಜನರು ಸಾವನ್ನಪ್ಪಿದ್ದಾರೆ. ಟೆಂಪೋ ಟ್ರಾವೆಲ್ ಮತ್ತು ಟ್ರಕ್‌ ಮುಖಾಮುಖಿ ಡಿಕ್ಕಿಯಾಗಿದ್ದು ಟ್ರಾವೆಲರ್ ಬಸ್ ನಜ್ಜುಗುಜ್ಜಾಗಿದೆ. 

ಹಲವಾರು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಿಕಾನೇರ್‌ನ ಕೊಲಾಯತ್‌ಗೆ ಭೇಟಿ ನೀಡಲು ಜೋಧ್‌ಪುರದ ಸುರ್‌ಸಾಗರ್ ಪ್ರದೇಶದಿಂದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ಹಿಂದಿರುಗುವ ಪ್ರಯಾಣದಲ್ಲಿ, ಮಾತೋಡಾ ಪ್ರದೇಶದಲ್ಲಿ ರಸ್ತೆಬದಿ ನಿಲ್ಲಿಸಿದ್ದ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬಸ್ ತೀವ್ರ ಹಾನಿಗೊಳಗಾಗಿದ್ದು, ಹಲವಾರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಜೋಧಪುರದ ಸುರ್ಸಾಗರ್ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.

ಮಾಹಿತಿ ಪಡೆದ ಕೂಡಲೇ ಮಾತೋಡಾ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಗ್ರಾಮಸ್ಥರ ಸಹಾಯದಿಂದ ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು, ಪ್ರಥಮ ಚಿಕಿತ್ಸೆ ನಂತರ ಅವರನ್ನು ಜೋಧ್‌ಪುರಕ್ಕೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ಇದುವರೆಗೆ 18 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

In a horrific road accident in Rajasthan’s Jodhpur district, 18 people were killed when a tempo traveller carrying pilgrims collided with a truck near Phalodi on Sunday evening.  According to police, the traveller was returning to Jodhpur’s Sursagar area after a visit to Kolayat in Bikaner, when it crashed into a parked trailer near Mathoda. The impact of the collision was so severe that the traveller was completely mangled, leading to the instant death of several passengers.