ಬ್ರೇಕಿಂಗ್ ನ್ಯೂಸ್
28-10-25 10:23 pm HK News Desk ದೇಶ - ವಿದೇಶ
ನವದೆಹಲಿ, ಅ.28 : ಅಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ 29 ವರ್ಷದ ಯುವಕ ಅನಿಲಕುಮಾರ್ ಬೊಲ್ಲ ಅವರು 100 ಮಿಲಿಯನ್ ದಿರ್ಹಾಮ್‌ಗಳ (ಸುಮಾರು 240 ಕೋ.ರೂ.) ಯುಎಇಯ ಈವರೆಗಿನ ಅತ್ಯಂತ ದೊಡ್ಡ ಮೊತ್ತದ ಲಾಟರಿ ಗೆಲ್ಲುವ ಮೂಲಕ ಒಂದೇ ಬಾರಿಗೆ ಶತ ಕೋಟಿಪತಿಗಳ ಸಾಲಿಗೆ ಸೇರಿದ್ದಾರೆ.
ಬೊಲ್ಲ ಕಳೆದ ವಾರ ನಡೆದ 23ನೇ ಅದೃಷ್ಟ ಡ್ರಾದಲ್ಲಿ ಎಲ್ಲ ಏಳೂ ಅಂಕಿಗಳನ್ನು ಸರಿಯಾಗಿ ಊಹಿಸುವ ಮೂಲಕ 88 ಲಕ್ಷ ಟಿಕೆಟ್‌ಗಳ ಪೈಕಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ ಎಂದು ದುಬೈನ ಖಲೀಜ್ ಟೈಮ್ಸ್ ವರದಿ ಮಾಡಿದೆ.
ತಾನು ಸ್ವಯಂಚಾಲಿತವಾಗಿ ಅಂಕಿಗಳ ಸಂಯೋಜನೆಯನ್ನು ಸೃಷ್ಟಿಸುವ ಈಜಿ ಪಿಕ್ ಆಯ್ಕೆಯನ್ನು ಬಳಸಿಕೊಂಡು ಬಹುಮಾನಿತ ಟಿಕೆಟ್ ಖರೀದಿಸಿದ್ದೆ. ಆದಾಗ್ಯೂ ತನ್ನ ತಾಯಿಯ ಹುಟ್ಟುಹಬ್ಬವನ್ನು ಗೌರವಿಸಲು ಉದ್ದೇಶಪೂರ್ವಕವಾಗಿ ಅವರ ಜನ್ಮದಿನಾಂಕದ 11ರ ಸಂಖ್ಯೆಯನ್ನು ಕೊನೆಯ ನಂಬರ್ ಆಗಿ ಆಯ್ಕೆ ಮಾಡಿಕೊಂಡಿದ್ದೆ ಎಂದು ಅನಿಕ್ ಕುಮಾರ್ ಹೇಳಿದ್ದಾರೆ. ಗೆಲುವಿನ ಬಳಿಕ ಬೊಲ್ಲ ತನ್ನ ಹೆತ್ತವರ ಕನಸುಗಳನ್ನು ನನಸಾಗಿಸಲು, ಅವರನ್ನು ಯುಎಇಗೆ ಕರೆತರಲು ಮತ್ತು ಗೆದ್ದ ಹಣದಲ್ಲಿ ಒಂದು ಭಾಗವನ್ನು ದಾನ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.
ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್‌ಗಳ ಬಹುಮಾನವನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬೊಲ್ಲ ಪಾತ್ರರಾಗಿದ್ದಾರೆ. ಯುಎಇ ಲಾಟರಿ ತಂಡದಿಂದ ತನ್ನ ಜೀವನವನ್ನೇ ಬದಲಿಸುವ ಕರೆಯನ್ನು ಸ್ವೀಕರಿಸಿದಾಗ ಬೊಲ್ಲ ತನ್ನ ಮನೆಯಲ್ಲಿದ್ದು, ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಲಾಟರಿ ಆರಂಭಗೊಂಡಾಗಿನಿಂದಲೂ ನಿಷ್ಠೆಯಿಂದ ಟಿಕೆಟ್ ಖರೀದಿಸುತ್ತಿದ್ದ ಬೊಲ್ಲ, ಸುದ್ದಿಯನ್ನು ಕೇಳಿದಾಗ ತಾನು ಸಂಪೂರ್ಣ ಆಘಾತಗೊಂಡಿದ್ದೆ, ಇಷ್ಟೊಂದು ಹಣವನ್ನು ಏನು ಮಾಡುವುದೆಂದು ಅಚ್ಚರಿಯಾಗಿದೆ ಎಂದಿದ್ದಾರೆ.
Anil Kumar Bolla, a 29-year-old Indian-origin man living in Abu Dhabi, has become an instant multimillionaire after winning the UAE’s largest-ever lottery jackpot — a whopping 100 million dirhams (approximately ₹240 crore).
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm