Vemuri Kaveri Travels Bus Accident, Fire, Illegal Seating: ಕರ್ನೂಲ್ ಬಸ್ ಅಪಘಾತ ; ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸ್ಲೀಪರ್ ಕೋಚ್ ಮಾರ್ಪಾಡು, ಅಕ್ರಮ ಪರಿಗಣಿಸದೆ ಪರವಾನಗಿ ನೀಡಿದ್ದ ಅಧಿಕಾರಿಗಳು 

25-10-25 02:28 pm       HK News Desk   ದೇಶ - ವಿದೇಶ

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಭೀಕರ ಬೆಂಕಿ ಅವಘಡಕ್ಕೀಡಾಗಿ 21 ಮಂದಿಯ ಸಾವಿಗೆ ವೇಮುರಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು  ಅಕ್ರಮವಾಗಿ ಬಸ್ಸಿನ ಸಿಟ್ಟಿಂಗ್ ಸೀಟುಗಳನ್ನು ಸ್ಲೀಪರ್ ಆಗಿ ಪರಿವರ್ತಿಸಲಾಗಿತ್ತು. ಅಲ್ಲದೆ, ಸರಿಯಾದ ದಾಖಲೆಗಳಿಲ್ಲದೆ ರಾಜ್ಯ, ಹೊರ ರಾಜ್ಯಗಳಲ್ಲಿ ಸಂಚರಿಸುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು, ಅ.25: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಭೀಕರ ಬೆಂಕಿ ಅವಘಡಕ್ಕೀಡಾಗಿ 21 ಮಂದಿಯ ಸಾವಿಗೆ ವೇಮುರಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು  ಅಕ್ರಮವಾಗಿ ಬಸ್ಸಿನ ಸಿಟ್ಟಿಂಗ್ ಸೀಟುಗಳನ್ನು ಸ್ಲೀಪರ್ ಆಗಿ ಪರಿವರ್ತಿಸಲಾಗಿತ್ತು. ಅಲ್ಲದೆ, ಸರಿಯಾದ ದಾಖಲೆಗಳಿಲ್ಲದೆ ರಾಜ್ಯ, ಹೊರ ರಾಜ್ಯಗಳಲ್ಲಿ ಸಂಚರಿಸುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ದಾಖಲೆಗಳ ಪ್ರಕಾರ, DD01 N9490 ನೋಂದಣಿ ಸಂಖ್ಯೆ ಹೊಂದಿರುವ ಬಸ್ ವೇಮುರಿ ಕಾವೇರಿ ಟ್ರಾವೆಲ್ಸ್‌ನ ಮಾಲೀಕ ವೇಮುರಿ ವಿನೋದ್ ಕುಮಾರ್ ಒಡೆತನದಲ್ಲಿತ್ತು. ಇದನ್ನು ಮೇ 2, 2018 ರಂದು ಖರೀದಿಸಿದ್ದು ಡಿಯು-ಡಮಾನ್ ನಲ್ಲಿ ನೋಂದಣಿ ಮಾಡಲಾಗಿದೆ. ಏಪ್ರಿಲ್ 29, 2025 ರಂದು ಇದರ ನೋಂದಣಿಯನ್ನು ಒಡಿಶಾದ ರಾಯಗಡ RTO ಗೆ ಜಿ ಬಿಜಯ ಲಕ್ಷ್ಮಿ ಹೆಸರಿನಲ್ಲಿ ವರ್ಗಾಯಿಸಲಾಗಿತ್ತು. 

ಒಡಿಶಾ ಅಧಿಕಾರಿಗಳು ನೀಡಿದ ಮೂಲ (ಪ್ರವಾಸಿ) ಪರವಾನಗಿಯು ಮೇ 1, 2025 ರಿಂದ ಏಪ್ರಿಲ್ 30, 2030ರ ವರೆಗೆ ಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಸಿಲ್ವಾಸ್ಸಾ (ಡಿಯು-ದಮನ್) ಅಧಿಕಾರಿಗಳು ನೀಡಿದ ಫಿಟ್‌ನೆಸ್ ಪ್ರಮಾಣಪತ್ರವು ಮಾರ್ಚ್ 31, 2027ರ ವರೆಗೆ ಮಾನ್ಯವಾಗಿದೆ. ವಿಮೆ, ಫಿಟ್‌ನೆಸ್ ಮತ್ತು ರಸ್ತೆ ತೆರಿಗೆಯಂತಹ ದಾಖಲೆಗಳನ್ನು ಹೊಂದಿದ್ದರೂ, ಬಸ್ ನ್ನು ಸೀಟರ್ ಕೋಚ್ ಆಗಿ ನೋಂದಾಯಿಸಿದ್ದು ಅದನ್ನೇ ಸ್ಲೀಪರ್ ಆಗಿ ಬದಲಿಸಿದ್ದನ್ನು ಗುರುತಿಸಲು ಅಧಿಕಾರಿಗಳು ವಿಫಲರಾಗಿದ್ದರು. 

ಆಂಧ್ರ ಪ್ರದೇಶ ಸರ್ಕಾರಿ ಬಸ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಖಾಸಗಿ ವಾಹನಗಳು ಆಸನಗಳ ನಡುವಿನ ಜಾಗವನ್ನು ಕಡಿಮೆ ಮಾಡುತ್ತಿದ್ದು ಹೆಚ್ಚುವರಿ ಸಾಲುಗಳನ್ನು ಹೊಂದಿರುತ್ತವೆ. ಪ್ರಯಾಣಿಕರ ಸಾಮರ್ಥ್ಯ ಮತ್ತು ಆದಾಯವನ್ನು ಹೆಚ್ಚಿಸಲು ಮೂಲ ವಿನ್ಯಾಸ ರಚನೆಗಳನ್ನು ಉಲ್ಲಂಘಿಸುತ್ತವೆ. ಹಲವಾರು ಖಾಸಗಿ ನಿರ್ವಾಹಕರು ಈ ರೀತಿ ನಿಯಮಗಳನ್ನು ಉಲ್ಲಂಘಿಸಿ ಮಾರ್ಪಾಡು ಮಾಡುತ್ತಾರೆ.‌ ಪ್ರಯಾಣಿಕರ ಸುರಕ್ಷತೆ ಕಡೆಗಣಿಸಿ ಈ ರೀತಿ ಬದಲಾವಣೆ ಮಾಡುತ್ತಾರೆ. ಅಕ್ರಮವಾಗಿ ಮಾರ್ಪಡಿಸಿದ ಬಸ್‌ಗಳಿಗೆ ಅನುಮೋದನೆಗಳನ್ನು ಪಡೆಯಲು ಆರ್ ಟಿಎ ಅಧಿಕಾರಿಗಳಿಗೆ ಲಂಚ ನೀಡುತ್ತಾರೆ. ಇದರಿಂದಾಗಿ ಅಪಘಾತ ಸಂದರ್ಭಗಳಲ್ಲಿ ಸಾವಿನ ಅಪಾಯವನ್ನು ಹೆಚ್ಚಿರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

The devastating bus fire in Andhra Pradesh’s Kurnool district that claimed 21 lives has revealed shocking lapses and multiple violations of transport regulations by Vemuri Kaveri Travels, the operator of the ill-fated vehicle. Preliminary investigations found that the bus had been illegally modified from a seating coach to a sleeper coach without proper authorization, and was operating across state borders without valid documentation.