ಬ್ರೇಕಿಂಗ್ ನ್ಯೂಸ್
22-10-25 10:23 pm HK News Desk ದೇಶ - ವಿದೇಶ
ತಿರುವನಂತಪುರಂ, ಅ.22 : ಶಬರಿಮಲೆ ಸನ್ನಿಧಾನ ವೀಕ್ಷಣೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆತಂದಿದ್ದ ಹೆಲಿಕಾಪ್ಟರ್ ಪತ್ತನಂತಿಟ್ಟ ಜಿಲ್ಲೆಯ ಪ್ರಮಾಡಂ ಎಂಬಲ್ಲಿನ ರಾಜೀವಗಾಂಧಿ ಇಂಡೋರ್ ಸ್ಟೇಡಿಯಂನ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಚಕ್ರ ನೆಲದಲ್ಲಿ ಹೂತು ಹೋದ ಘಟನೆ ನಡೆದಿದೆ. ಆಮೂಲಕ ರಾಷ್ಟ್ರಪತಿ ಭೇಟಿಯಲ್ಲಿ ಭಾರೀ ಭದ್ರತಾ ಲೋಪ ಆಗಿರುವ ಆರೋಪ ಕೇಳಿಬಂದಿದೆ.
ದ್ರೌಪದಿ ಮುರ್ಮು ಅವರು ಹೆಲಿಕಾಪ್ಟರ್ ನಿಂದ ಇಳಿದು ಪಂಬೆಗೆ ರಸ್ತೆಯಲ್ಲಿ ತೆರಳಿದ ಬೆನ್ನಲ್ಲೇ ಮಲಯಾಳಂ ಟಿವಿ ಚಾನೆಲ್ಗಗಳಲ್ಲಿ ಹೆಲಿಕಾಪ್ಟರನ್ನು ಪೊಲೀಸರು ದೂಡುತ್ತಿರುವ ದೃಶ್ಯ ಪ್ರಸಾರವಾಗಿದೆ. ಪೊಲೀಸರ ಪ್ರಕಾರ, ಹೆಲಿಪ್ಯಾಡನ್ನು ತುರ್ತಾಗಿ ಮಾಡಿದ್ದರಿಂದ ಕಾಂಕ್ರೀಟ್ ಒಣಗಿರಲಿಲ್ಲ. ಸೇನಾ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಅದರ ಒತ್ತಡಕ್ಕೆ ಟೈರ್ ಹೂತು ಹೋಗಿದೆ. ಇದರಿಂದ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಹೆಲಿಕಾಪ್ಟರನ್ನು ದೂಡಿ ಹೂತು ಹೋಗಿದ್ದ ಟೈರನ್ನು ಮುಂದಕ್ಕೆ ಹೋಗುವಂತೆ ಮಾಡಿದರು.
ಪಂಬಾ ಹತ್ತಿರದ ನಿಲಕ್ಕಲ್ ನಲ್ಲಿ ರಾಷ್ಟ್ರಪತಿ ಹೆಲಿಕಾಪ್ಟರ್ ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಘಟ್ಟದ ಬಳಿಯ ಈ ಜಾಗದಲ್ಲಿ ಕಾಪ್ಟರ್ ಇಳಿಯಲು ಗ್ರೀನ್ ಸಿಗ್ನಲ್ ಸಿಗದ ಕಾರಣ ಕೊನೆಕ್ಷಣದಲ್ಲಿ ಪ್ರಮಾಡಂ ಸ್ಟೇಡಿಯಂ ಒಳಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದಕ್ಕಾಗಿ ಒಂದು ದಿನ ಇರುವಾಗ ಕಾಂಕ್ರೀಟ್ ಹೆಲಿಪ್ಯಾಡ್ ಮಾಡಲಾಗಿತ್ತು. ಕಾಂಕ್ರೀಟ್ ಸರಿಯಾಗಿ ಗಟ್ಟಿಯಾಗಿರದ ಕಾರಣ ಕಾಪ್ಟರ್ ನಿಲ್ಲುತ್ತಿದ್ದಂತೆ ಅದರ ಒತ್ತಡಕ್ಕೆ ಚಕ್ರ ಹೂತು ಹೋಗಿದೆ.
ನಾಲ್ಕು ದಿನಗಳ ಕೇರಳ ಭೇಟಿಗಾಗಿ ರಾಷ್ಟ್ರಪತಿ ಮುರ್ಮು ಅವರು ಮಂಗಳವಾರ ಸಂಜೆ ತಿರುವನಂತಪುರಕ್ಕೆ ಆಗಮಿಸಿದ್ದರು. ಅಲ್ಲಿಂದ ಪತ್ತನಂತಿಟ್ಟ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಉಳಿದುಕೊಂಡಿದ್ದರು. ಬುಧವಾರ ಬೆಳಗ್ಗೆ ಪ್ರಮಾಡಂ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದು ಅಲ್ಲಿಂದ ರಸ್ತೆ ಮೂಲಕ ಸನ್ನಿಧಾನಕ್ಕೆ ತೆರಳಿದ್ದರು.
📍Kerala | #Watch: A portion of the helipad tarmac sank in after a chopper carrying President Droupdi Murmu landed at Pramadam Stadium. Police and fire department personnel deployed at the spot physically pushed the helicopter out of the sunken spot.
— NDTV (@ndtv) October 22, 2025
📹: ANI/X pic.twitter.com/5zpXTGDHuv
A major security lapse was reported during President Droupadi Murmu’s visit to Shabarimala after the Army helicopter carrying her got stuck at the helipad in Pramadam, Pathanamthitta district.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm