ಬ್ರೇಕಿಂಗ್ ನ್ಯೂಸ್
22-10-25 05:45 pm HK News Desk ದೇಶ - ವಿದೇಶ
ನವದೆಹಲಿ, ಅ.22 : ಪಾಕಿಸ್ತಾನದ ಜೈಶ್ ಇ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಭಾರತದ ವಿರುದ್ಧ ಯುದ್ಧ ಸಾರುವುದಕ್ಕಾಗಿ ಜಮಾತ್ ಉಲ್ ಮುಮಿನಾತ್ ಎನ್ನುವ ಮಹಿಳಾ ಘಟಕವನ್ನು ಸ್ಥಾಪಿಸಿದ್ದಾನೆ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಮುಸ್ಲಿಂ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆನ್ಲೈನ್ ತರಬೇತಿ ಕೋರ್ಸನ್ನೂ ಆರಂಭಿಸಿದ್ದಾನೆ.
ತುಫಾತ್ ಅಲ್ ಮುಮಿನಾತ್ ಎಂದು ಕರೆಯಲ್ಪಡುವ ಈ ಉಗ್ರವಾದಿ ಕೋರ್ಸ್ ಸೇರಲು ಪಾಕಿಸ್ತಾನದ ಕರೆನ್ಸಿಯ 500 ರೂ.(ಭಾರತೀಯ ಕರೆನ್ಸಿಯಲ್ಲಿ 156 ರೂ.) ನೀಡಬೇಕಾಗುತ್ತದೆ. ಮಸೂದ್ ಅಜರ್ ಕುಟುಂಬದ ಮಹಿಳಾ ಸದಸ್ಯರೇ ಈ ಕೋರ್ಸ್ ನಡೆಸಲಿದ್ದಾರೆ. ಜಿಹಾದ್ ಮತ್ತು ಇಸ್ಲಾಮ್ ಬಗ್ಗೆ ಈ ಸಂಘಟನೆ ಸೇರುವ ಮಂದಿಗೆ ಇವರು ಕರ್ತವ್ಯ ಬೋಧಿಸಲಿದ್ದಾರೆ. ನವೆಂಬರ್ 8ರ ಬಳಿಕ ಈ ನೇರ ನೇಮಕಾತಿಯ ಕೋರ್ಸ್ ಆರಂಭವಾಗಲಿದೆ.
ಪ್ರತಿ ದಿನವೂ ಸುಮಾರು 40 ನಿಮಿಷಗಳ ಬೋಧನೆ ಇರಲಿದೆ. ಈ ತರಬೇತಿಯನ್ನು ಮಸೂದ್ ಅಝರ್ ಸೋದರಿಯರಾದ ಸಾದಿಯಾ ಅಝರ್ ಮತ್ತು ಸಮೈರಾ ಅಝರ್ ನಡೆಸಲಿದ್ದಾರೆ. ಜಮಾಲ್ ಉಲ್ ಮುಮಿನಾತ್ ಸಂಘಟನೆಯನ್ನು ಬಲಪಡಿಸಲು ಈ ಆನ್ಲೈನ್ ಕ್ಲಾಸ್ ನೆರವಾಗಲಿದೆ ಎಂದು ಹೇಳಲಾಗಿದೆ. ಸಾದಿಯಾ ಅಝುರ್ ಕಿರಿಯ ಸೋದರಿಯಾಗಿದ್ದು, ಜಮಾತ್ ಮಹಿಳಾ ಘಟಕದ ನೇತೃತ್ವ ವಹಿಸಿಕೊಂಡಿದ್ದಾಳೆ.
ಸಾದಿಯಾಳ ಗಂಡ ಯೂಸುಫ್ ಅಝರ್ ಭಾರತ ಕಳೆದ ಮೇ ತಿಂಗಳಲ್ಲಿ ನಡೆಸಿದ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹತನಾಗಿದ್ದ. ಜೈಶ್ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿ ಇರುವ ಪಾಕ್ ಆಕ್ರಮಿತ ಕಾಶ್ಮೀರದ ಬಹವಾಲ್ಪುರದ ಮಸೀದಿ ಮೇಲೆ ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿ, ಮಸೂದ್ ಅಝರ್ ಕುಟುಂಬ ಸದಸ್ಯರು ಸೇರಿ ನೂರಾರು ಉಗ್ರರನ್ನು ನಾಶ ಮಾಡಿತ್ತು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನದ ಉಗ್ರವಾದಿ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರ ಉಮರ್ ಫಾರೂಕ್ ಪತ್ನಿ ಅಫ್ರೀರ್ ಫಾರೂಕ್ ಕೂಡ ಜೈಶ್ ಉಗ್ರರ ಮಹಿಳಾ ಘಟಕವನ್ನು ಸೇರಿಕೊಂಡಿದ್ದಾಳೆ.
ಮಸೂದ್ ಅಝರ್ ಕಳೆದ ತಿಂಗಳು ಬಹವಾಲ್ಪುರದಲ್ಲಿ ನಡೆಸಿದ ಭಾಷಣದಲ್ಲಿ ದೇಣಿಗೆ ಸಂಗ್ರಹಕ್ಕಾಗಿ ಅನ್ಲೈನ್ ಅಭಿಯಾನ ನಡೆಸುವ ಬಗ್ಗೆ ಹೇಳಿಕೊಂಡಿದ್ದ. ಈಗ ಜೈಶ್ ಮಹಿಳಾ ಘಟಕ ಸೇರಿಕೊಳ್ಳಲು 500 ರೂ. ದೇಣಿಗೆ ನೀಡುವುದರ ಜೊತೆಗೆ ಆನ್ಲೈನಲ್ಲಿಯೇ ತಮ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಕಿದೆ. ಕಳೆದ ಅಕ್ಟೋಬರ್ 8ರಂದು ಮಸೂದ್ ಅಝರ್ ಜೈಶ್ ಮಹಿಳಾ ಘಟಕದ ಘೋಷಣೆ ಮಾಡಿದ್ದ. ಅ.19ರಂದು ಬಹವಾಲ್ಪುರದಲ್ಲಿ ದುಕ್ತಾರಣ್ ಇ- ಇಸ್ಲಾಮ್ ಎನ್ನುವ ಹೆಸರಿನಲ್ಲಿ ಮಹಿಳೆಯರನ್ನೂ ಉಗ್ರವಾದಿ ಸಂಘಟನೆಗೆ ಸೇರಿಸಿಕೊಳ್ಳುವ ಅಗತ್ಯದ ಬಗ್ಗೆ ಭಾಷಣ ಮಾಡಿದ್ದ. ಪುರುಷನಿಲ್ಲದೆ ಒಬ್ಬಂಟಿ ಮಹಿಳೆ ಸಮಾಜದ ನಡುವೆ ಬರಬಾರದು ಎನ್ನುವ ಕಟ್ಟುಕಟ್ಟಳೆ ಹೊಂದಿರುವ ಪಾಕಿಸ್ತಾನದಲ್ಲಿ ಮಹಿಳೆಯರದ್ದೇ ಉಗ್ರ ಸಂಘಟನೆ, ಆಮೂಲಕ ದೇಣಿಗೆ ಸಂಗ್ರಹಿಸುವ ಮಸೂದ್ ಅಝರ್ ಯೋಜನೆಗೆ ಮಹಿಳೆಯರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದು ಕುತೂಹಲಕಾರಿ. (ಎನ್ ಡಿಟಿವಿ ವರದಿ)
Earlier this month NDTV revealed how the Pakistan-based Jaish-e-Mohammed - designated a terrorist organisation by the United Nations - is creating the Jamat ul-Muminat, a women's unit.
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
09-01-26 08:30 pm
HK News Desk
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
09-01-26 09:18 pm
Mangalore Correspondent
ಉದ್ಯೋಗ ಖಾತ್ರಿ ಯೋಜನೆಯನ್ನೇ ಮೋದಿ ಕೊಂದಾಕಿದ್ದಾರೆ,...
09-01-26 05:47 pm
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm