ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ ; ಆರು ಮಂದಿಗಷ್ಟೆ ಹಳಬರಿಗೆ ಸ್ಥಾನ, ಹರ್ಷ ಸಾಂಘ್ವಿ ಡಿಸಿಎಂ ಸ್ಥಾನಕ್ಕೆ ಭಡ್ತಿ, ಎಲ್ಲ 16 ಸಚಿವರ ರಾಜಿನಾಮೆ ಪಡೆದಿದ್ದ ಹೈಕಮಾಂಡ್ 

17-10-25 05:25 pm       HK News Desk   ದೇಶ - ವಿದೇಶ

ಗುಜರಾತ್‌ ಬಿಜೆಪಿ ಸರ್ಕಾರದಲ್ಲಿ ಎಲ್ಲ 16 ಸಚಿವರ ರಾಜಿನಾಮೆ ಪಡೆದು ಸಂಪುಟ ಪುನಾರಚನೆ ಮಾಡಲಾಗಿದೆ. ಗೃಹ ಸಚಿವರಾಗಿದ್ದ ಹರ್ಷ ಸಾಂಘ್ವಿ ಅವರನ್ನು ನೂತನ ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟ ಸಚಿವರ ಸಂಖ್ಯೆಯನ್ನು 25ಕ್ಕೆ ವಿಸ್ತರಿಸಲಾಗಿದೆ. 

ಅಹ್ಮದಾಬಾದ್, ಅ.17 : ಗುಜರಾತ್‌ ಬಿಜೆಪಿ ಸರ್ಕಾರದಲ್ಲಿ ಎಲ್ಲ 16 ಸಚಿವರ ರಾಜಿನಾಮೆ ಪಡೆದು ಸಂಪುಟ ಪುನಾರಚನೆ ಮಾಡಲಾಗಿದೆ. ಗೃಹ ಸಚಿವರಾಗಿದ್ದ ಹರ್ಷ ಸಾಂಘ್ವಿ ಅವರನ್ನು ನೂತನ ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟ ಸಚಿವರ ಸಂಖ್ಯೆಯನ್ನು 25ಕ್ಕೆ ವಿಸ್ತರಿಸಲಾಗಿದೆ. 

ಹೊಸ ಸಂಪುಟದಲ್ಲಿ ಆರು ಮಾಜಿ ಸಚಿವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಸೇರಿದಂತೆ 19 ಹೊಸಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಹರ್ಷ ಸಾಂಘ್ವಿ, ಕುನ್ವರ್ಜಿ ಬವಲಿಯಾ, ಪ್ರಫುಲ್ ಪನ್ಸೇರಿಯಾ, ರಿಷಿಕೇಶ್ ಪಟೇಲ್, ಪರಶೋತ್ತಮ್ ಸೋಲಂಕಿ, ಕನುಭಾಯಿ ದೇಸಾಯಿ ತಮ್ಮ ಸಚಿವ ಸ್ಥಾನ ಉಳಿಸಿಕೊಂಡಿದ್ದಾರೆ.

ಹೊಸ ಸಂಪುಟದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಒಬಿಸಿ ಸಮುದಾಯದ ಎಂಟು ಸಚಿವರು, ಪಾಟಿದಾರ್ ಸಮುದಾಯದ ಆರು ಮಂದಿ, ಬುಡಕಟ್ಟು ಸಮುದಾಯಗಳಿಂದ ನಾಲ್ಕು ಮಂದಿ, ಪರಿಶಿಷ್ಟ ಜಾತಿಗಳಿಂದ ಮೂವರು, ಕ್ಷತ್ರಿಯ ಸಮುದಾಯದ ಇಬ್ಬರು, ಬ್ರಾಹ್ಮಣ ಮತ್ತು ಜೈನ (ಲಘುಮತಿ) ಸಮುದಾಯಗಳಿಂದ ತಲಾ ಒಬ್ಬರು ಸಚಿವರಾಗಿ ಸ್ಥಾನ ಪಡೆದಿದ್ದಾರೆ. 
 
ಭೂಪೇಂದ್ರ ಪಟೇಲ್ ಸಂಪುಟದ ಎಲ್ಲ 16 ಸಚಿವರು ನಿನ್ನೆ ರಾಜೀನಾಮೆ ನೀಡಿದ್ದರು. ಗುಜರಾತ್ ವಿಧಾನಸಭೆ 182 ಸದಸ್ಯರ ಬಲವನ್ನು ಹೊಂದಿದ್ದು, ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಗರಿಷ್ಠ 27 ಸಚಿವರಿಗೆ ಅವಕಾಶ ನೀಡುತ್ತದೆ. ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರವು 2022ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಾತಿ ಲೆಕ್ಕಾಚಾರ ಅನುಸರಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ.

In a major political overhaul, the Gujarat BJP government has restructured its Cabinet, with Chief Minister Bhupendra Patel expanding his team to 25 ministers after the resignation of all 16 previous members.