ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ ದಾಳಿ ; ಶಸ್ತ್ರಾಸ್ತ್ರ ಬಿಟ್ಟು ಓಡಿದ ಸೈನಿಕರು, 58 ಪಾಕ್ ಯೋಧರು ಸಾವನ್ನಪ್ಪಿದ ಬಗ್ಗೆ ತಾಲಿಬಾನ್ ಹೇಳಿಕೆ, ಮುಂದುವರಿದ ಘರ್ಷಣೆ 

12-10-25 10:19 pm       HK News Desk   ದೇಶ - ವಿದೇಶ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚತೊಡಗಿದ್ದು ಪೂರ್ಣ ಪ್ರಮಾಣದ ಯುದ್ಧದ ರೀತಿ ಎರಡೂ ಕಡೆಯ ಸೇನೆಗಳು ಹೋರಾಟಕ್ಕೆ ನಿಂತಿವೆ. ಕಾಬೂಲ್ ದಾಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ನೇತೃತ್ವದ ಅಫ್ಘಾನ್ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಅಫ್ಘಾನ್-ಪಾಕಿಸ್ತಾನ ಗಡಿಯಾದ ಡುರಾಂಡ್ ಲೈನ್ ದಾಟಿ ಪಾಕಿಸ್ತಾನದ ಒಳಗಿನ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿವೆ.

ನವದೆಹಲಿ, ಅ.12 : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚತೊಡಗಿದ್ದು ಪೂರ್ಣ ಪ್ರಮಾಣದ ಯುದ್ಧದ ರೀತಿ ಎರಡೂ ಕಡೆಯ ಸೇನೆಗಳು ಹೋರಾಟಕ್ಕೆ ನಿಂತಿವೆ. ಕಾಬೂಲ್ ದಾಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ನೇತೃತ್ವದ ಅಫ್ಘಾನ್ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಅಫ್ಘಾನ್-ಪಾಕಿಸ್ತಾನ ಗಡಿಯಾದ ಡುರಾಂಡ್ ಲೈನ್ ದಾಟಿ ಪಾಕಿಸ್ತಾನದ ಒಳಗಿನ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿವೆ. 

ಅಫ್ಘಾನ್ ಪಡೆಗಳು ಏಕಕಾಲಕ್ಕೆ ದಾಳಿ ನಡೆಸಿದ್ದು ಪಾಕಿಸ್ತಾನದ ಏಳು ಸೇನಾ ಔಟ್‌ಪೋಸ್ಟ್‌ಗಳು ನಾಶವಾಗಿವೆ. ಹಲವು ಪೋಸ್ಟ್ ಗಳನ್ನು ಅಫ್ಘಾನ್ ಪಡೆಗಳು ವಶಪಡಿಸಿಕೊಂಡಿವೆ. ದಾಳಿ ಎಷ್ಟು ಅನಿರೀಕ್ಷಿತ ಮತ್ತು ಭೀಕರವಾಗಿತ್ತೆಂದರೆ ಪಾಕಿಸ್ತಾನಿ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪಲಾಯನ ಮಾಡುವಂತಾಗಿದೆ. ಈ ಕುರಿತ ವಿಡಿಯೋಗಳು ವೈರಲ್ ಆಗಿದ್ದು ಅದರಲ್ಲಿ ಅಲ್ಲಾಹು ಅಕ್ಬರ್ ಎಂದು ಪ್ರಾರ್ಥನೆ ಮಾಡುತ್ತಾ ಸೈನಿಕರು ಓಡುತ್ತಿದ್ದಾರೆ. ಪಾಕಿಸ್ತಾನದ ಸೈನಿಕರ ಗುಂಪು ನಿಂತಿದ್ದ ಜಾಗಕ್ಕೆ ಅಫ್ಘಾನ್ ದಾಳಿ ನಡೆಸಿದೆ. ದಾಳಿಯ ಹೊಡೆತಕ್ಕೆ ಪಾಕಿಸ್ತಾನಿ ಸೈನಿಕರು ಛಿದ್ರವಾಗಿದ್ದು ದೇಹಗಳು ಮೇಲಕ್ಕೆ ಹಾರಿ ಬಿದ್ದಿವೆ. ಇದುವರೆಗೂ ಪಾಕಿಸ್ತಾನದ 58 ಸೈನಿಕರನ್ನು ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. 

ಆಫ್ಘಾನ್ ಸೇನಾ ದಾಳಿಯ ನಂತರ ಪಾಕಿಸ್ತಾನಿ ಸೈನಿಕರು ಔಟ್ ಪೋಸ್ಟ್ ಬಿಟ್ಟು ಓಡಿಹೋದರು ಎಂದು ಹುರಿಯತ್ ರೇಡಿಯೋ ವರದಿ ಮಾಡಿದೆ. ಖೋಸ್ಟ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಬಿಟ್ಟು ಹೋದ ಶಸ್ತ್ರಗಳನ್ನು ಅಫ್ಘಾನ್ ಪಡೆಗಳು ಪರಿಶೀಲಿಸುತ್ತಿರುವ ವೀಡಿಯೋವನ್ನು ಹುರಿಯತ್ ರೇಡಿಯೋ ಪ್ರಸಾರ ಮಾಡಿದೆ. ಅಫ್ಘಾನ್ ಮಾಧ್ಯಮ ವರದಿಗಳ ಪ್ರಕಾರ, ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಖೋಸ್ಟ್, ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ಅಫ್ಘಾನ್ ಪಡೆಗಳು ದಾಳಿ ಮಾಡಿವೆ. ಕಾರ್ಯಾಚರಣೆ ಮಧ್ಯರಾತ್ರಿ 12 ಗಂಟೆಗೆ ಕೊನೆಗೊಂಡಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಇತ್ತೀಚಿನ ವರದಿಗಳು ಹೋರಾಟ ಇನ್ನೂ ಮುಂದುವರೆದಿದ್ದು ಪಾಕ್ ಸೇನೆಯು ಅಫ್ಘಾನಿಸ್ತಾನದ ಮೇಲೆ ಶೆಲ್ ದಾಳಿ ನಡೆಸುತ್ತಿದೆ.

Tensions between Afghanistan and Pakistan have escalated sharply, as Taliban-led Afghan forces last night allegedly crossed the Durand Line and attacked Pakistani military outposts in multiple border regions. According to statements from the Afghan side, the assaults destroyed seven outposts, captured several positions, and inflicted heavy losses on Pakistani troops.