Rashmika Mandanna, Vijay Deverakonda Marriage: ರಕ್ಷಿತ್‌ ಶೆಟ್ಟಿಗೆ ಕೈಕೊಟ್ಟು ಈಗ ವಿಜಯ್‌ ದೇವರಕೊಂಡ ಕೈ ಹಿಡಿದ ರಶ್ಮಿಕಾ ; ಗುಟ್ಟಾಗಿ ನಿಶ್ಚಿತಾರ್ಥ, ಮದುವೆ ಯಾವಾಗ ? 

04-10-25 03:11 pm       HK News Desk   ದೇಶ - ವಿದೇಶ

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ನಿನ್ನೆ ಮೊನ್ನೆಯದಲ್ಲ. ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಇದೀಗ ಇವರಿಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಹಸಮಣೆ ಏರಲಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್, ಅ 04 : ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ನಿನ್ನೆ ಮೊನ್ನೆಯದಲ್ಲ. ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಇದೀಗ ಇವರಿಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಹಸಮಣೆ ಏರಲಿದ್ದಾರೆ ಎಂದು ವರದಿಯಾಗಿದೆ.

ಗುಟ್ಟಾಗಿ ಎಂಗೇಜ್‌ಮೆಂಟ್?

ಹೌದು.. ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರು ಶುಕ್ರವಾರ (ಅ.3) ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ, ಟಾಲಿವುಡ್‌ನಲ್ಲಿ ದೀರ್ಘಕಾಲದಿಂದ ಅವರ ಡೇಟಿಂಗ್‌ ಬಗ್ಗೆ ಇದ್ದ ಊಹಾಪೋಹಗಳಿಗೆ ಒಂದು ಮಹತ್ವದ ತಿರುವು ನೀಡಿದೆ. ರಶ್ಮಿಕಾ ಆಗಲಿ, ಅಥವಾ ವಿಜಯ್‌ ದೇವರಕೊಂಡ ಆಗಲಿ, ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಇವರಿಬ್ಬರ ನಿಶ್ಚಿತಾರ್ಥವು ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ ಎಂದು ವರದಿಯಾಗಿದೆ.

Rashmika Mandanna and Vijay Deverakonda already engaged, to tie the knot  soon: Reports

Rashmika Mandanna, Vijay Deverakonda ENGAGED In Hyderabad? Fans Ecstatic As  Couple Set To Tie The Knot In February 2026

ಮದುವೆ ಯಾವಾಗ?

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಈ ನಿಶ್ಚಿತಾರ್ಥದ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಈ ಸುದ್ದಿಯು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ನಿಶ್ಚಿತಾರ್ಥ ಮುರಿದು ಬಿದ್ದಿತು!

ಈ ಮುನ್ನ ರಶ್ಮಿಕಾ ನಟ ರಕ್ಷಿತ್‌ ಶೆಟ್ಟಿ ಜೊತೆಗೆ ನಿಶ್ಚಿತಾರ್ಥವನ್ನ ಮುರಿದುಕೊಂಡಿದ್ದರು. ಇದೇ ಸಮಯದಲ್ಲಿ ʻಗೀತಾ ಗೋವಿಂದಂʼ ಚಿತ್ರದ ಸೆಟ್‌ನಲ್ಲಿ ವಿಜಯ್‌ ದೇವರಕೊಂಡ ಅವರನ್ನ ರಶ್ಮಿಕಾ ಭೇಟಿಯಾದರು.

Watch Geetha Govindam Full HD Movie Online on ZEE5

ರಶ್ಮಿಕಾ ಹಾಗೂ ವಿಜಯ್‌ ನಡುವಿನ ಸಂಬಂಧದ ಬಗ್ಗೆ ಚರ್ಚೆಯು ʻಡಿಯರ್‌ ಕಾಮ್ರೇಡ್‌ʼ ಚಿತ್ರದೊಂದಿಗೆ ಮತ್ತಷ್ಟು ತೀವ್ರಗೊಂಡಿತು. ಚಿತ್ರದಲ್ಲಿನ ಇವರಿಬ್ಬರ ಕೆಮಿಸ್ಟ್ರೀ ಪ್ರೇಕ್ಷಕರನ್ನ ಆಕರ್ಷಿಸಿತು. ಅಲ್ಲದೇ, ಇವರಿಬ್ಬರ ನಡುವಿನ ಲವ್‌ ಗಾಸಿಪ್‌ ಚರ್ಚೆಗೆ ಬಂದಿತು.

2020 ಮತ್ತು 2022ರ ನಡುವಿನ ಅವಧಿಯಲ್ಲಿ, ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಖಾಸಗಿ ರೆಸ್ಟೋರೆಂಟ್‌, ಏರ್‌ಪೋರ್ಟ್‌ ಮತ್ತು ರಜಾ ದಿನಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ಈ ವರ್ಷ ವಿಜಯ್‌ ದೇವರಕೊಂಡ ಜೊತೆಗೆ ಓಮನ್‌ನಲ್ಲಿ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಇದೀಗ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆಗೆ ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

Tollywood stars Rashmika Mandanna and Vijay Deverakonda, long rumored to be in love, have reportedly taken their relationship to the next level with a secret engagement in Hyderabad on October 3, attended by close family members. While neither actor has officially confirmed the news, reports suggest the couple is planning a wedding in February 2026. Rashmika had earlier broken off her engagement with actor Rakshit Shetty before meeting Vijay on the sets of Geetha Govindam.