ಬ್ರೇಕಿಂಗ್ ನ್ಯೂಸ್
29-09-25 10:52 pm HK News Desk ದೇಶ - ವಿದೇಶ
ಲಕ್ನೋ, ಸೆ.29 : ಪರಿಶಿಷ್ಟ ಜಾತಿಯ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು 'ಪವಾಡ ಚಿಕಿತ್ಸೆ' ಮೂಲಕ ಆಮಿಷ ಒಡ್ಡುತ್ತಿದ್ದ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಬಕ್ತೌರಿ ಖೇಡಾ ನಿವಾಸಿ ಮಲ್ಖಾನ್ (43) ಬಂಧಿತ ಆರೋಪಿ. ಎಫ್‌ಐಆರ್ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸ್ ತಂಡ ಪತ್ತೆಹಚ್ಚಿ ಬಂಧಿಸಿದೆ. ಆರೋಪಿ ಮಲ್ಖಾನ್ ತನ್ನ ಕೃಷಿ ಭೂಮಿಯಲ್ಲಿ ಹಾಲ್ ತರಹದ ಕಟ್ಟಡ ನಿರ್ಮಿಸಿಕೊಂಡಿದ್ದು ಅದನ್ನು ತಾತ್ಕಾಲಿಕ ಚರ್ಚ್ ಆಗಿ ಬಳಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪ್ರತಿ ಭಾನುವಾರ ಮತ್ತು ಗುರುವಾರ, ಅವನು ಪರಿಶಿಷ್ಟ ಜಾತಿಯ ಮಹಿಳೆಯರು ಮತ್ತು ಮಕ್ಕಳನ್ನು ಒಟ್ಟುಗೂಡಿಸಿ, ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿ ಪ್ರಾರ್ಥನೆಗೆ ಬರುವಂತೆ ಹೇಳುತ್ತಿದ್ದನು. ಈ ಕೂಟಗಳಲ್ಲಿ, ಭಾಗವಹಿಸುವವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದರು. ಪೊಲೀಸರು ಹೇಳುವಂತೆ, ಮಲ್ಖಾನ್ ಕೂಡ ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಂಡಿದ್ದು, ತನ್ನ ಮಕ್ಕಳು ಮತ್ತು ಸಂಬಂಧಿಕರ ಹೆಸರನ್ನು ಕ್ರಿಶ್ಚಿಯನ್ ಹೆಸರುಗಳಿಗೆ ಬದಲಾಯಿಸಿದ್ದಾನೆ. ಪರಿಶಿಷ್ಟ ಜಾತಿಯ ಸದಸ್ಯರನ್ನು ಸಂಪರ್ಕಿಸಲು 'ಯೇಸು ಚಂಗೈ ಸಭಾ' ಎಂಬ ವಾಟ್ಸಾಪ್ ಗ್ರೂಪ್ ನಡೆಸುತ್ತಿದ್ದ.
ಬಂಧನದ ವೇಳೆ ಬೈಬಲ್ ಬೋಧನೆಗಳ ಕುರಿತಾದ ಎರಡು ಪುಸ್ತಕಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ವಶಪಡಿಸಲಾಗಿದೆ. ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮತಾಂತರ ಜಾಲದ ಮಾಸ್ಟರ್ ಮೈಂಡ್ ಎನ್ನಲಾದ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಇಲಾಖೆಯಿಂದ 25,000 ರೂ. ನಗದು ಬಹುಮಾನ ನೀಡಲಾಗಿದೆ.
Uttar Pradesh police have arrested a man accused of luring Dalit communities into Christianity by promising “miracle cures.” The accused, identified as 43-year-old Malkhan of Baktauri Kheda, allegedly converted his farmland shed into a makeshift church where he gathered women and children for prayer sessions twice a week. During these meetings, he reportedly attempted to persuade attendees to convert. Police recovered religious texts and promotional material during the arrest.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 12:58 pm
HK News Staffer
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 01:23 pm
HK News Staffer
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am